AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತ ಜಯಂತಿ ದಿನ ನಾಟಿ ಕೋಳಿ ತಿಂದು ಆಂಜನೇಯಸ್ವಾಮಿ ಬರ್ತ್ ಸರ್ಟಿಫಿಕೇಟ್ ಕೇಳಿದ ಸಿದ್ದರಾಮಯ್ಯ

ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದ ಬಳಿಕ ತಮ್ಮ ಸ್ನೇಹಿತನ ಮನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಬಾಡೂಟ ಸವಿದರು. ಸ್ನೇಹಿತನ ಮನೆಯಲ್ಲಿ ಊಟಕ್ಕೆ ತೆರಳಿದ್ದ ವಿಪಕ್ಷ ನಾಯಕ ಮುದ್ದೆ, ನಾಟಿಕೋಳಿ ಸಾರು, ಚಿಕನ್ ಚಾಪ್ಸ್ ಸವಿದರು.

ಹನುಮಂತ ಜಯಂತಿ ದಿನ ನಾಟಿ ಕೋಳಿ ತಿಂದು ಆಂಜನೇಯಸ್ವಾಮಿ ಬರ್ತ್ ಸರ್ಟಿಫಿಕೇಟ್ ಕೇಳಿದ ಸಿದ್ದರಾಮಯ್ಯ
ಸ್ನೇಹಿತನ ಮನೆಯಲ್ಲಿ ಬಾಡೂಟ ಸವಿದ ಸಿದ್ದರಾಮಯ್ಯ
KUSHAL V
| Edited By: |

Updated on:Dec 27, 2020 | 9:32 PM

Share

ಮೈಸೂರು: ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದ ಬಳಿಕ ತಮ್ಮ ಸ್ನೇಹಿತನ ಮನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಬಾಡೂಟ ಸವಿದರು. ಸ್ನೇಹಿತನ ಮನೆಯಲ್ಲಿ ಊಟಕ್ಕೆ ತೆರಳಿದ್ದ ವಿಪಕ್ಷ ನಾಯಕ ಮುದ್ದೆ, ನಾಟಿಕೋಳಿ ಸಾರು, ಚಿಕನ್ ಚಾಪ್ಸ್ ಸವಿದರು.

ನಾಟಿ ಕೋಳಿ ಊಟ ಮಾಡವಾಗ ಸಾರ್ ಇಂದು ಹನುಮ ಜಯಂತಿ ಎಂದು ಬೆಂಬಲಿಗನೊಬ್ಬ ಹೇಳಿದ. ಅದಕ್ಕೆ ಹನುಮಂತ ಹುಟ್ಟಿದ ತಾರೀಕು ಗೊತ್ತಾ ಎಂದು ಸಿದ್ದು ಆತನಿಗೆ ಪ್ರಶ್ನೆ ಹಾಕಿದರು. ಅದಕ್ಕೆ ಆತ ಗೊತ್ತಿಲ್ಲ ಎಂದಿದ್ದಕೆ ಹಾಗೆಂದ ಮೇಲೆ ಹನುಮ ಜಯಂತಿ ಆಚರಣೆ ಮಾಡ್ಬಾರ್ದು ಎಂದು ಗದರಿದರು.

ಬಳಿಕ ಕೊಂಚ ರಿಲ್ಯಾಕ್ಸ್ ಮೂಡ್​ನಲ್ಲಿದ್ದ ಸಿದ್ದರಾಮಯ್ಯ ನಾನು‌ ಮೊದಲು ದಿನ‌ದ ಮೂರು ಹೊತ್ತೂ ನಾನ್‌ವೆಜ್ ತಿನ್ನುತ್ತಿದ್ದೆ. ಈಗ ಆಂಜಿಯೋಗ್ರಾಮ್ ಆದ ಮೇಲೆ ಕಡಿಮೆ‌ ಮಾಡಿದ್ದೇನೆ. ಈಗ ಬರೀ ಭಾನುವಾರ, ಬುಧವಾರ, ಶುಕ್ರವಾರ ನಾನ್‌ ವೆಜ್ ತಿನ್ನುತ್ತೀನಿ ಎಂದು ಹೇಳಿದರು.

‘ನಾನು ಸಿಕ್ಕಾಪಟ್ಟೆ ಸಿಗರೇಟ್‌ ಸೇದುತ್ತಿದ್ದೆ’ ಜೊತೆಗೆ, ನಾನು ಸಿಕ್ಕಾಪಟ್ಟೆ ಸಿಗರೇಟ್‌ ಸೇದುತ್ತಿದ್ದೆ. ನನ್ನ ಸ್ನೇಹಿತ ಮಹೇಶ್ ಫಾರಿನ್‌ನಿಂದ 2 ಬಂಡಲ್ ಸಿಗರೇಟ್​ ಸಹ ತಂದು ಕೊಟ್ಟಿದ್ದ. ಒಂದೇ ಟೈಂನಲ್ಲಿ ಕೂತ್ಕೊಂಡು ಎಲ್ಲಾ ಸೇದ್ಬಿಟ್ಟೆ ಎಂದು ಹೇಳಿದರು. ಆದರೆ, ಒಂದು ದಿನ ಟ್ರಿಪ್‌ ಹೋದಾಗ ಕೂತ್ಕೊಂಡು ಯೋಚನೆ ಮಾಡ್ದೆ. ನಾನು ಇಷ್ಟೊಂದು ಸಿಗರೇಟ್ ಸೇದುತ್ತೀನಿ, ನನಗೆ ಏನಾಗ್ಬೇಡ ಅಂತಾ. ಹಾಗಾಗಿ, ಒಂದು ವಾರ ಟ್ರಿಪ್‌ ಹೋಗಿ ಬರೋಷ್ಟರಲ್ಲಿ ಸಿಗರೇಟ್ ಸೇದೋದನ್ನೇ ಬಿಟ್ಬಿಟ್ಟೆ ಎಂದು ಹೇಳಿದರು.

ಈ ನಡುವೆ, ಸ್ನೇಹಿತನ ಮೊಮ್ಮಗನ ಜೊತೆ ಮಾತನಾಡಿದ ಸಿದ್ದರಾಮಯ್ಯ ನೀನು ಯಾವ ಮೀಡಿಯಂನಲ್ಲಿ ಓದುತ್ತಿದ್ದಿಯಾ ಎಂದು ಕೇಳಿದರು. ಅದಕ್ಕೆ ಆ ಪುಟ್ಟ ಪೋರ ನಾನು ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿದ್ದೇನೆ ಎಂದು ಹೇಳಿದಾಗ ನಕ್ಕ ಸಿದ್ದರಾಮಯ್ಯ ಇಂಗ್ಲೀಷ್ ಮೀಡಿಯಂನಲ್ಲಿ ಓದಿದವರೆಲ್ಲಾ ದೊಡ್ಡವರಾಗಲ್ಲ. ನಾನು ಕನ್ನಡ‌ ಮೀಡಿಯಂನಲ್ಲಿ ಓದಿದ್ದು ಎಂದು ನಗೆ ಚಟಾಕಿ ಹಾರಿಸಿದರು. ಬಳಿಕ ಮಗುವಿಗೆ ಕನ್ನಡದ ಶ್ರೇಷ್ಠತೆಯ ಬಗ್ಗೆ ಮಾಹಿತಿ ನೀಡಿದರು.

ಪಾಪ.. ದೇವೇಗೌಡರ ಬಗ್ಗೆ ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೀನಿ -ಸಿದ್ದರಾಮಯ್ಯ ಟಾಂಗ್​

Published On - 3:52 pm, Sun, 27 December 20

Follow Us
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ