Soumendu Mukherjee: 3 ತಿಂಗಳ ಸುದೀರ್ಘ ರಜೆ ಮುಗಿಸಿ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ವಾಪಾಸ್
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಕಬ್ಬನ್ ಪಾರ್ಕ್ ಹಾಗೂ ಸದಾಶಿವನಗರದಲ್ಲಿ ಪ್ರಕರಣ ದಾಖಲಾದ ಆರಂಭದ ದಿನದಿಂದಲೂ ಸೌಮೇಂದು ಚಟರ್ಜಿ ಈ ಕೇಸಿನ ತನಿಖೆಯ ಹೊಣೆ ಹೊತ್ತಿದ್ದರು.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಸೌಮೇಂದು ಚಟರ್ಜಿ 3 ತಿಂಗಳ ಸುದೀರ್ಘ ರಜೆ ಮುಗಿಸಿ ಕೆಲಸಕ್ಕೆ ವಾಪಾಸಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದು ಮುಖರ್ಜಿ ಕೋವಿಡ್ ಬಳಿಕ ಬೆನ್ನು ನೋವಿನ ಕಾರಣ ಹೇಳಿ ರಜೆ ಪಡೆದಿದ್ದರು. ಬಳಿಕ 2 ಬಾರಿ ಅವರ ರಜೆಯನ್ನು ವಿಸ್ತರಿಸಲಾಗಿತ್ತು.
ಅನಾರೋಗ್ಯದ ಕಾರಣ ನೀಡಿ ಮೇ 1ರಿಂದ ರಜೆ ಪಡೆದಿದ್ದ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ 90 ದಿನಗಳ ಸುದೀರ್ಘ ರಜೆ ಮುಗಿಸಿ ಕೆಲಸಕ್ಕೆ ಮರಳಿದ್ದಾರೆ. SIT ಮುಖ್ಯಸ್ಥರಿಲ್ಲದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವುದಕ್ಕೆ ಈ ಹಿಂದೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ರಮೇಶ್ ಜಾರಕಿಹೊಳಿ ಅವರ ವಿವಾದಿತ ಸಿಡಿ ಕೇಸ್ನ ತನಿಖೆ ಆರಂಭವಾಗುತ್ತಿದ್ದಂತೆ ರಜೆ ಮೇಲೆ ತೆರಳಿದ್ದ ಸೌಮೇಂದು ಮುಖರ್ಜಿ ಅವರ ನಡೆ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಕಬ್ಬನ್ ಪಾರ್ಕ್ ಹಾಗೂ ಸದಾಶಿವನಗರದಲ್ಲಿ ಪ್ರಕರಣ ದಾಖಲಾದ ಆರಂಭದ ದಿನದಿಂದಲೂ ಸೌಮೇಂದು ಚಟರ್ಜಿ ಈ ಕೇಸಿನ ತನಿಖೆಯ ಹೊಣೆ ಹೊತ್ತಿದ್ದರು. ಬಳಿಕ ಈ ಸಿಡಿ ಪ್ರಕರಣವನ್ನು ಎಸ್ಐಟಿಗೆ ವಹಿಸಿದಾಗ ಆ ತಂಡದ ನೇತೃತ್ವವನ್ನು ಕೂಡ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದು ಚಟರ್ಜಿಗೆ ವಹಿಸಲಾಗಿತ್ತು. ಸೌಮೇಂದು ಚಟರ್ಜಿ ಅನಾರೋಗ್ಯದ ಕಾರಣದಿಂದ ರಜೆ ಪಡೆದ ಬಳಿಕ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ನೀಡಲಾಗಿತ್ತು.
ಇದನ್ನೂ ಓದಿ: ವಿಡಿಯೋದಲ್ಲಿ ಯುವತಿ ಹೇಳುತ್ತಿರುವುದೆಲ್ಲಾ ಸುಳ್ಳು -ಟಿವಿ9ಗೆ SIT ಮುಖ್ಯಸ್ಥ ಸೌಮೇಂದು ಮುಖರ್ಜಿ ಪ್ರತಿಕ್ರಿಯೆ
ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ಮುಖ್ಯಸ್ಥರು ರಜೆಯಲ್ಲಿದ್ದಾರೆ ಆದರೆ ತನಿಖಾ ವರದಿ ಮಾಹಿತಿ ಸೋರಿಕೆಯಾಗಿದೆ -ಆರೋಪ
(SIT Head Soumendu Mukherjee who Investigating Ramesh Jarkiholi CD Case Returned after 90 Days of Vacation)
Published On - 11:55 am, Fri, 30 July 21