ಒಂದೇ ಗ್ರಾಮದ 16 ಮಂದಿಗೆ ಸೋಂಕು, ಮನವೊಲಿಸಿ ಚಿಕಿತ್ಸೆಗೆ ಕಳಿಸಿದ ಶಿರಾ ಶಾಸಕ
ಶಿರಾ ತಾಲೂಕಿನ ಗುಡ್ಡದಹಟ್ಟಿ ಗ್ರಾಮದಲ್ಲಿ 16 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ರೆ ನಾವ್ಯಾರು ಚಿಕಿತ್ಸೆ ಪಡೆಯಲ್ಲ ಎಂದು ಸೋಂಕಿತರು ಪಟ್ಟು ಹಿಡಿದಿದ್ದು ಸ್ಥಳಕ್ಕೆ ಶಾಸಕ ಭೇಟಿ ನೀಡಿ ಸೋಂಕಿತರ ಮನವೊಲಿಸಿದ್ದಾರೆ.
ತುಮಕೂರು: ಒಂದೇ ಗ್ರಾಮದಲ್ಲಿ ಬರೋಬ್ಬರಿ 16 ಜನರಿಗೆ ಕೊರೊನಾ ಸೋಂಕು ತಗುಲಿದ್ದು ಇಡೀ ಗ್ರಾಮ ಆತಂಕದ ಸುಳಿಯಲ್ಲಿ ಸಿಲುಕಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗುಡ್ಡದಹಟ್ಟಿ ಗ್ರಾಮದಲ್ಲಿ 16 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ರೆ ನಾವ್ಯಾರು ಚಿಕಿತ್ಸೆ ಪಡೆಯಲ್ಲ ಎಂದು ಸೋಂಕಿತರು ಪಟ್ಟು ಹಿಡಿದಿದ್ದು ಸ್ಥಳಕ್ಕೆ ಶಾಸಕ ಭೇಟಿ ನೀಡಿ ಸೋಂಕಿತರ ಮನವೊಲಿಸಿದ್ದಾರೆ.
ಒಂದೇ ಗ್ರಾಮದ 16 ಮಂದಿಗೆ ಸೋಂಕು ತಗುಲಿದ್ದು ಇವರೆಲ್ಲ ಚಿಕಿತ್ಸೆ ಪಡೆಯುಲು ನಿರಾಕರಿಸಿದ್ದರು. ಈ ವೇಳೆ ಇವರ ನಿರ್ಧಾರದಿಂದ ಇಡೀ ಗ್ರಾಮ ಒಂದು ಕ್ಷಣ ಆತಂಕಕ್ಕೆ ಒಳಗಾಗಿತ್ತು. ಇಡೀ ಗ್ರಾಮಕ್ಕೆ ಸೋಂಕು ತಗುಲಬಹುದು ದಯವಿಟ್ಟು ಚಿಕಿತ್ಸೆ ಪಡೆಯಿರಿ ಎಂದು ಗ್ರಾಮಸ್ಥರು ಅಂಗಾಚಿದ್ರೂ ಸೋಂಕಿತರು ಮಾತ್ರ ತಮ್ಮ ನಿರ್ಧಾರ ಬದಲಾಯಿಸಿರಲಿಲ್ಲ. ಬಳಿಕ ಶಿರಾ ಶಾಸಕ ಡಾ.ರಾಜೇಶ್ ಗೌಡರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.
ಮಾಹಿತಿ ತಿಳಿದ ತಕ್ಷಣ ಆಂಬ್ಯುಲೆನ್ಸ್ ಸಮೇತ ಸ್ವತಃ ವೈದ್ಯರಾಗಿರೋ ಶಾಸಕ ಡಾ.ರಾಜೇಶ್ ಗೌಡ ಗ್ರಾಮಕ್ಕೆ ಭೇಟಿ ನೀಡಿ ಸೋಂಕಿತರ ಮನವೊಲಿಸಲು ಪ್ರಯತ್ನಿಸಿದ್ದಾರೆ. ನಿಮ್ಮಿಂದ ಇಡೀ ಹಳ್ಳಿಗೆ ಸೋಂಕು ತಗುಲಲಿದೆ. ಚಿಕಿತ್ಸೆ ಪಡೆಯಿರಿ ನಿಮ್ಮ ಜೊತೆ ನಾವಿದ್ದೇವೆ, ನಿಮಗೇನೂ ಆಗಲ್ಲ ಎಂದು ಮನವಿ ಮಾಡಿದ್ದಾರೆ. ಬಳಿಕ ಶಾಸಕರ ಮನವೊಲಿಕೆಯಿಂದ ಆಸ್ಪತ್ರೆಗೆ ಹೋಗಲು ಸೋಂಕಿತರು ಒಪ್ಪಿಕೊಂಡಿದ್ದು ಶಿರಾದ ಕೊವಿಡ್ ಸೆಂಟರ್ನಲ್ಲಿ ದಾಖಲಿಸಲಾಗಿದೆ. ಬಳಿಕ ಗ್ರಾಮದಲ್ಲೆಡೆ ಓಡಾಡಿ ಶಾಸಕರು ಅರಿವು ಮೂಡಿಸಿದ್ದಾರೆ.
ಇನ್ನು ರಾಯಚೂರು ನಗರಸಭೆಯ 6 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ನಗರಸಭೆ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.
ಇದನ್ನೂ ಓದಿ: ಜಿಮೇಲ್ ಅಕೌಂಟ್ನ ಪಾಸ್ವರ್ಡ್ ರೀಸೆಟ್ ಮಾಡೋದು ಹೇಗೆಂದು ಗೂಗಲ್ ಸಿಇಒ ಸುಂದರ್ ಪಿಚೈಗೆ ಟ್ವೀಟ್
Published On - 12:34 pm, Fri, 30 April 21