ಸಿಎಂ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣ ರೌಡಿಶೀಟರ್: 44 ಕೇಸ್​ಗಳ ದಾಖಲೆ ರಿಲೀಸ್ ಮಾಡಿದ ಲಕ್ಷ್ಮಣ​

| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2024 | 3:11 PM

ಮುಡಾ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಜಕೀಯ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಸಿಎಂ ಪತ್ನಿ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅಧಿಕೃತ ರೌಡಿಶೀಟರ್​ ಎಂದು ​ಕಾಂಗ್ರೆಸ್​ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ 44 ಕೇಸ್​​ಗಳಿವೆ ಎಂದಿದ್ದಾರೆ.

ಸಿಎಂ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣ ರೌಡಿಶೀಟರ್: 44 ಕೇಸ್​ಗಳ ದಾಖಲೆ ರಿಲೀಸ್ ಮಾಡಿದ ಲಕ್ಷ್ಮಣ​
ಸಿಎಂ ವಿರುದ್ಧ ದೂರು ನೀಡಿದ ಸ್ನೇಹಮಯಿ ಕೃಷ್ಣ ರೌಡಿಶೀಟರ್: 44 ಕೇಸ್​ಗಳ ದಾಖಲೆ ರಿಲೀಸ್ ಮಾಡಿದ ಲಕ್ಷ್ಮಣ​
Follow us on

ಮೈಸೂರು, ಆಗಸ್ಟ್​ 28: ಮುಡಾ ಸೈಟ್ ಹಂಚಿಕೆ​ ಕುರಿತು ರಾಜ್ಯಪಾಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ದೂರು ನೀಡಿದ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅಧಿಕೃತ ರೌಡಿಶೀಟರ್​ ಎಂದು ​ಕಾಂಗ್ರೆಸ್​ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಿಂದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ರೌಡಿಶೀಟರ್. ಅವರ ವಿರುದ್ಧ 44 ಕೇಸ್​​ಗಳಿವೆ ಎಂದಿದ್ದಾರೆ.

ಬ್ಲ್ಯಾಕ್​ಮೇಲ್, ಕೊಲೆ, ಭೂ ಅವ್ಯವಹಾರ ಕೇಸ್ ದಾಖಲಾಗಿವೆ. ಸ್ನೇಹಮಯಿ ಕೃಷ್ಣ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದರೆ ಮುಡಾ ಸೀಲ್​​ಗಳು, ದಾಖಲೆಗಳು ಸಿಗುತ್ತವೆ. ಈ ವೇಳೆ ಲಕ್ಷ್ಮಣ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ, ನಕಲಿ ಸಹಿ ಆರೋಪ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು

ಮುಖ್ಯಮಂತ್ರಿ ಸ್ಪಷ್ಟೀಕರಣ ಕೊಟ್ಟ ದಾಖಲೆಯಲ್ಲಿ ಸಿಎಂ ಪತ್ನಿ ಸಹಿ ನಕಲಿ ಅಂತಾ ಸ್ನೇಹಮಹಿ ಕೃಷ್ಣ ಆರೋಪಿಸುತ್ತಾರೆ. ಸ್ನೇಹಮಹಿ ಕೃಷ್ಣ ಏನೂ ಎಫ್​ಎಸ್​​ಎಲ್​ ಅಧಿಕಾರಿನಾ? ಅವರ ವೃತಿಪರ ಬ್ಲಾಕ್ ಮೇಲರ್ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ವಿಡಿಯೋ ಸಮೇತ ‘ವೈಟ್ನರ್‌’ ಹಿಂದಿರುವ ಅಸಲಿ ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಸ್ನೇಹಮಹಿ ಕೃಷ್ಣನ ಕಡೆಯವರು ನನ್ನ ಬಳಿ ಬಂದು 100 ಕೋಟಿ ರೂ ಕೊಟ್ಟರೆ ಅವರು ಸರಿ ಹೋಗಬಹುದು ಎಂದು ಕೇಳಿದ್ದಾರೆ. ನನ್ನ ಜೊತೆ ಆ ಡೀಲ್​​ಗೆ ಬಂದ ವ್ಯಕ್ತಿಯನ್ನು ಇಷ್ಟರಲ್ಲೇ ಸುದ್ದಿಗೋಷ್ಠಿಗೆ ಕರೆದು ಕೊಂಡು ಬರುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ಪತ್ನಿ ವಿರುದ್ಧ ದೂರು ನೀಡಿದ ಸ್ನೇಹಮಹಿ ಕೃಷ್ಣ

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಹಿ ನಕಲಿ ವಿಚಾರವಾಗಿ ಇದೀಗ ಸಿಎಂ ಪತ್ನಿ ವಿರುದ್ಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಸ್ನೇಹಮಹಿ ಕೃಷ್ಣ ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶದ ಬಗ್ಗೆ ದೂರು ನೀಡಿದ್ದಾರೆ. ಪಾರ್ವತಿ ಅವರು ಬರೆದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರ ಕಡತಕ್ಕೆ ಸೇರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:50 pm, Wed, 28 August 24