ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ: ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ

ಮುಡಾ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸಿ ಬಂದಿದ್ದಾರೆ. ಇನ್ನು ಸಿದ್ದರಾಮಯ್ಯ ಪ್ರತಿಬಾರಿಯೂ ತಾವು ಹೋದಲ್ಲಿ ಬಂದಲ್ಲಿ ರಾಜಕೀಯ ಜೀವನದನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲವೆಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ಪರಿಷತ್​ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್​ ಪ್ರತಿಕ್ರಿಯಿಸಿದ್ದು, ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ, ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ ಎಂದು ವ್ಯಂಗ್ಯವಾಡಿದ್ದಾರೆ.

ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ: ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ
ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ, ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2024 | 2:59 PM

ಮೈಸೂರು, ಆಗಸ್ಟ್​ 25: ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ ಎಂದು ವಿಧಾನಪರಿಷತ್​ನ ಬಿಜೆಪಿ ಸದಸ್ಯ ಹೆಚ್​​ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. 40 ವರ್ಷದ ರಾಜಕೀಯ ಜೀವನದನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಎಲ್ಲಾ ಕಡೆ ಹೇಳಿದ್ದಾರೆ. ಈ ವಿಚಾರವಾಗಿ ಇದೀಗ ವಿಶ್ವನಾಥ್​​ ವ್ಯಂಗ್ಯವಾಡಿದ್ದಾರೆ.

ಭೈರತಿ ಸುರೇಶ್ ಹೆಲಿಕಾಪ್ಟರ್​ನಲ್ಲಿ ಬಂದು ಎಲ್ಲಾ ಮುಡಾ ಫೈಲ್ ಹೊತ್ತೊಯ್ದಿದ್ದಾರೆ

ನಗರದಲ್ಲಿ ಜಲದರ್ಶಿನಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್​ನಲ್ಲಿ ಬಂದು ಎಲ್ಲಾ ಮುಡಾ ಫೈಲ್ ಹೊತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಇಷ್ಟೊಂದು ಭದ್ರತೆ ಏಕೆ. ಮುಡಾದಲ್ಲಿ ಪ್ರತಿ ತಿಂಗಳು ಸಂಬಳ ನೀಡಲು 5 ಕೋಟಿ ರೂ. ಹಣ ಬೇಕು. ಆದರೆ 2 ತಿಂಗಳಿಂದ ಭದ್ರತೆಗಾಗಿ 10 ಕೋಟಿ ರೂ. ಹಣ ವೆಚ್ಚಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ಜತೆ ಏನೇನು ಚರ್ಚೆ ನಡೆಯಿತು? ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಿಷ್ಟು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೇ ಕೆಲಸ ನಡೀತಿಲ್ಲ. ಮುಡಾ ಅಕ್ರಮದ ತನಿಖೆಗೆ ಏಕವ್ಯಕ್ತಿ ತನಿಖಾ ಆಯೋಗ ರಚಿಸಿದ್ದಾರೆ. ಆ ಒನ್​ಮ್ಯಾನ್ ಕಮಿಷನ್ ಕುಮಾರಕೃಪಾದಿಂದ ಆಪರೇಟ್ ಆಗುತ್ತಿದೆ. ಒನ್ ಮ್ಯಾನ್ ಕಮಿಷನ್​ನ ಮೇಜು, ಕುರ್ಚಿಗಾಗಿ 1.5 ಕೋಟಿ ರೂ. ವೆಚ್ಚ ಖರ್ಚು ಆಗಿದೆ. ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ಎಂದಿದ್ದಾರೆ.

3667 ಎಕರೆ ಭೂಮಿ ಏಕಪಕ್ಷೀಯವಾಗಿ ಒಂದು ಎಕರೆ ಭೂಮಿಗೆ 1.15 ಲಕ್ಷ ರೂಪಾಯಿಯಂತೆ ಮಾರಿದ್ದಾರೆ. ಜಿಂದಾಲ್​ಗೆ ನೀಡಿದ ಭೂಮಿಯಲ್ಲಿ ಬೆಲೆಬಾಳುವ ಖನಿಜ ನಿಕ್ಷೇಪವಿದೆ. ಶೇ.62ರಷ್ಟು ಖನಿಜ ನಿಕ್ಷೇಪವಿರುವ ಭೂಮಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಜಿಂದಾಲ್​ಗೆ ನೀಡಿರುವ 3667 ಎಕರೆ ಭೂಮಿಗೆ ಬೆಲೆ ಕಟ್ಟಲಾಗಲ್ಲ. 2017ರಲ್ಲಿ ಕಾನೂನು ಇಲಾಖೆ ನೀಡಿದ್ದ ಸಲಹೆ ನಿರ್ಲಕ್ಷಿಸಿದ್ದಾರೆ. ಭೂಮಿ ದರ, ಭೂಮಿ ಒಳಗಿರುವ ಅದಿರಿನ ಪ್ರಮಾಣ ಪರಿಗಣಿಸಿ ಜಮೀನು ಮಾರಬೇಕೆಂದು ಕಾನೂನು ಇಲಾಖೆ ವರದಿ ನೀಡಿದೆ ಎಂದು ತಿಳಿಸಿದರು.

ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿ ಪರಭಾರೆ ಮಾಡಿದ್ದಾರೆ. ಜಿಂದಾಲ್​ಗೆ 3667 ಎಕರೆ ಭೂಮಿಯನ್ನು 52 ಕೋಟಿಗೆ ಮಾರಿದ್ದಾರೆ. ಜನವಿರೋಧಿ ನೀತಿ ಬಗ್ಗೆ ಸಿದ್ದರಾಮಯ್ಯನವರು ಮಾತನಾಡಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತೆ. ಸಿಎಂ ಸಿದ್ದರಾಮಯ್ಯ 14 ಸೈಟ್​ಗೆ 62 ಕೋಟಿ ರೂ. ಆಗುತ್ತೆಂದು ಹೇಳುತ್ತಾರೆ. 3667 ಎಕರೆ ಭೂಮಿಯನ್ನು 52 ಕೋಟಿಗೆ ಮಾರಿದ್ದು ಯಾವ ನ್ಯಾಯ. ಜಿಂದಾಲ್​ಗೆ 3667 ಎಕರೆ ಭೂಮಿ ಮಾರಾಟ ಸಂಶಯಕ್ಕೆ ಎಡೆಮಾಡಿದೆ. ಇದನ್ನು ಜಂಟಿ ಸದನ ಸಮಿತಿ ಮುಂದಿಡುವಂತೆ ನಾನು ಒತ್ತಾಯಿಸಿದ್ದೇನೆ. ಜಿಂದಾಲ್​ಗೆ ಭೂಮಿ ಮಾರಾಟ ವಿಚಾರದಲ್ಲಿ ಆತುರ ಬೇಡ, ಜನರ ಆಸ್ತಿ. ರಾಜ್ಯ ಸರ್ಕಾರ ಜಂಟಿ ಸದನ ಸಮಿತಿ ಮುಂದಿಟ್ಟು ನಿರ್ಧಾರ ಕೈಗೊಳ್ಳಲಿ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲ ನೀಡಿದ್ದರೂ ಮುಂದಿದೆ ಬದಲಾವಣೆ? ಕಾಂಗ್ರೆಸ್ ಉನ್ನತ ಮೂಲಗಳಿಂದ ಸುಳಿವು

ಪ್ರಾಸಿಕ್ಯೂಷನ್​ಗೆ​ ಅನುಮತಿ ನೀಡಿದ್ದನ್ನು ಸಾಹಿತಿಗಳು ಖಂಡಿಸಿದ ವಿಚಾರವಾಗಿ ಮಾತನಾಡಿದ್ದು, ಇವರೆಲ್ಲ ಸರ್ಕಾರಿ ಸಾಹಿತಿಗಳು, ಸರ್ಕಾರದ ಮರ್ಜಿನಲ್ಲಿ‌ರುವ ಸಾಹಿತಿಗಳು. ಈಗ ಚಿಂತಕರು ಎಲ್ಲಿದ್ದಾರೆ, ತಪ್ಪನ್ನು ತಪ್ಪು ಎಂದು ಹೇಳಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.