ಪೋಷಕರಿಗೆ ಕ್ಷಮೆ ಕೋರಿ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ, ದೇಹದ ಅರ್ಧ ಭಾಗಕ್ಕೆ ಹುಡುಕಾಟ

ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕ್ಷುಲ್ಲಕ ಕಾರಣಕ್ಕೆ ಯುವಕ-ಯುವತಿಯರು ಜೀವ ತೊರೆಯುವ ನಿರ್ಧಾರಕ್ಕೆ ಬರುತ್ತಿದ್ದು, ಇದೀಗ ಯುವಕನೊಬ್ಬ ಇಎಂಐ ಜೊತೆಗೆ ಸಾಲಗಾರರ ಕಿರುಕುಳಕ್ಕೆ ಬೇಸತ್ತು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಎಪಿಎಂಸಿ ಬಳಿ ನಡೆದಿದೆ.

ಪೋಷಕರಿಗೆ ಕ್ಷಮೆ ಕೋರಿ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ, ದೇಹದ ಅರ್ಧ ಭಾಗಕ್ಕೆ ಹುಡುಕಾಟ
ಮೃತ ಯುವಕ ವಿಕ್ರಂ ಸಿಂಹ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 28, 2024 | 2:58 PM

ಬೆಂಗಳೂರು, ಆ.28: ಸಾಲಕ್ಕೆ ಹೆದರಿದ ಯುವಕನೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ(Dasanapura) ಎಪಿಎಂಸಿ ಬಳಿ ನಡೆದಿದೆ. ದಾಸನಪುರದ ವಿಕ್ರಂ ಸಿಂಹ(28) ಮೃತ ವ್ಯಕ್ತಿ. ಅಪ್ಪ, ಅಮ್ಮನಿಗೆ ಕ್ಷಮೆ ಕೋರಿ ಡೆತ್ ನೋಟ್ ಬರೆದಿಟ್ಟು ಕೊನೆಯುಸಿರೆಳೆದಿದ್ದಾನೆ. ಇದೀಗ ಅರ್ಧದಷ್ಟು ಭಾಗ ಮಾತ್ರ ಪತ್ತೆಯಾಗಿದ್ದು, ಇನ್ನೂಳಿದ ಅರ್ಧ ಭಾಗಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಇನ್ನು ಮೃತ ಯುವಕ ವಿಕ್ರಂ ಸಿಂಹ, ಐಡಿಎಫ್​ಸಿ ಬ್ಯಾಂಕ್​ನಲ್ಲಿ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಮಾಡಿದ ಸಾಲಕ್ಕೆ ಬ್ಯಾಂಕ್ ಇಎಂಐ ಜೊತೆಗೆ ಸಾಲಗಾರರ ಕಿರುಕುಳದಿಂದಾಗಿ ಬೇಸತ್ತಿದ್ದ ವಿಕ್ರಂ, ಇಂದು(ಬುಧವಾರ) ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರಿನ್ಸಿಪಾಲ್ ಬೈದರೆಂದು ಶಾಲೆ ಮೇಲಿಂದಲೇ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಚಿತ್ರದುರ್ಗ: ತಾಲೂಕಿನಲ್ಲಿರುವ ಬೆಟ್ಟದ ನಾಗೇನಹಳ್ಳಿ ಬಳಿ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು 35 ವರ್ಷದ ಭೀಮಸಮುದ್ರ ಗ್ರಾಮದ ನಿತಿನ್ ತೋಟದ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಶರಣಾದ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಚಿತ್ರದುರ್ಗ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಟಾಟಾ ಏಸ್ ವಾಹನಕ್ಕೆ ಲಾರಿ ಡಿಕ್ಕಿ; ಓರ್ವ ಮಹಿಳೆ ಸಾವು, ಐವರ ಸ್ಥಿತಿ ಗಂಭೀರ

ಧಾರವಾಡ: ಕಲಘಟಗಿಯ ತಡಸ ಕ್ರಾಸ್​​ ಬಳಿ ಟಾಟಾ ಏಸ್​ಗೆ ಲಾರಿ ಡಿಕ್ಕಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದರೆ, ಐವರ ಸ್ಥಿತಿ ಗಂಭೀರವಾದ ಘಟನೆ ನಡೆದಿದೆ. ಬಸಮ್ಮ(38) ಮೃತ ರ್ದುದೈವಿ. ಗಂಭೀರ ಗಾಯಗೊಂಡ ಐವರು ಮಹಿಳೆಯರಿಗೆ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರೆಲ್ಲರೂ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Wed, 28 August 24