ಶಿವಮೊಗ್ಗ: ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣು

ಮೀಟರ್ ಬಡ್ಡಿ ಟಾರ್ಚರ್​ಗೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ನಿನ್ನೆ(ಆ.23) ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಅದೇ ಬಡಾವಣೆಯ ಆರನೇ ವಾರ್ಡ್​ನಲ್ಲಿ ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿವಮೊಗ್ಗ: ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣು
ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣು
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 24, 2024 | 6:08 PM

ಶಿವಮೊಗ್ಗ, ಆ.24: ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಭದ್ರಾವತಿ (Bhadravathi) ನಗರದ ಪೇಪರ್ ಟೌನ್ ಬಡಾವಣೆಯ ಆರನೇ ವಾರ್ಡ್​ನಲ್ಲಿ ನಡೆದಿದೆ. ಪ್ರದೀಪ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಆನ್ ಲೈನ್​​ನಲ್ಲಿ ಒನ್ ಟು ಡಬಲ್ ಹಣ ಆಗುತ್ತದೆ ಎಂದು ನಂಬಿ 91 ಸಾವಿರ ರೂಪಾಯಿ ಸಾಲ ಮಾಡಿ ಹಣ ತೊಡಗಿಸಿ ಮೋಸ ಹೋಗಿದ್ದ. ಹಣ ಪಾವಸ್ ಬಾರದ ಹಿನ್ನಲೆಯಲ್ಲಿ ಮನನೊಂದು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಇನ್ನು ಇತ ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯ ಶಾಹಿ ಎಕ್ಸ್ಪೋರ್ಟ್ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡಿಕೊಂಡಿದ್ದ. ಆನ್ ಲೈನ್​ ಆ್ಯಪ್​​ಗಳನ್ನು ನಂಬಿ ಮೋಸ ಹೋಗಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀಟರ್ ಬಡ್ಡಿ ಟಾರ್ಚರ್​ಗೆ ಯುವಕನೊಬ್ಬ ನೇಣಿಗೆ ಶರಣು

ಇನ್ನು ನಿನ್ನೆಯಷ್ಟೇ ಭದ್ರಾವತಿಯ ಪೇಪರ್ ಟೌನ್ ಬಡಾವಣೆಯ ಸ್ಟಿವನ್ (24) ಎಂಬಾತ ಮೀಟರ್ ಬಡ್ಡಿ ಟಾರ್ಚರ್​ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ. ಮೃತನ ತಂದೆ ಮಾಡಿದ್ದ ಸಾಲಕ್ಕೆ ಹಣ ಪಡೆದು, ಬಳಿಕ ಮೀಟರ್ ಬಡ್ಡಿ ಕಟ್ಟಲು ಆಗದೇ ಪರದಾಡುತ್ತಿದ್ದರು. ಇದೇ ಮೀಟರ್ ಬಡ್ಡಿ ಟಾರ್ಚರ್​ಗೆ ಸ್ಟಿವನ್ ನೇಣಿಗೆ ಶರಣಾಗಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಯುವಕ ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಪ್ರಿನ್ಸಿಪಾಲ್ ಬೈದರೆಂದು ಶಾಲೆ ಮೇಲಿಂದಲೇ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಹೊಸಪೇಟೆಯಲ್ಲಿ ಚರಂಡಿಗೆ ಬಿದ್ದು 4 ವರ್ಷದ ಮಗು ಸಾವು

ವಿಜಯನಗರ: ಜಿಲ್ಲೆಯ ಹೊಸಪೇಟೆಯ ಅನಂತಶಯನ ಗುಡಿ ಬಡಾವಣೆಯಲ್ಲಿ ಚರಂಡಿಗೆ ಬಿದ್ದು 4 ವರ್ಷದ ಮಗು ಸಾವನ್ನಪ್ಪಿದ್ದಾನೆ. ಜೆ.ವಿರಾಟ್(4) ಮೃತ ಮಗು. ಮನೆ ಬಳಿ ಆಟವಾಡ್ತಿದ್ದಾಗ ಚರಂಡಿಗೆ ಬಿದ್ದು ಅಸ್ವಸ್ಥಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಇತ್ತ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಹೆಚ್.ಆರ್.ಗವಿಯಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜೊತೆಗೆ ತಕ್ಷಣ ಚರಂಡಿಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sat, 24 August 24