ಅತೃಪ್ತ ಬಿಜೆಪಿ ನಾಯಾಕರ‍್ಯಾರೂ ಕಾಂಗ್ರೆಸ್ ಸೇರುವ ಬಗ್ಗೆ ಮಾತಾಡಿಲ್ಲ, ಬಂದರೆ ಅವರಿಗೆ ಸ್ವಾಗತ: ಸತೀಶ್ ಜಾರರಕಿಹೊಳಿ

ಅತೃಪ್ತ ಬಿಜೆಪಿ ನಾಯಾಕರ‍್ಯಾರೂ ಕಾಂಗ್ರೆಸ್ ಸೇರುವ ಬಗ್ಗೆ ಮಾತಾಡಿಲ್ಲ, ಬಂದರೆ ಅವರಿಗೆ ಸ್ವಾಗತ: ಸತೀಶ್ ಜಾರರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 18, 2024 | 7:10 PM

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ 15 ಸೀಟು ಸಿಕ್ಕೇ ಸಿಗುತ್ತವೆ ಎಂದ ಸತೀಶ್ ಜಾರಕಿಹೊಳಿ, ಬೇರೆಯವರ ಹಾಗೆ ತಾನು ಎಲ್ಲ 28 ಸ್ಥಾನ ಕಾಂಗ್ರೆಸ್ ನಾವೇ ಗೆಲ್ಲುತ್ತೇವೆ ಹೇಳಲ್ಲ, ಹಾಗೆ ಹೇಳೋದು ಸುಲಭ ಆದರೆ ವಾಸ್ತವಾಂಶವನ್ನು ಕಡೆಗಣಿಸಬಾರದು, ಕಾಂಗ್ರೆಸ್ ಕನಿಷ್ಟ 15 ಮತ್ತು ಗರಿಷ್ಟ 20 ಸ್ಥಾನ ಸಿಗಲಿವೆ ಎಂದರು.

ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly polls) ಅನುಭವಿಸಿದ ಸೋಲಿನಿಂದ ಬಿಜೆಪಿ (BJP) ಪಾಠ ಕಲಿತಿಲ್ಲ, ಯಾಕೆಂದರೆ ಆಗ ಆಗ ನಿರ್ಮಾಣವಾಗಿದ್ದ ಸ್ಥಿತಿಯೇ ಈಗಲೂ ನಿರ್ಮಾಣವಾಗಿದೆ, ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ, ಅದನ್ನ ಬಿಜೆಪಿ ನಾಯಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಆಗ ಮಾಡಿದ ತಪ್ಪನ್ನೇ ಈಗಲೂ ಮಾಡುತ್ತಿದ್ದಾರೆ, ಇದು ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ನೆರವಾಗಲಿದೆ ಎಂದು ಹೇಳಿದರು. ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಅದು ಸಿಗದ ಕಾರಣ ತೀವ್ರವಾಗಿ ಬೇಸರಗೊಂಡು ಬಂಡಾಯ ಪ್ರವೃತ್ತಿ ಪ್ರದರ್ಶಿಸುತ್ತಿರುವುದು ನಿಜವಾದರೂ, ಇದುವರೆಗೆ ಯಾರೂ ಕಾಂಗ್ರೆಸ್ ಸೇರುವ ಪ್ರಯತ್ನಕ್ಕೆ ಮುಂದಾಗಿಲ್ಲ, ಆದರೆ ಬರುವವರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ 15 ಸೀಟು ಸಿಕ್ಕೇ ಸಿಗುತ್ತವೆ ಎಂದ ಸತೀಶ್ ಜಾರಕಿಹೊಳಿ, ಬೇರೆಯವರ ಹಾಗೆ ತಾನು ಎಲ್ಲ 28 ಸ್ಥಾನ ಕಾಂಗ್ರೆಸ್ ನಾವೇ ಗೆಲ್ಲುತ್ತೇವೆ ಹೇಳಲ್ಲ, ಹಾಗೆ ಹೇಳೋದು ಸುಲಭ ಆದರೆ ವಾಸ್ತವಾಂಶವನ್ನು ಕಡೆಗಣಿಸಬಾರದು, ಕಾಂಗ್ರೆಸ್ ಕನಿಷ್ಟ 15 ಮತ್ತು ಗರಿಷ್ಟ 20 ಸ್ಥಾನ ಸಿಗಲಿವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪುತ್ರಿ ಪ್ರಿಯಾಂಕಾ ಹೆಸರು ಚರ್ಚೆ; ಸತೀಶ್ ಜಾರಕಿಹೊಳಿ ಹೇಳಿದ್ದೇನು?