AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿನಿಂದ ಮೃತಪಟ್ಟ ಅಪ್ಪ; ದೂರದಲ್ಲೇ ನಿಂತು, ಆ್ಯಂಬುಲೆನ್ಸ್ ಚಾಲಕನಿಗೆ ಹಣ ನೀಡಿ ಅಂತ್ಯಕ್ರಿಯೆ ಮಾಡಿಸಿದ ಮಗ

ಪಾಸಿಟಿವ್ ಬಂದು ಮೃತಪಟ್ಟಿದ್ದ ತಂದೆಯ ಅಂತ್ಯಸಂಸ್ಕಾರದಿಂದ ಹಿಂದೆ ಸರಿದ ಮಗ, ಆ್ಯಂಬುಲೆನ್ಸ್ ಚಾಲಕನಿಗೆ 10 ಸಾವಿರ ರೂಪಾಯಿ ಹಣ ನೀಡಿ ಅಂತಿಮ ಸಂಸ್ಕಾರ ಮಾಡಿಸಿದ್ದಾರೆ. ಬಳಿಕ ಅಂತ್ಯಕ್ರಿಯೆಯನ್ನು ದೂರದಿಂದಲೇ ನಿಂತು ವೀಕ್ಷಿಸಿ ವಾಪಾಸಾಗಿದ್ದಾರೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ಅಪ್ಪ; ದೂರದಲ್ಲೇ ನಿಂತು, ಆ್ಯಂಬುಲೆನ್ಸ್ ಚಾಲಕನಿಗೆ ಹಣ ನೀಡಿ ಅಂತ್ಯಕ್ರಿಯೆ ಮಾಡಿಸಿದ ಮಗ
ಬೆಂಗಳೂರಿನ ಚಿತಾಗಾರಗಳ ಎದುರು ಶವಗಳನ್ನು ಹೊತ್ತ ಆಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿವೆ.
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Apr 17, 2021 | 3:05 PM

Share

ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು ಜನರಲ್ಲಿ ಮತ್ತೊಂದು ಸುತ್ತಿನ ಭಯ ಹುಟ್ಟುಹಾಕಿದೆ. ದಿನೇ ದಿನೇ ಚಿಕಿತ್ಸೆ ಫಲಕಾರಿಯಾಗದೇ ಮೃತಪಡುತ್ತಿರುವವರ ಸಂಖ್ಯೆಯೂ ಏರುತ್ತಿದ್ದು ಹಲವೆಡೆ ಅಂತ್ಯಸಂಸ್ಕಾರ ನಡೆಸುವುದಕ್ಕೂ ಪರದಾಡಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರ ನಡೆಸಲು ಸ್ವಂತಃ ಮಗನೇ ಹಿಂದೇಟು ಹಾಕಿರುವ ದಾರುಣ ಪ್ರಕರಣ ವರದಿಯಾಗಿದೆ. ಕೊರೊನಾದಿಂದ ಕೊನೆಯುಸಿರೆಳೆದ ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಹೆದರಿದ ಮಗ, ಆ್ಯಂಬುಲೆನ್ಸ್ ಚಾಲಕನಿಗೆ ಹಣ ಕೊಟ್ಟು ಕಾರ್ಯ ಮಾಡಿಸಿದ್ದಾರೆ.

ಪಾಸಿಟಿವ್ ಬಂದು ಮೃತಪಟ್ಟಿದ್ದ ತಂದೆಯ ಅಂತ್ಯಸಂಸ್ಕಾರದಿಂದ ಹಿಂದೆ ಸರಿದ ಮಗ, ಆ್ಯಂಬುಲೆನ್ಸ್ ಚಾಲಕನಿಗೆ 10 ಸಾವಿರ ರೂಪಾಯಿ ಹಣ ನೀಡಿ ಅಂತಿಮ ಸಂಸ್ಕಾರ ಮಾಡಿಸಿದ್ದಾರೆ. ಬಳಿಕ ಅಂತ್ಯಕ್ರಿಯೆಯನ್ನು ದೂರದಿಂದಲೇ ನಿಂತು ವೀಕ್ಷಿಸಿ ವಾಪಾಸಾಗಿದ್ದಾರೆ. ಅಂತ್ಯಕ್ರಿಯೆ ನೆರವೇರಿಸಿದ ಚಾಲಕ ನಂತರದಲ್ಲಿ ತಾನು ಧರಿಸಿದ್ದ ಪಿಪಿಇ ಕಿಟ್ ಅನ್ನು ಅಂತ್ಯಕ್ರಿಯೆ ಆವರಣದಲ್ಲಿಯೇ ಬಿಸಾಡಿ ತೆರಳಿದ್ದಾರೆ.

ಬೆಂಗಳೂರಿನ ಹಲವು ಚಿತಾಗಾರಗಳಲ್ಲಿ ಪಿಪಿಇ ಕಿಟ್​ ಎಲ್ಲೆಂದರಲ್ಲಿ ಬಿದ್ದಿದ್ದು, ಮೃತರ ಸಂಬಂಧಿಕರು ಶವ ಸಂಸ್ಕಾರ ಮುಗಿದ ನಂತರ ಪಿಪಿಇ ಕಿಟ್​ಗಳನ್ನು ಚಿತಾಗಾರದ ಆವರಣದಲ್ಲೇ ಬಿಸಾಡುತ್ತಿದ್ದಾರೆ. ಚಿತಾಗಾರದಲ್ಲಿ ಅಂತ್ಯಕ್ರಿಯೆ ವೇಳೆ ಮೃತರ ಸಂಬಂಧಿಕರು ಪಿಪಿಇ ಕಿಟ್​ಗಳನ್ನ ಧರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಪೂಜೆ ನಂತರ ಚಿತಾಗಾರದ ಆವರಣದಲ್ಲೇ ಪಿಪಿಇ ಕಿಟ್ ಎಸೆದು ಬೇಜಾವಾಬ್ದಾರಿ ತೋರುತ್ತಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಕ್ಯೂ: ವಿದ್ಯುತ್ ಚಿತಾಗಾರಗಳ ಎದುರು ಸಾಲುಗಟ್ಟಿ ನಿಂತ ಆ್ಯಂಬುಲೆನ್ಸ್​ಗಳು ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯುತ್ ಚಿತಾಗಾರಗಳ ಬಳಿ ಅಂತ್ಯಸಂಸ್ಕಾರಕ್ಕೆ ಶವಗಳನ್ನು ತಂದಿರುವ ಆ್ಯಂಬುಲೆನ್ಸ್​ಗಳು ಕ್ಯೂ ನಿಂತಿವೆ. ಮೇಡಿ ಅಗ್ರಹಾರದ ವಿದ್ಯುತ್ ಚಿತಾಗಾರದಲ್ಲಿ 7 ಶವಸಂಸ್ಕಾರ ನಡೆದಿವೆ. ಇದೀಗ ಮತ್ತೆ 7 ಶವಗಳೊಂದಿಗೆ ಆ್ಯಂಬುಲೆನ್ಸ್​ಗಳು ಬಂದಿವೆ.

ಇದನ್ನೂ ಓದಿ: ಕೊವಿಡ್​ ಸೋಂಕಿನ ತೀವ್ರತೆ ಹೆಚ್ಚಳ; ಅಂತ್ಯಕ್ರಿಯೆಗೆ ಸಾಲಾಗಿ ನಿಂತ ಆ್ಯಂಬುಲೆನ್ಸ್​ 

ಬೆಂಗಳೂರು ಸಾವಿನ ರಾಜಧಾನಿ | ಕೊರೊನಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೂ ಸಂಕಷ್ಟ!

Published On - 1:07 pm, Sat, 17 April 21