AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ವಿವಿಧಡೆಯಿಂದ ಬೆಂಗಳೂರಿಗೆ ಬರುವ ಕೆಲವು ರೈಲುಗಳು ಮೇ 31ರವರೆಗೆ ರದ್ದು; ಇಲ್ಲಿದೆ ವಿವರ

ರಾಜ್ಯದ ವಿವಿಧಡೆಯಿಂದ ಕೆಎಸ್​ಆರ್​ ಬೆಂಗಳೂರಿಗೆ ಬರುವ ರೈಲುಗಳನ್ನು ರದ್ದು, ಭಾಗಶಃ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮತ್ತು ಕೊಂಕಣ ರೈಲ್ವೆ ವಲಯ ತಿಳಿಸಿದೆ. ಹಾಗಿದ್ದರೆ ಯಾವೆಲ್ಲ ರೈಲುಗಳನ್ನು ರದ್ದು ಮಾಡಲಾಗಿದೆ? ಇಲ್ಲಿ ಓದಿ

ರಾಜ್ಯದ ವಿವಿಧಡೆಯಿಂದ ಬೆಂಗಳೂರಿಗೆ ಬರುವ ಕೆಲವು ರೈಲುಗಳು ಮೇ 31ರವರೆಗೆ ರದ್ದು; ಇಲ್ಲಿದೆ ವಿವರ
ರೈಲು
ವಿವೇಕ ಬಿರಾದಾರ
|

Updated on:May 29, 2024 | 8:05 AM

Share

ಬೆಂಗಳೂರು, ಮೇ 29: ಬೈಯ್ಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಮತ್ತು ಬೈಯ್ಯಪ್ಪನಹಳ್ಳಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಾರ್ಷಿಕ ಕೇಬಲ್ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ಇಂದು (ಮೇ 29) ಮೂರು ಮೆಮು ರೈಲುಗಳು (MEMU Train) ರದ್ದುಗೊಳ್ಳಲಿವೆ. ಮತ್ತು ಎಂಟು ಮೆಮು ರೈಲುಗಳು ಭಾಗಶಃ ರದ್ದಾಗಿವೆ ಎಂದು ನೈಋತ್ಯ ರೈಲ್ವೆ ವಲಯ (South Western Railway) ತಿಳಿಸಿದೆ. ಹಾಗೆ ಭಟ್ಕಳ ನಿಲ್ದಾಣದಲ್ಲಿ ಮೇ 29 ರಿಂದ 31 ರವರೆಗೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳ್ಳಲಿವೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.

3 ವಿಶೇಷ ಮೆಮು ರೈಲು ರದ್ದು:

ರೈಲು ಸಂಖ್ಯೆ (01766) ವೈಟ್​​ಫಿಲ್ಡ್​-ಕೆಎಸ್​ಆರ್​ ಬೆಂಗಳೂರು ವಿಶೇಷ ಮೆಮು ರೈಲು, ಕೆಎಸ್​ಆರ್​​ ಬೆಂಗಳೂರು -ಬಂಗಾರಪೇಟ (06561) ಮತ್ತು ಬಂಗಾರಪೇಟ-ಕೆಎಸ್​ಆರ್​ ಬೆಂಗಳೂರು (01773) ವಿಶೇಷ ಮೆಮು ರೈಲು ಬುಧವಾರ (ಮೇ 29) ತಾತ್ಕಾಲಿಕವಾಗಿ ರದ್ದಾಗಿವೆ.

8 ವಿಶೇಷ ಮೆಮು ಭಾಗಶಃ ರದ್ದು:

  • ರೈಲು ಸಂಖ್ಯೆ (06389) ಕೆಎಸ್​ಆರ್​ ಬೆಂಗಳೂರು-ಬಂಗಾರಪೇಟ ಮೆಮು ವಿಶೇಷ ರೈಲು ಕೆಎಸ್​ಆರ್​ ಬೆಂಗಳೂರು-ವೈಟ್​ಫಿಲ್ಡ್​ ನಡುವೆ ಭಾಗಶಃ ರದ್ದಾಗಲಿದೆ.
  • ರೈಲು ಸಂಖ್ಯೆ (06535) ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್​ ಮೆಮು ವಿಶೇಷ ರೈಲು ಯಲಹಂಕ-ಬೆಂಗಳೂರು ಕಂಟೋನ್ಮೆಂಟ್​ ನಡುವೆ ಭಾಗಶಃ ರದ್ದಾಗಲಿದೆ.
  • ರೈಲು ಸಂಖ್ಯೆ (01776) ಮರಿಕುಪ್ಪಂ-ಕೆಎಸ್​ಆರ್​ ಬೆಂಗಳೂರು ಮೆಮು ವಿಶೇಷ ರೈಲು ಕೆಎಸ್​ಆರ್​ ಬೆಂಗಳೂರು-ಕೃಷ್ಣರಾಜಪುರಂ ಮಧ್ಯೆ ಭಾಗಶಃ ರದ್ದಾಗಲಿದೆ.
  • ರೈಲು ಸಂಖ್ಯೆ (01775) ಕೆಎಸ್​ಆರ್​ ಬೆಂಗಳೂರು-ಮರಿಕುಪ್ಪಂ ಮೆಮು ವಿಶೇಷ ರೈಲು ಕೆಎಸ್​ಆರ್​ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಲಿದೆ.
  • ರೈಲು ಸಂಖ್ಯೆ (01793) ಮರಿಕುಪ್ಪಂ-ಕೆಎಸ್​ಆರ್​ ಬೆಂಗಳೂರು ಮೆಮು ವಿಶೇಷ ರೈಲು ಬಂಗಾರಪೇಟ-ಕೃಷ್ಣರಾಜಪುರಂ ನಡುವೆ ಭಾಗಶಃ ರದ್ದಾಗಲಿದೆ.
  • ರೈಲು ಸಂಖ್ಯೆ (01794) ಕೃಷ್ಣರಾಜಪುರಂ-ಮರಿಕುರಪ್ಪಂ ಮೆಮು ವಿಶೇಷ ರೈಲು ಕೃಷ್ಣರಾಜಪುರಂ-ಬಂಗಾರಪೇಟ ನಡುವೆ ಭಾಗಶಃ ರದ್ದಾಗಲಿದೆ.
  • ರೈಲು ಸಂಖ್ಯೆ (06529) ಕೆಎಸ್​ಆರ್​ ಬೆಂಗಳೂರು-ಕುಪ್ಪಂ ಮೆಮು ವಿಶೇಷ ರೈಲು ಕೆಎಸ್​ಆರ್​ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಗಶಃ ರದ್ದಾಗಲಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರೇ ಗಮನಿಸಿ: ರದ್ದಾಗಿದೆ ಬೆಂಗಳೂರು ಕಲಬುರಗಿ ವಿಶೇಷ ರೈಲು

2 ರೈಲುಗಳು ಭಾಗಶಃ ರದ್ದು

  • ಮೇ 29, ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರೆಸ್ ರೈಲು ಶಿರೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಶಿರೂರು- ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
  • ಮೇ 30, ರಂದು ರೈಲು ಸಂಖ್ಯೆ 16586 ಮುರುಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ಎಕ್ಸ್​ಪ್ರೆಸ್ ರೈಲು ಶಿರೂರು ನಿಲ್ದಾಣದಿಂದ ಮಧ್ಯಾಹ್ನ 2.35 ಗಂಟೆಗೆ ಪ್ರಾರಂಭವಾಗಲಿದ್ದು. ಮುರುಡೇಶ್ವರ ಮತ್ತು ಶಿರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:03 am, Wed, 29 May 24