AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರಿಗಾಗಿ ಹೆಚ್ಚುವರಿ ರೈಲ್ವೆ ಟಿಕೆಟ್ ಕೌಂಟರ್ ಕಾರ್ಯಾರಂಭ, ಎಲ್ಲೆಲ್ಲಿ?

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೇ ವಿಭಾಗವು ಹೆಚ್ಚುವರಿ ಟಿಕೆಟ್​ ಕಾಯ್ದಿರಿಸುವ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಿದೆ. ಇವೆಲ್ಲಾ ಕೇಂದ್ರಗಳು ನಾಳೆಯಿಂದ ಕಾರ್ಯಾರಂಭವಾಗಲಿದೆ. ಬೆಂಗಳೂರಿನಲ್ಲಿ ಮಲ್ಲೇಶ್ವರ, ಚಿಕ್ಕಬಾಣಾವರ, ಬಾಣಸವಾಡಿ, ಬೆಂಗಳೂರು ಪೂರ್ವ, ಕಾರ್ಮೆಲರಾಂ ಮತ್ತು ವೈಟ್​ಫೀಲ್ಡ್​ ರೈಲು ನಿಲ್ದಾಣಗಳಲ್ಲಿ ಈ ಹೆಚ್ಚುವರಿ ಕೌಂಟರ್​ಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಜೊತೆಗೆ, ಕುಪ್ಪಂ, ಪೆನುಕೊಂಡ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಮತ್ತು ಮದ್ದೂರು ರೈಲ್ವೇ ನಿಲ್ದಾಣಗಳಲ್ಲಿ ಸಹ ಈ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಅಕ್ಟೋಬರ್​ 20 ರಿಂದ ನವೆಂಬರ್ 30ರವರೆಗೆ ಹಬ್ಬದ ವಿಶೇಷ ರೈಲುಗಳನ್ನು ಓಡಿಸಲು […]

ಪ್ರಯಾಣಿಕರಿಗಾಗಿ ಹೆಚ್ಚುವರಿ ರೈಲ್ವೆ ಟಿಕೆಟ್ ಕೌಂಟರ್ ಕಾರ್ಯಾರಂಭ, ಎಲ್ಲೆಲ್ಲಿ?
KUSHAL V
| Edited By: ಸಾಧು ಶ್ರೀನಾಥ್​|

Updated on:Oct 16, 2020 | 12:35 PM

Share

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೇ ವಿಭಾಗವು ಹೆಚ್ಚುವರಿ ಟಿಕೆಟ್​ ಕಾಯ್ದಿರಿಸುವ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಿದೆ. ಇವೆಲ್ಲಾ ಕೇಂದ್ರಗಳು ನಾಳೆಯಿಂದ ಕಾರ್ಯಾರಂಭವಾಗಲಿದೆ.

ಬೆಂಗಳೂರಿನಲ್ಲಿ ಮಲ್ಲೇಶ್ವರ, ಚಿಕ್ಕಬಾಣಾವರ, ಬಾಣಸವಾಡಿ, ಬೆಂಗಳೂರು ಪೂರ್ವ, ಕಾರ್ಮೆಲರಾಂ ಮತ್ತು ವೈಟ್​ಫೀಲ್ಡ್​ ರೈಲು ನಿಲ್ದಾಣಗಳಲ್ಲಿ ಈ ಹೆಚ್ಚುವರಿ ಕೌಂಟರ್​ಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಜೊತೆಗೆ, ಕುಪ್ಪಂ, ಪೆನುಕೊಂಡ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಮತ್ತು ಮದ್ದೂರು ರೈಲ್ವೇ ನಿಲ್ದಾಣಗಳಲ್ಲಿ ಸಹ ಈ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗುವುದು.

ಅಕ್ಟೋಬರ್​ 20 ರಿಂದ ನವೆಂಬರ್ 30ರವರೆಗೆ ಹಬ್ಬದ ವಿಶೇಷ ರೈಲುಗಳನ್ನು ಓಡಿಸಲು ಮಂಡಳಿಯು ಯೋಜಿಸಿರುವ ಹಿನ್ನೆಲೆಯಲ್ಲಿ ಮುಂಗಡ ಟಿಕೆಟ್​ ಕಾಯ್ದಿರಿಸಲು ಬೇಡಿಕೆ ಹೆಚ್ಚಾಗಬಹುದು ಅನ್ನೋ ಕಾರಣಕ್ಕೆ ಈ ಕೇಂದ್ರಗಳನ್ನು ಸ್ಥಾಪಿಸಲಿದೆ. ಎಲ್ಲಾ ಕೇಂದ್ರಗಳು ಲಾಕ್​ಡೌನ್​ ಸಮಯದ ಮುಂಚೆ ಇದ್ದ ಕೆಲಸದ ವೇಳೆಯ ಪ್ರಕಾರವೇ ಕಾರ್ಯ ನಿರ್ವಹಿಸಲಿದೆ. ಇದಲ್ಲದೆ, ಈ ಹಿಂದೆಯೇ ತೆರೆಯಲಾಗಿದ್ದ 15 ಟಿಕೆಟ್​ ಕಾಯ್ದಿರಿಸುವ ಕೇಂದ್ರಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿ ನೀಡಿದೆ.

Published On - 7:40 pm, Thu, 15 October 20

Follow Us
KUSHAL V
KUSHAL V
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್