ಧಾರವಾಡದಲ್ಲೇ ಉತ್ಪಾದನೆ ಆಗಲಿದೆ ರಾಜ್ಯಕ್ಕೆ ಅಗತ್ಯವಿರುವ ಸ್ಪುಟ್ನಿಕ್ ಕೊವಿಡ್ ಲಸಿಕೆ

Sputnik Vaccine in Dharwad: ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಶಿಲ್ಪಾ ಮೆಡಿಕೇರ್ ಸ್ಪುಟ್ನಿಕ್ ಲಸಿಕೆ ಉತ್ಪಾದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಶಿಲ್ಪಾ ಮೆಡಿಕೇರ್ ಸಂಸ್ಥೆ ರಾಯಚೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

ಧಾರವಾಡದಲ್ಲೇ ಉತ್ಪಾದನೆ ಆಗಲಿದೆ ರಾಜ್ಯಕ್ಕೆ ಅಗತ್ಯವಿರುವ ಸ್ಪುಟ್ನಿಕ್ ಕೊವಿಡ್ ಲಸಿಕೆ
ಪ್ರಾತಿನಿಧಿಕ ಚಿತ್ರ
Follow us
guruganesh bhat
|

Updated on:May 17, 2021 | 8:11 PM

ಧಾರವಾಡ: ಭಾರತಕ್ಕೆ ಕಾಲಿಟ್ಟಿರುವ ರಷ್ಯಾ ಮೂಲದ ಸ್ಪುಟ್ನಿಕ್ ವ್ಯಾಕ್ಸಿನ್ ಧಾರವಾಡದಲ್ಲೂ ಉತ್ಪಾದನೆಯಾಗಲಿದೆ. ಕರ್ನಾಟಕಕ್ಕೆ ಅಗತ್ಯವಿರುವ ಸ್ಪುಟ್ನಿಕ್ ಲಸಿಕೆಯನ್ನು ಧಾರವಾಡದ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್‌ ಉತ್ಪಾದಿಸಲಿದೆ. ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಶಿಲ್ಪಾ ಮೆಡಿಕೇರ್ ಸ್ಪುಟ್ನಿಕ್ ಲಸಿಕೆ ಉತ್ಪಾದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಒಟ್ಟು ಐದು ನೂರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಯಲ್ಲಿ ಮೂರು ಶಿಫ್ಟ್‌ನಲ್ಲಿ ಲಸಿಕೆ ಉತ್ಪಾದನೆ ನಡೆಯಲಿದೆ. ಶಿಲ್ಪಾ ಮೆಡಿಕೇರ್ ಸಂಸ್ಥೆ ರಾಯಚೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆ ಮತ್ತು ವಿತರಣೆಯ ಹಕ್ಕುಗಳನ್ನು ಪಡೆದುಕೊಂಡಿರುವ ಹೈದರಾಬಾದ್​ ಮೂಲದ ಡಾ.ರೆಡ್ಡಿಸ್ ಜತೆ ಶಿಲ್ಪಾ ಮೆಡಿಕೇರ್ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ ಕರ್ನಾಟಕಕ್ಕೆ ಅಗತ್ಯ ಇರುವಷ್ಟು ಸ್ಪುಟ್ನಿಕ್ ಲಸಿಕೆಯನ್ನು ಧಾರವಾಡದಲ್ಲಿ ಶಿಲ್ಪಾ ಮೆಡಿಕೇರ್ ಸಂಸ್ಥೆಯೇ ಉತ್ಪಾದಿಸಲಿದೆ.

ಔಷಧ ತಯಾರಕ ಕಂಪೆನಿಯಾದ ಡಾ. ರೆಡ್ಡೀಸ್ ಹೇಳಿರುವ ಪ್ರಕಾರ, ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ ಲಸಿಕೆ ಹಾಕುವ ಯೋಜನೆ ಇರಿಸಿಕೊಂಡಿದೆ. ಕನಿಷ್ಠ ಎರಡು ರಾಜ್ಯಗಳೊಂದಿಗೆ ಕಂಪೆನಿಯು ಮಾತುಕತೆ ನಡೆಸುತ್ತಿದೆ. ಶೇ 15ರಿಂದ 20ರಷ್ಟು ಆರಂಭದ ಪೂರೈಕೆಯನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುವುದು. “ಮುಂದಿನ ಎರಡು ತಿಂಗಳಲ್ಲಿ ನಮಗೆ ಆರ್​ಡಿಐಎಫ್​ನಿಂದ 3.6 ಕೋಟಿ ಡೋಸ್​ನ ಪೂರೈಕೆಯ ಭರವಸೆ ಇದೆ,​” ಎಂದು ಡಾ. ರೆಡ್ಡೀಸ್​ನಲ್ಲಿ ಬ್ರ್ಯಾಂಡೆಡ್ ಫಾರ್ಮ್ಯುಲೇಷನ್ಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆಗಿರುವ ಎಂ.ವಿ.ರಮಣ ಹೇಳಿದ್ದಾರೆ.

ವಾಣಿಜ್ಯ ರವಾನೆಯು ಜೂನ್​ ಮಧ್ಯದಿಂದ ಶುರುವಾಗುವ ನಿರೀಕ್ಷೆ ಇದೆ ಎಂದು ಕಂಪೆನಿಯಿಂದ ಹೇಳಲಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಹೇಳಿರುವ ಪ್ರಕಾರ, ರಷ್ಯಾದ ಸ್ಪುಟ್ನಿಕ್ V ಕೋವಿಡ್- 19 ಲಸಿಕೆಯನ್ನು ರೂ. 948+ ಶೇ 5ರಷ್ಟು ಜಿಎಸ್​ಟಿ ಸೇರಿ ಒಂದು ಡೋಸ್​ಗೆ ರೂ. 995.40 ಆಗುತ್ತದೆ. ಈ ಮೊತ್ತವು ಸರ್ಕಾರ ಹಾಗೂ ಖಾಸಗಿವರಿಗೆ ಒಂದೇ ಬೆಲೆ ಇರುತ್ತದೆ.

(ಮೈನಸ್) -18 ಸೆಂಟಿಗ್ರೇಡ್​ನಲ್ಲಿ ಲಸಿಕೆ ನಿರ್ವಹಣೆ ಮಾಡಬಹುದಾದ ಮೆಟ್ರೋ ನಗರಗಳ ಆಸ್ಪತ್ರೆಗಳ ಜತೆಗೆ ಕೆಲಸ ಮಾಡುತ್ತಿದ್ದೇವೆ. ಕಂಪೆನಿಯು 35 ನಗರಗಳಲ್ಲಿ ಕೆಲಸ ನಿರ್ವಹಿಸಲು ಸಿದ್ಧತೆ ನಡೆಸುತ್ತಿದೆ. ಡಾ. ರೆಡ್ಡೀಸ್ ಲೈಸೆನ್ಸಿಂಗ್ ಒಪ್ಪಂದದ ಪ್ರಕಾರ, 25 ಕೋಟಿ ಡೋಸ್ ಸ್ಪುಟ್ನಿಕ್ V ಲಸಿಕೆ ತನಕ ಉತ್ಪಾದನೆ ಮಾಡಬಹುದಾಗಿದೆ.

ಇದನ್ನೂ ಓದಿ: ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಜೊತೆಗೆ ಭಾರತದಲ್ಲಿ ಸಿಗಲಿದೆ ಸ್ಪುಟ್ನಿಕ್​-ವಿ ಕೊರೊನಾ ಲಸಿಕೆ; ಮೂರರಲ್ಲಿ ಯಾವುದು ಉತ್ತಮ? 

ವೈದ್ಯಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರ್​.ಅಶೋಕ್; ಹಳ್ಳಿಯಲ್ಲೇ ನಡೆಯಲಿದೆ ಕೊವಿಡ್ ಪರೀಕ್ಷೆ

( Sputnik Covid 19 vaccine to be produced in Dharwad which provides Karnataka’s vaccine demand)

Published On - 7:56 pm, Mon, 17 May 21

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು