ಲವ್ ಜಿಹಾದ್​​ ತಡೆಗೆ ಶ್ರೀರಾಮಸೇನೆಯಿಂದ ರಾಜ್ಯದ 6 ಕಡೆ ಸಹಾಯವಾಣಿ ಆರಂಭಿಸಲು ನಿರ್ಧಾರ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 28, 2024 | 3:11 PM

ರಾಜ್ಯದಲ್ಲಿ ಲವ್​ ಜಿಹಾದ್​ ಸುದ್ದಿ ಅವಾಗವಾಗ ಕೇಳಿಬರುತ್ತಿರುತ್ತದೆ. ಈ ಹಿನ್ನಲೆ ಎಚ್ಚೆತ್ತ ಶ್ರೀರಾಮ ಸೇನೆ ಸಂಘಟನೆ ಇದನ್ನು ತಡೆಯಲು ಮುಂದಾಗಿದ್ದು, ರಾಜ್ಯದ ಆರು ಕಡೆಗಳಲ್ಲಿ ಸಹಾಯವಾಣಿ ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಲವ್‌ ಜಿಹಾದ್‌ ಜಾಲದಲ್ಲಿ ಸಿಕ್ಕಿ ಬೀಳುವ ಯುವತಿಯರನ್ನು ಈ ಜಾಲದಿಂದ ಹೊರತರಲು ಈ ಹೊಸ ಪ್ರಯತ್ನ ಮಾಡಲಾಗಿದೆ.

ಲವ್ ಜಿಹಾದ್​​ ತಡೆಗೆ ಶ್ರೀರಾಮಸೇನೆಯಿಂದ ರಾಜ್ಯದ 6 ಕಡೆ ಸಹಾಯವಾಣಿ ಆರಂಭಿಸಲು ನಿರ್ಧಾರ
ಲವ್ ಜಿಹಾದ್​​ ತಡೆಗೆ ಶ್ರೀರಾಮಸೇನೆಯಿಂದ ರಾಜ್ಯದ 6 ಕಡೆ ಸಹಾಯವಾಣಿ ಆರಂಭ
Follow us on

ದಕ್ಷಿಣ ಕನ್ನಡ, ಮೇ.28: ಲವ್ ಜಿಹಾದ್​​(Love jihad) ತಡೆಗೆ ಶ್ರೀರಾಮಸೇನೆ(Sri Ram Sena) ಸಂಘಟನೆ ಮುಂದಾಗಿದ್ದು, ರಾಜ್ಯದ 6 ಕಡೆಗಳಲ್ಲಿ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲಬುರಗಿ ಹಾಗೂ ದಾವಣಗೆರೆಯಲ್ಲಿ ಸಹಾಯವಾಣಿ ಆರಂಭ ಮಾಡಲು ನಿರ್ಧರಿಸಿದೆ. ಜೊತೆಗೆ ಸಹಾಯವಾಣಿಗೆ ಕರೆ ಮಾಡಿದವರ ಹೆಸರು ಕೂಡ ಗೌಪ್ಯವಾಗಿರಿಸಲು ಸಂಘಟನೆ ತೀರ್ಮಾನ ಮಾಡಿದೆ.

ಲವ್‌ ಜಿಹಾದ್‌ ಜಾಲದಲ್ಲಿ ಸಿಕ್ಕಿ ಬೀಳುವ ಯುವತಿಯರನ್ನು ಈ ಜಾಲದಿಂದ ಹೊರತರಲು ಈ ಹೊಸ ಪ್ರಯತ್ನ ಮಾಡಲಾಗಿದೆ. ಯಾರು ಈ ಸಹಾಯ ಪಡೆಯಲು ಕರೆ ಮಾಡುತ್ತಾರೋ ಅಂತಹವರಿಗೆ ಆಯಾ ಜಿಲ್ಲೆಗಳಲ್ಲಿಯೇ ವಕೀಲರು, ಕೌನ್ಸೆಲಿಂಗ್ ತಜ್ಞರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಿರುವ ತಂಡ ಕಾರ್ಯ ನಿರ್ವಹಣೆ ಮಾಡುತ್ತದೆ. ಕಾನೂನು ಬದ್ದವಾಗಿ, ಸುವ್ಯವಸ್ಥಿತವಾಗಿ ಮಾಡಲು ಈ ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ:ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಲವ್ ಜಿಹಾದ್ ಶುರುವಾಗಿದೆ: ಬಿವೈ ವಿಜಯೇಂದ್ರ

ಕರ್ನಾಟಕ ರಾಜ್ಯದಲ್ಲಿ ಇದೊಂದು ಇತಿಹಾಸ- ಆನಂದ ಶೆಟ್ಟಿ ಅಡ್ಯಾರ್

ಈ ಸಹಾಯವಾಣಿ ಆರಂಭದ ಕುರಿತು ಮಾತನಾಡಿದ ಶ್ರೀರಾಮ ಸೇನೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ‘ಕರ್ನಾಟಕ ರಾಜ್ಯದಲ್ಲಿ ಇದೊಂದು ಇತಿಹಾಸ. ಹಿಂದೂ ಸಹೋದರಿಯರ ರಕ್ಷಣೆ ಮಾಡೋದಕ್ಕೆ ಇದೊಂದು ದೊಡ್ಡ ಕ್ರಮ. ಕರ್ನಾಟಕದ ಆರು ಜಿಲ್ಲೆಗಳಲ್ಲಿ ನಾಳೆ(ಮೇ.29) ಏಕಕಾಲದಲ್ಲಿ ನಂಬರ್ ಬಿಡುಗಡೆ ಮಾಡುತ್ತೇವೆ. ಕೇವಲ ಆರು ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯದಲ್ಲಿ ಎಲ್ಲಿಂದ ಕರೆ ಮಾಡಿದರೂ ನಾವು ಸ್ವೀಕಾರ ಮಾಡುತ್ತೇವೆ. ಇದಕ್ಕೆಂದೆ ನುರಿತ ತಂಡ ಇರುತ್ತದೆ.

‘ದಿನದ 24 ಗಂಟೆಯು ಕೆಲಸ ಮಾಡುತ್ತಾರೆ. ತೊಂದರೆಗೊಳಗಾದ ಯಾರು ಕೂಡಾ ಕರೆ ಮಾಡಬಹುದು. ಈಗಾಗಲೇ ನುರಿತ ತಂಡ ಕಾರ್ಯಾಚರಣೆ ಮಾಡುತ್ತಿದೆ. ವಕೀಲರು, ಕೌನ್ಸೆಲಿಂಗ್,ನಿವೃತ್ತ ಪೊಲೀಸ್ ಅಧಿಕಾರಿಗಳ ತಂಡ ಇದೆ. ಲವ್ ಜಿಹಾದ್​ನ ಕರಾಳ ಮುಖಗಳು ರಾಜ್ಯ, ದೇಶದಲ್ಲಿ ಕಾಣುತ್ತಿದೆ. ಆರಂಭದಲ್ಲೇ ತಡೆ ಹಿಡಿದ್ರೆ ಪ್ರಯತ್ನದಲ್ಲಿ ಸಫಲತೆ ಕಾಣಬಹುದು. ಕರೆ ಮಾಡಿದವರ ವಿವರ ಗೌಪ್ಯವಾಗಿ ಇಡುತ್ತೇವೆ. ಶಿಸ್ತು ಬದ್ದವಾದ ತಂಡ ಕಾರ್ಯಾಚರಣೆ ಮಾಡುತ್ತೆ ಎಂದು ಹೇಳಿದರು.

ಕಂಕನಾಡಿ ಬಳಿ ರಸ್ತೆಯಲ್ಲೇ ನಮಾಜ್; ವಿಶ್ವ ಹಿಂದೂ ಪರಿಷತ್​ ಕಿಡಿ

ಮಂಗಳೂರು: ಕಂಕನಾಡಿ ಬಳಿ ರಸ್ತೆಯಲ್ಲೇ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್​ ಕಿಡಿಕಾರಿದೆ. ಜೊತೆಗೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ತಡೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇವೆ ಎಂದು ವಿ.ಎಚ್.ಪಿ ಮುಖಂಡ ಪ್ರದೀಪ್ ಸರಿಪಲ್ಲ ಹೇಳಿದ್ದಾರೆ. ‘ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಲು ಈ ರೀತಿಯ ಕೃತ್ಯ ಎಸುಗುತ್ತಿದ್ದಾರೆ. ಮಸೀದಿ ಒಳಗೆ ಸಾಕಷ್ಟು ಜಾಗ ಇದ್ದರೂ ಕೂಡ ಸಾರ್ವಜನಿಕರಿಗೆ ತೊಂದರೆ ಕೊಡಲು ರಸ್ತೆಯಲ್ಲಿ ನಮಾಜ್ ಮಾಡಲಾಗಿದೆ.

ಸಾಮೂಹಿಕ ಹನುಮಾನ್ ಚಾಲೀಸ್ ಪಠಣ

‘ಚುನಾವಣೆ ವೇಳೆ ರಸ್ತೆಯಲ್ಲಿ ಇಫ್ತಾರ್ ಕೂಟ ಮಾಡಿದ್ದಾಗ ಕೂಡ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಮುಂದುವರೆದ ಭಾಗವಾಗಿ ಈಗ ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಮೂಲಕ‌ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಅಲ್ಲಿ ಸಾಮೂಹಿಕ ಹನುಮಾನ್ ಚಾಲೀಸ್ ಪಠಣ ಮಾಡಲಾಗುವುದು. ಇಂದು(ಮೇ.28) ಸಂಜೆ ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಲಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Tue, 28 May 24