ಬೆಂಗಳೂರು: ಕೊರೊನಾ ವೈರಸ್ ಹುಡುಕಿ ಹುಡುಕಿ ಮನುಷ್ಯನ ದೇಹ ಸೇರುತ್ತಿದೆ. ಬಡವ ಶ್ರೀಮಂತ ಎನ್ನದೆ ಬೆನ್ನು ಬಿದ್ದಿದೆ. ಈ ನಡುವೆ ಕೊರೊನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ದರವನ್ನು ನಿಗದಿ ಮಾಡಿರಲಿಲ್ಲ. ಈ ಕುರಿತು ಟಿವಿ9 ವರದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಿದೆ.
TV9 Impact
ಟಾಸ್ಕ್ ಫೋರ್ಸ್ ಸಭೆಯಲ್ಲಿ ಸರ್ಕಾರದಿಂದ ದರ ನಿಗದಿಯಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಸಜ್ಜಾಗುತ್ತಿವೆ. ಶೀಘ್ರದಲ್ಲಿಯೇ ದರ ನಿಗದಿಯ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದ್ದಾರೆ. ಸರ್ಕಾರದ ದರ ನಿಗದಿಗೆ IMA ಕೂಡ ಸಮಾಧಾನ ವ್ಯಕ್ತಪಡಿಸಿದೆ.
ಗಂಟಲು ದ್ರವ ಪರೀಕ್ಷೆಗೆ 2,600 ರೂಪಾಯಿ ನಿಗದಿ ಮಾಡಲಾಗಿದೆ. 1 ದಿನ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆಗೆ 5,200 ರೂ. 1 ದಿನ ಜನರಲ್ ವಾರ್ಡ್, ಆಕ್ಸಿಜನ್‌ಗೆ 7,500 ರೂ. ಐಸೋಲೇಷನ್ ವಾರ್ಡ್ ಒಂದು ದಿನಕ್ಕೆ 8,500 ರೂ. ಐಸಿಯು ವಿತ್ ವೆಂಟಿಲೇಟರ್‌ಗೆ 12,000 ರೂ ನಿಗದಿ ಮಾಡಿದೆ. ಸರ್ಕಾರ ನಿಗದಿಪಡಿಸಿದ ದರ ನಮಗೆ ಸಮಾಧಾನವಾಗಿದೆ. ನಾವೂ ಚಿಕಿತ್ಸೆ ನೀಡಲು ಸಿದ್ಧವೆಂದು ಐಎಂಎ ಸಂಘದ ಕಾರ್ಯದರ್ಶಿ ಡಾ.ಶ್ರೀನಿವಾಸ್ ತಿಳಿಸಿದ್ರು.
Published On - 12:20 pm, Fri, 19 June 20