
ಬೆಂಗಳೂರು, ನವೆಂಬರ್ 01: 2025ರ ಅಕ್ಟೋಬರ್ ತಿಂಗಳ ರಾಜ್ಯವಾರು ಸರಕು ಮತ್ತು ಸೇವಾ ತೆರಿಗೆ (GST) ಆದಾಯ ವರದಿ ಬಿಡುಗಡೆ ಆಗಿದೆ. 2024ರ ಅಕ್ಟೋಬರ್ಗೆ ಹೋಲಿಸಿದರೆ 2025ರ ಅಕ್ಟೋಬರ್ ದೇಶಿಯ ಜಿಎಸ್‌ಟಿ 1,45,052 ಕೋಟಿ ರೂ. ಸಂಗ್ರಹವಾಗಿದೆ, ಅಂದರೆ ಶೇ.2ರಷ್ಟು ಬೆಳವಣಿಗೆ ಹೊಂದಿದೆ. ಆ ಮೂಲಕ ಪ್ರಮುಖ ಆರ್ಥಿಕ ರಾಜ್ಯಗಳ ಬೆಳವಣಿಗೆ ದರದಲ್ಲಿ ಕರ್ನಾಟಕ (Karnataka) ಪ್ರಥಮ ಸ್ಥಾನದಲ್ಲಿ ಇದೆ.
ಹಣಕಾಸು ಸಚಿವಾಲಯ ಶನಿವಾರ ರಾಜ್ಯಗಳ ಜಿಎಸ್‌ಟಿ ಆದಾಯದ ಸಂಗ್ರಹ ಮತ್ತು ಬೆಳವಣಿಗೆ ದರ ಮಾಹಿತಿ ಬಿಡುಗಡೆ ಮಾಡಿದೆ. ಆ ಪೈಕಿ ಅಕ್ಟೋಬರ್ ತಿಂಗಳ ಜಿಎಸ್‌ಟಿ ಆದಾಯ 1.95 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ತೆರಿಗೆ ಕಡಿತದ ಹೊರತಾಗಿಯೂ ಶೇ. 4.6 ರಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ: ಬೆಂಗಳೂರಿನ ಕೆಲ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ನಿಮಗೆ ಗೊತ್ತಾಗದಂತೆ ವಸೂಲಿ ಮಾಡ್ತಾರೆ ಸೇವಾ ಶುಲ್ಕ, ಜಿಎಸ್‌ಟಿ!
ಹಣಕಾಸು ಸಚಿವಾಲಯದ ಮಾಹಿತಿಯ ಪ್ರಕಾರ, ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) 36,547 ಕೋಟಿ ರೂ., ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) 45,134 ಕೋಟಿ ರೂ. ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) 1,06,443 ಕೋಟಿ ರೂ ಸೇರಿದಂತೆ ಹೆಚ್ಚುವರಿಯಾಗಿ ಸರ್ಕಾರವು ಸೆಸ್‌ನಿಂದ 7,812 ಕೋಟಿ ರೂ. ಸಂಗ್ರಹಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:18 pm, Sat, 1 November 25