AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ 3 ದಿನ ರಜೆ: ಪ್ರಯಾಣಿಕರಿಗಾಗಿ KSRTC ಜತೆ BMTC ಬಸ್ಸುಗಳ ಸಂಚಾರ

2026ರ ವರ್ಷದಲ್ಲಿ ಹೆಚ್ಚಿನ ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿದೆ. ಅಂದರೆ, ಒಂದು ದಿನ ರಜೆ ಹಾಕಿದರೆ, ಮೂರು ಅಥವಾ ನಾಲ್ಕು ದಿನಗಳ ಸರಣಿ ರಜೆಯ ಮಜಾವನ್ನು ಜನರು ಸವಿಯಬಹುದಾಗಿದೆ. ಅದರಂತೆ ಜನವರಿ ಅಂತ್ಯಕ್ಕೆ ಸತತ ಮೂರು ರಜೆ ದಿನಗಳು ಬಂದಿವೆ. ಹೀಗಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಜನ ಊರುಗಳತ್ತ ತೆರಳುವ ಸಾಧ್ಯತೆಗಳಿವೆ. ಹೀಗಾಗಿ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಹೆಚ್ಚುವರಿ ಬಸ್ ನಿಯೋಜಿಸಲಾಗಿದೆ.

ಸತತ 3 ದಿನ ರಜೆ: ಪ್ರಯಾಣಿಕರಿಗಾಗಿ KSRTC ಜತೆ BMTC ಬಸ್ಸುಗಳ ಸಂಚಾರ
Bmtc And Ksrtc Buses
ರಮೇಶ್ ಬಿ. ಜವಳಗೇರಾ
|

Updated on: Jan 22, 2026 | 8:19 PM

Share

ಬೆಂಗಳೂರು, (ಜನವರಿ 22): ಸಾಲು ಸಾಲು ರಜೆ (Long Holiday) ಇದ್ರೆ ಸಾಕು ಬೆಂಗಳೂರಿನ (Bengaluru) ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಾರೆ. ಇನ್ನು ಕೆಲವರು ಟ್ರಿಪ್​ಗೆ ತೆರಳುತ್ತಾರೆ. ಈಗ ಜನವರಿ ಅಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಜನ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್​​ಆರ್​​​ಟಿಸಿ ಬಸ್ ಜೊತೆಗೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್​​ಗಳ (KSRTC And BMTC Buses) ವ್ಯವಸ್ಥೆ ಮಾಡಲಾಗಿದೆ.

ಸತತ ಮೂರು ದಿನ ರಜೆ

ಜನವರಿ 24 ನಾಲ್ಕನೇ ಶನಿವಾರ, ಜನವರಿ 25 ಭಾನುವಾರ, ಇನ್ನು ಜನವರಿ 26 ಸೋಮವಾರ ಗಣರಾಜ್ಯೋತ್ಸವ ಸಾರ್ವತ್ರಿಕ ರಜೆ. ಹೀಗೆ ಈ ತಿಂಗಳಾಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿದೆ.  ಹೀಗಾಗಿ ಜನರು ಬೇರೆ ಬೇರೆ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಈ ವೇಳೆ ಜನ ದಟ್ಟಣೆಯಾಗುವ ಸಾಧ್ಯತೆಗಳಿವೆ.ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದ್ದು, ಈ ಬಸ್​​ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.

KSRTC ಬಸ್ ಜೊತೆಗೆ ಬಿಎಂಟಿಸಿ ಬಸ್​​ ಸಂಚಾರ

ನಾಳೆ (ಜನವರಿ 23) ಶುಕ್ರವಾರ ಕೆಲಸ ಮುಗಿಸಿಕೊಂಡು ಸಂಜೆಯಿಂದಲೇ ಹಲವರು ಊರಿಗೆ ತೆರಳುವವರಿದ್ದಾರೆ. ಆದ್ದರಿಂದ ನಾಳೆಯಿಂದಲೇ (ಜನವರಿ 23) KSRTC ಬಸ್ ಜೊತೆಗೆ ಬಿಎಂಟಿಸಿ ಬಸ್​​ಗಳು ಸಹ ಸಂಚರಿಸಲಿವೆ. ನಾಳೆ 265 BMTC ಬಸ್ ಹಾಗೂ ಜನವರಿ 24ರಂದು‌ 500ಕ್ಕೂ BMTC ಹೆಚ್ಚು ಬಸ್ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.

2026ರ ವರ್ಷದಲ್ಲಿ ಹೆಚ್ಚಿನ ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿದೆ. ಅಂದರೆ, ಒಂದು ದಿನ ರಜೆ ಹಾಕಿದರೆ, ಮೂರು ಅಥವಾ ನಾಲ್ಕು ದಿನಗಳ ಸರಣಿ ರಜೆಯ ಮಜಾವನ್ನು ಜನರು ಸವಿಯಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್