ಕೊಪ್ಪಳ: ಜಿಲ್ಲೆಯಲ್ಲಿ ಬಸ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸರಿಯಾಗಿ ಬಸ್ ಇಲ್ಲ. ಈ ಕಾರಣದಿಂದ ಓಡಾಡಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ.
ಒಂದೇ ಬಸ್ನಲ್ಲಿ ವನಬಳ್ಳಾರಿ, ಗಬ್ಬೂರು, ಕಲ್ಲತಾವರಗೇರಾ ಹಾಲಳ್ಳಿ, ಬಸಾಪೂರ, ಕಿಡದಾಳ ಗ್ರಾಮಗಳ ಜನರು ಬರುತ್ತಾರೆ. ಸುಮಾರು 200ಕ್ಕೂ ಹೆಚ್ಚು ಜನರು ಒಂದೇ ಬಸ್ನಲ್ಲಿ ಇರುತ್ತಾರೆ. ಬಸ್ ಒಳಗಡೆ ಜಾಗವೇ ಇರುವುದಿಲ್ಲ. ಹಾಗಾಗಿ ಬಸ್ ಟಾಪ್ ಮೇಲೆ ಕುಳಿತು ವಿದ್ಯಾರ್ಥಿಗಳು ಬರುವಂತಹ ಪರಿಸ್ಥಿತಿ ಎದುರಾಗಿದೆ. ಈ ಕುರಿತಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನಮಗೆ ಬಸ್ನಲ್ಲಿ ಬರಲು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳ ಮಾತಿನ ಚಕಮಕಿ ನಡೆದಿದೆ.
ವಿದ್ಯಾರ್ಥಿಗಳ ಪರದಾಟ
ಬೆಳಿಗ್ಗೆ ಬಸ್ ಹತ್ತುವಾಗ ನೂಕುನುಗ್ಗಲು ಆಗುತ್ತಿರುತ್ತದೆ. ಇದರಿಂದ ಬಸ್ ಹತ್ತಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿ ಬಸ್ಗಳನ್ನು ಬಿಟ್ಟರೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಅನೇಕ ಊರುಗಳಿಂದ ಹಲವಾರು ವಿದ್ಯಾರ್ಥಿಗಳು ಕಾಲೇಜಿಗೆ, ಶಾಲೆಗೆ ತೆರಳಬೇಕು. ಒಂದೇ ಬಸ್ ಬರುತ್ತಿರುವುದು ಕಷ್ಟವಾಗುತ್ತಿದೆ. ಅದೇ ಬಸ್ಸಿಗೆ ಒಟ್ಟು 200ಕ್ಕೂ ಹೆಚ್ಚು ಜನರು ಪ್ರಯಾಣ ನಡೆಸುತ್ತಾರೆ. ನಿಲ್ಲಲೂ ಜಾಗವಿರುವುದಿಲ್ಲ. ಕೇವಲ ವಿದ್ಯಾರ್ಥಿಗಳೊಂದೇ ಅಲ್ಲದೇ ಸಾರ್ವಜನಿಕರು ಕೂಡಾ ಪ್ರಯಾಣ ನಡೆಸುತ್ತಾರೆ. ಎಲ್ಲರಿಗಾಗಿ ಬಸ್ ಅವಶ್ಯಕತೆ ಇದೆ ಎಂದು ಪ್ರತಿಭಟನೆ ಕೈಗೊಂಡಿದ್ದಾರೆ.
ಇದನ್ನೂ ಓದಿ: SSLC Exam 2020: ಹೊಸಕೋಟೆ, ಮಾಲೂರು ಡಿಪೋ ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ