AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cooking Oil Price Hike: ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್‌ ಹೆಚ್ಚಳ: ಯಾವ ಎಣ್ಣೆ ಎಷ್ಟು ಏರಿಕೆ ಆಗಿದೆ? ಇಲ್ಲಿದೆ ವಿವರ

ಹಾಲು, ಪೆಟ್ರೋಲ್, ಬಿಯರ್ ದರ ಏರಿಕೆ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆ ದರ ದಿಢೀರ್​ ಏರಿಕೆ ಆಗಿದೆ. ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದ್ದು, ಹೀಗಾಗಿ ಎಣ್ಣೆ ದರ ಗಗನಕ್ಕೇರಿದೆ. ಅಡುಗೆ ಎಣ್ಣೆ ಲೀಟರ್​ಗೆ 20 ರಿಂದ 25 ರೂ. ಗೆ ಏರಿಕೆ ಆಗಿದೆ.

Cooking Oil Price Hike: ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್‌ ಹೆಚ್ಚಳ: ಯಾವ ಎಣ್ಣೆ ಎಷ್ಟು ಏರಿಕೆ ಆಗಿದೆ? ಇಲ್ಲಿದೆ ವಿವರ
ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್‌ ಹೆಚ್ಚಳ: ಯಾವ ಎಣ್ಣೆ ಎಷ್ಟು ಏರಿಕೆ ಆಗಿದೆ? ಇಲ್ಲಿದೆ ವಿವರ
Vinayak Hanamant Gurav
| Edited By: |

Updated on:Sep 19, 2024 | 4:07 PM

Share

ಬೆಂಗಳೂರು, ಸೆಪ್ಟೆಂಬರ್​ 19: ಹಾಲು, ಪೆಟ್ರೋಲ್ ಮತ್ತು ಇತ್ತೀಚೆಗೆ ಬಿಯರ್​ ದರ ಕೂಡ ಏರಿಕೆ ಆಗಿದ್ದು, ಇದೀಗ ಇವುಗಳ ಸಾಲಿಗೆ ಅಡುಗೆ ಎಣ್ಣೆ (Cooking Oil) ಸಹ ಸೇರಿಕೊಂಡಿದೆ. ಆ ಮೂಲಕ ಪ್ರತಿನಿತ್ಯ ಒಂದಿಲ್ಲ ಒಂದು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದು ಬಡ ಮತ್ತು ಮಧ್ಯಮ ವರ್ಗದ ಜನರ ಜೀವನಕ್ಕೆ ಮತ್ತಷ್ಟು ಹೊರೆಯಾಗಲಿದೆ. ಅಡುಗೆ ಎಣ್ಣೆ ದರ ಲೀಟರ್​ಗೆ 20 ರಿಂದ 15 ರೂಪಾಯಿಗೆ ದಿಢೀರ್​ ಏರಿಕೆ ಕಂಡಿದೆ.

ಅಡುಗೆ ಎಣ್ಣೆಯು ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ, ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ. 20ರಷ್ಟು ಇಂಪೋರ್ಟ್ ಡ್ಯೂಟಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದ್ದು, ಹೀಗಾಗಿ ಎಣ್ಣೆ ದರ ಗಗನಕ್ಕೇರಿದೆ. ಇದರಿಂದಾಗಿ ಗ್ರಾಹಕರು ಮತ್ತು ಹೋಟೆಲ್ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಬೇಕು: ಗ್ರಾಹಕರ ಆಗ್ರಹ

ಅಡುಗೆ ಎಣ್ಣೆ ಬೆಲೆ ಹೆಚ್ಚಾಗುತ್ತಿದ್ದಂತೆ ಗ್ರಾಹಕರು ಸಿಡಿಮಿಡಿಗೊಂಡಿದ್ದಾರೆ. ಈ ರೀತಿಯಾದರೆ ಜನ ಸಾಮಾನ್ಯರು ಬದುಕೊದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಈಗಾಗಲೆ ದಿನಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರಿಂದ ಬಡವರು ಬದುಕುವುದು ಕಷ್ಟ. ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಅಂಗಡಿ ಮಾಲೀಕರು ಏನಂತಾರೆ?

ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 20 ರಿಂದ 25 ರೂ. ಹೆಚ್ಚಳ ಆಗಿದೆ. ತೆರಿಗೆ ದರ ಹೆಚ್ಚಳದಿಂದಾಗಿ ಬೆಲೆ‌ ಹೆಚ್ಚಳ ಆಗಿದೆ. ದರ ಹೆಚ್ಚಾದ ಮೇಲೆ ವ್ಯಾಪಾರ ಕಡಿಮೆಯಾಗಿದೆ. ಈ ಮೊದಲು ಗ್ರಾಹಕರು ಮೂರ್ನಾಲ್ಕು ಪ್ಯಾಕೆಟ್ ಎಣ್ಣೆ ತೆಗೆದುಕೊಂಡು ಹೋಗುತ್ತಿದ್ದರು. ಇದೀಗ ಬೆಲೆ ಹೆಚ್ಚಳದಿಂದ ಒಂದೆರಡು ಪ್ಯಾಕೆಟ್ ತೆಗೆದುಕೊಳ್ಳುತ್ತಿದ್ದಾರೆ. ನಮಗೂ ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ.

ಹಳೆ ಮತ್ತು ಹೊಸ ಎಣ್ಣೆ ದರ ಹೀಗಿದೆ

  • ಸನ್ ಪ್ಯೂರ್ ಆಯಿಲ್: 108 (ಹಳೆಯ ದರ), 126 ರೂ. (ಈಗಿನ ದರ)
  • ಗೋಲ್ಡ್ ವಿನ್ನರ್: 110 (ಹಳೆಯ ದರ), 126 ರೂ (ಈಗಿನ ದರ)
  • ಫ್ರೀಡಂ: 110 (ಹಳೆಯ ದರ), 124 ರೂ (ಈಗಿನ ದರ)
  • ರುಚಿ ಗೋಲ್ಡ್:  96 (ಹಳೆಯ ದರ), 112 ರೂ (ಈಗಿನ ದರ)
  • ಜೆಮಿನಿ ಸನ್​ ಫ್ಲವರ್: 112 (ಹಳೆಯ ದರ), 127 ರೂ (ಈಗಿನ ದರ)
  • ಫಾರ್ಚುನ್​: 111 (ಹಳೆಯ ದರ), 126 ರೂ (ಈಗಿನ ದರ)
  • ಧಾರಾ: 116 (ಹಳೆಯ ದರ), 130 ರೂ (ಈಗಿನ ದರ)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:06 pm, Thu, 19 September 24

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!