AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cricket betting: ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ: ನದಿಗೆ ಹಾರಿದ ಹಣ್ಣಿನ ವ್ಯಾಪಾರಿ

ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ: ನದಿಗೆ ಹಾರಿದ ಹಣ್ಣಿನ ವ್ಯಾಪಾರಿ: ಸೈಯದ್ ವಾಳದ (38) ನದಿಗೆ ಹಾರಿದ ಹಣ್ಣಿನ ವ್ಯಾಪಾರಿ. ಸೈಯದ್ ವಾಳದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಹಾರಿದ್ದಾನೆ. ಘಟಪ್ರಭಾ ನದಿಗೆ ಹಾರಿದ ವ್ಯಕ್ತಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರಿಂದ ಹುಡುಕಾಟ ಆರಂಭಿಸಲಾಗಿದೆ.

Cricket betting: ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ: ನದಿಗೆ ಹಾರಿದ ಹಣ್ಣಿನ ವ್ಯಾಪಾರಿ
ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ: ನದಿಗೆ ಹಾರಿದ ಹಣ್ಣಿನ ವ್ಯಾಪಾರಿ
TV9 Web
| Updated By: ಸಾಧು ಶ್ರೀನಾಥ್​|

Updated on:Oct 14, 2021 | 12:33 PM

Share

ಬಾಗಲಕೋಟೆ: ಕ್ರಿಕೆಟ್ ಬೆಟ್ಟಿಂಗ್‌ ಪೆಡಂಭೂತ ತನ್ನ ಶಕ್ತ್ಯಾನುಸಾರ ಬಡವ ಧನಿಕ ಅನ್ನದೆ ಒಬ್ಬೊಬ್ಬರನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ. ಕ್ರಿಕೆಟ್ ಬೆಟ್ಟಿಂಗ್‌ ಭೂತ ಬಾಗಲಕೋಟೆಗೂ ಕಾಲಿಟ್ಟಿದ್ದು, ಕ್ರಿಕೆಟ್ ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಅದನ್ನು ತೀರಿಸಲಾಗದೆ ಸ್ಥಳೀಯ ಯುವ ವ್ಯಾಪಾರಿಯೊಬ್ಬ ನದಿಗೆ ಹಾರಿದ್ದಾನೆ. ಸೈಯದ್ ವಾಳದ (38) ನದಿಗೆ ಹಾರಿದ ಹಣ್ಣಿನ ವ್ಯಾಪಾರಿ. ಸೈಯದ್ ವಾಳದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಹಾರಿದ್ದಾನೆ. ಘಟಪ್ರಭಾ ನದಿಗೆ ಹಾರಿದ ವ್ಯಕ್ತಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರಿಂದ ಹುಡುಕಾಟ ಆರಂಭಿಸಲಾಗಿದೆ. ಸೈಯದ್ ವಾಳದ ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ನಿವಾಸಿ.

ಅಕ್ಕೂರು ಠಾಣೆ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಠಾಣೆ ವ್ಯಾಪ್ತಿಯಲ್ಲಿ ಐಪಿಎಲ್​ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕೂರು ಗ್ರಾಮದ ಶಿವಕುಮಾರ್ ಮತ್ತು ರಘು ಬಂಧಿತರು. ಬಂಧಿತರಿಂದ 53,160 ನಗದು, ಮೊಬೈಲ್​ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿ ವೇಳೆ ರಾಜೇಶ್​ ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಕಳೆದ ರಾತ್ರಿ ಡಿಸಿ ಹಾಗೂ ಕೆಕೆಆರ್ ತಂಡಗಳ ನಡುವಿನ ಐಪಿಎಲ್​ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿದ್ದರು

ಇದನ್ನೂ ಓದಿ: ಕಮರಿಪೇಟೆಯಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕ್ರಿಕೆಟ್ ಬೆಟ್ಟಿಂಗ್​, ಅಕ್ರಮ ಮದ್ಯ ಸಂಗ್ರಹಿಸಿದ್ದ ಮೂವರ ಬಂಧನ ಇದನ್ನೂ ಓದಿ: ಐಪಿಎಲ್​ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಇಬ್ಬರ ಬಂಧನ; 16 ಸಾವಿರ ನಗದು, 2 ಮೊಬೈಲ್ ಜಪ್ತಿ

Kotigobba-3 ಮೂವಿ ರಿಲೀಸ್ ಬಗ್ಗೆ ನಿರ್ಮಾಪಕ ಹೇಳಿದ್ದೇನು ಗೊತ್ತಾ? |Kotigobba3|Tv9 Kannada

(suicide attempt cricket betting loan burden leads fruit merchant to ghataprabha river)

Published On - 12:20 pm, Thu, 14 October 21