ದಾವಣಗೆರೆಗೆ ಮತ್ತೊಂದು ಗರಿ; ಮಿಸೆಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ಡಿವೈಎಸ್ಪಿ ಪತ್ನಿ ರಶ್ಮಿ ರಂಗಪ್ಪ
ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಎಂಟು ಸುತ್ತಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಐ ಌಮ್ ಪವರ್ ಫುಲ್ ಪ್ರಶಸ್ತಿ ಪಡೆದಿದ್ದು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ದಾವಣಗೆರೆ: ಜಿಲ್ಲೆ ಜಗಳೂರು ತಾಲೂಕಿನ ಬೆಳಿಚೋಡ ಗ್ರಾಮದ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಎಂಟು ಸುತ್ತಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಐ ಌಮ್ ಪವರ್ ಫುಲ್ ಪ್ರಶಸ್ತಿ ಪಡೆದಿದ್ದು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ರಶ್ಮಿ ಅವರ ಪತಿ ರಂಗಪ್ಪ ದೊಡ್ಡಬಳ್ಳಾಪುರದಲ್ಲಿ ಡಿವೈಎಸ್ಪಿ ಆಗಿದ್ದಾರೆ. ಹಿರಿಯ ಮಗಳ ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾಳೆ ಎರಡನೇ ಮಗಳ ಐದನೇ ತರಗತಿ. ಹೀಗೆ ಸಮೃದ್ಧ ಸಂಸಾರದ ಭಾರ ಹೊತ್ತ ರಶ್ಮಿ ತಾನು ಎನಾದ್ರು ಸಾಧನೆ ಮಾಡಬೇಕೆಂಬ ಹಠ ಮಾತ್ರ ಬಿಟ್ಟಿರಲಿಲ್ಲ. ಇದೇ ಹಠ ಅವರನ್ನ ಇಂದು ದೇಶವೇ ತನ್ನತ್ತ ನೋಡುವಂತೆ ಮಾಡಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ರಶ್ಮಿ ರಂಗಪ್ಪ ಶಿವಣಿಯ ಅಪ್ಪಟ ರೈತನ ಮಗಳು.
ಹುಟ್ಟಿನಿಂದಲೇ ಸೌಂದರ್ಯವತಿ ಆಗಿರುವ ರಶ್ಮಿ ಶಿವಮೊಗ್ಗಾದ ಸಹ್ಯಾದ್ರಿ ಕಾಲೇಜ್ನಲ್ಲಿ ಬಿಕಾಂ ಮುಗಿಸಿದ್ದಾರೆ. ಇಷ್ಟರಲ್ಲಿಯೇ 2004ರಲ್ಲಿ ಪೊಲೀಸ್ ಅಧಿಕಾರಿ ರಂಗಪ್ಪ ಜೊತೆ ವಿವಾಹವಾಯಿತು. ವಿವಾಹದ ಬಳಿಕ ಹತ್ತಾರು ಕಡೆ ಪತಿಯ ವರ್ಗಾವಣೆ ಕಾರಣಕ್ಕೆ ಸುತ್ತಾಟ. ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗಳು ರಿತಿಕಾ ಪಿಯುಸಿ ಓದುತ್ತಿದ್ದಾರೆ ಇನ್ನೊಬ್ಬಳು ರಾಶಿಕ್ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗೆ ಸಂಸಾರವನ್ನ ಸಂಭ್ರಮದಿಂದಲೇ ನಿಭಾಯಿಸಿದ ರಶ್ಮಿ ಅವರು ಬೆಂಗಳೂರು ಸೇರಿದಂತೆ ಹಲವಾರು ಕಡೆ ಗೆಳತಿಯರ ಜೊತೆಗೆ ಸೇರಿ ಕಿಟ್ಟಿ ಪಾರ್ಟಿಗಳನ್ನ ಮಾಡುತ್ತಿದ್ದರು.
ಎಂಟು ಸುತ್ತುಗಳಲ್ಲಿ ಉತ್ತಮ ಸಾಧನೆ ಮಾಡಿದ ರಶ್ಮಿ ಬಹುತೇಕ ಟಿವಿ ಶೋಗಳ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದರು. ಕೆಲ ಸೌಂದರ್ಯ ಸ್ವರ್ಧೆಯಲ್ಲಿ ಕೂಡಾ ಭಾಗ ವಹಿಸಿದ್ದಾರೆ. ಈ ವೇಳೆ ಸ್ಪರ್ಧೆಗಳ ನಡೆಸುವ ನಂದಿನಿ ನಾಗರಾಜ್ ಅವರ ಪರಿಚಯವಾಗಿತ್ತು. ಹೀಗೆ ಹತ್ತು ಹಲವಾರು ಕಾರ್ಯ ಚಟುವಟಿಕೆ ಜೊತೆ ಮನೆ ನಿರ್ವಹಣೆ ಮಾಡುತ್ತಿದ್ದ ರಶ್ಮಿಗೆ ಮಿಸೆಸ್ ಇಂಡಿಯಾ ಐಆಮ್ ಫಾವರ್ ಫುಲ್ ಸ್ಪರ್ಧೆ ಬಗ್ಗೆ ಗೊತ್ತಾಯಿತು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡಿದ್ರು. ನಿರೀಕ್ಷೆಯಂತೆ ಎಂಟು ಸುತ್ತುಗಳಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇದು ವಿಶೇಷವಾಗಿ ಗೃಹಿಣಿಯರಿಗೆ ಮಾತ್ರವೇ ನಡೆಯುವ ಸ್ಪರ್ಧೆ. ವಯಸ್ಸಿನ ಮಿತಿ ಇಲ್ಲಾ. ಆದ್ರೆ ರಾಷ್ಟ್ರೀಯ ಸ್ಪರ್ಧೆಗೆ ಹೋಗುವ ಬಗ್ಗೆ ರಶ್ಮಿ ಹೆಚ್ಚು ಗಮನ ಹರಿಸಲಿಲ್ಲ. ಆದ್ರೆ ಗೆಳೆತಿಯರು ಸಂಬಂಧಿಕರು ಒತ್ತಾಯ ಮಾಡಿದರಿಂದ ಸ್ಪರ್ಧೆಗೆ ಕೇವಲ ಹತ್ತು ದಿನ ಇರುವಾಗಲೇ ತಯಾರಿ ನಡೆಸಿ ಈಗ ಪ್ರಶಸ್ತಿ ಗೆದ್ದಿದ್ದಾರೆ. ಜೈಪುರದಲ್ಲಿ ನಡೆದ ರಾಷ್ಟ್ರೀಯ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವ್ಯಕ್ತಿತ್ವ, ಸಾಮಾನ್ಯ ಜ್ಞಾನ, ವಿಭಿನ್ನ ಶೈಲಿಯ ವಾಕ್, ರಾಪ್ ವಾಕ್, ಈಜುವುದು, ಯೋಗ ಹೀಗೆ ಎಂಟು ಸುತ್ತುಗಳಿದ್ದವು. ವಿಶೇಷವಾಗಿ ಇಂಗ್ಲಿಷ್ ಚನ್ನಾಗಿ ಮಾತಾಡುವ ರಶ್ಮಿ ಪ್ರತಿಯೊಂದು ಸುತ್ತಿನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪ್ರತಿಯೊಂದು ರಾಜ್ಯದಿಂದ ಸ್ಪರ್ಧಿಗಳು ಆಗಮಿಸಿದ್ದರು. ಇಂತಹ ತುರುಸಿನ ಸ್ಪರ್ಧೆಯಲ್ಲಿ ರಶ್ಮಿ ಜಯದ ಮಾಲೆ ಧರಿಸಿದ್ದಾರೆ.
ಬೆಣ್ಣೆ ನಗರಿಯ ಖ್ಯಾತಿಯನ್ನ ರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ್ದಾರೆ. ರಶ್ಮಿ ಅವರಿಗೆ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಕರೆಸಿ ಸನ್ಮಾನಿಸಿದ್ದಾರೆ. ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮದ್ವೆ ಆಯಿತು ಅಂದ್ರೆ ಜೀವನ ಮುಗಿಯಿತು ಎನ್ನುವ ಮಹಿಳೆಯರಿಗೆ ರಶ್ಮಿ ಒಂದು ರೀತಿಯಲ್ಲಿ ಸ್ಪೂರ್ತಿಯಾಗಿದ್ದಾರೆ. ಬರುವ ಮಾರ್ಚ್, ಎಪ್ರೀಲ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮಿಸೆಸ್ ಇಂಡಿಯಾ ಐಎಮ್ ಫಾವರ್ ಫುಲ್ ಸ್ಪರ್ಧೆ ಸಿಂಗಪೂರನಲ್ಲಿ ನಡೆಯುತ್ತಿದೆ. ಇದು ಜಾಗತಿಕ ಮಟ್ಟದ ಸ್ಪರ್ಧೆ ಆದ ಹಿನ್ನೆಲೆ ಇನ್ನಷ್ಟು ಸವಾಲುಗಳು ಎದುರಿಸಬೇಕಾಗುತ್ತಿದೆ. ಇದಕ್ಕಾಗಿ ರಶ್ಮಿ ತಾಲೀಮು ಆರಂಭಿಸಿದ್ದಾರೆ. ಇವರಿಗೆ ಆ ಸ್ಪ ಸ್ಪರ್ಧೆಯಲ್ಲಿ ಜಯ ಸಿಗಲಿ ಮೇಲಾಗಿ ಬೆಣ್ಣೆ ನಗರ ಖ್ಯಾತಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದೇ ನಮ್ಮ ಹಾರೈಕೆ.
ಇದನ್ನೂ ಓದಿ: Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿತಿ ಸ್ಥಿರ; ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ
Published On - 11:48 am, Thu, 14 October 21