ಸಾಂಬಾರ್ ಸರಿಯಿಲ್ಲವೆಂದು ಕಾರವಾರದಲ್ಲಿ ತಾಯಿ, ತಂಗಿಯನ್ನು ಹತ್ಯೆಗೈದ ಯುವಕ!

ಕುಡಿದ ಅಮಲಿನಲ್ಲೇ ಜಗಳವಾಡಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾನೆ. ಕುಡುಕ ಆರೋಪಿ ಮಗನ ವಿರುದ್ಧ ತಂದೆ ನಾರಾಯಣ ಹಸ್ಲರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಂಬಾರ್ ಸರಿಯಿಲ್ಲವೆಂದು ಕಾರವಾರದಲ್ಲಿ ತಾಯಿ, ತಂಗಿಯನ್ನು ಹತ್ಯೆಗೈದ ಯುವಕ!
ಪ್ರಾತಿನಿದಿಕ ಚಿತ್ರ

ಕಾರವಾರ: ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನು ಯುವಕ ಹತ್ಯೆಗೈದಿದ್ದಾನೆ. ಸಾಂಬಾರ್ ಸರಿಯಿಲ್ಲ ಅಂತ ಮದ್ಯದ ನಶೆಯಲ್ಲಿ ಕೊಲೆ ಮಾಡಿದ್ದಾನೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡು ಬಳಿ ಸಂಭವಿಸಿದೆ. ತಾಯಿ ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ತಂಗಿ ರಮ್ಯಾ ನಾರಾಯಣನನ್ನು(19) ಮಂಜುನಾಥ್ ಎಂಬುವವನು ಕೊಲೆ ಮಾಡಿದ್ದಾನೆ. ಸದ್ಯ ಸಿದ್ದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

24 ವರ್ಷದ ಮಂಜುನಾಥ ಹಸ್ಲರ್​ಗೆ ವಿಪರೀತ ಕುಡಿತದ ಚಟ. ನಿನ್ನೆ ಕೂಡಾ ಕುಡಿದು ಬಂದು ಸಾಂಬಾರ್ ಸರಿಯಾಗಿಲ್ಲ ಎಂದು ಮನೆಯಲ್ಲಿ ಜಗಳವಾಡಿದ್ದಾನೆ. ಕುಡಿದ ಅಮಲಿನಲ್ಲೇ ಜಗಳವಾಡಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾನೆ. ಕುಡುಕ ಆರೋಪಿ ಮಗನ ವಿರುದ್ಧ ತಂದೆ ನಾರಾಯಣ ಹಸ್ಲರ್ ಪೊಲೀಸರಿಗೆ ದೂರು ನೀಡಿದ್ದು, ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್, ಬಸ್ ಮಧ್ಯೆ ಡಿಕ್ಕಿ; ಸವಾರನಿಗೆ ಗಾಯ
ಚಾಮರಾಜನಗರ: ಬೈಕ್ ಮತ್ತು ಕೆಎಸ್ಆರ್​ಟಿಸಿ ಬಸ್ ಮಧ್ಯೆ ಡಿಕ್ಕಿಯಾಗಿದ್ದು, ಸವಾರನಿಗೆ ಗಾಯವಾಗಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಬೈಕ್ ಸವಾರ ಮಲ್ಲಣ್ಣ ತಲೆಗೆ ಗಂಭೀರ ಗಾಯವಾಗಿದೆ. ಸಮಯ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಗೂಡ್ಸ್ ವಾಹನದಲ್ಲಿ ಗಾಯಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಲ್ಲಣ್ಣಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ

ಹುಬ್ಬಳ್ಳಿ ಪಾಲಿಕೆ ಕಚೇರಿ ಆವರಣದಲ್ಲಿ ರಾತ್ರೋರಾತ್ರಿ ಗಣೇಶ ಮೂರ್ತಿ ಇಟ್ಟು ಪೂಜೆ ಸಲ್ಲಿಕೆ

Viral News: ರೆಸ್ಟೋರೆಂಟ್​ನಲ್ಲಿ ಬರೋಬ್ಬರಿ 38 ಲಕ್ಷ ರೂ. ಖರ್ಚು ಮಾಡಿ ನಾಲ್ವರ ಡಿನ್ನರ್ ಪಾರ್ಟಿ! ಬಿಲ್​ ಇಲ್ಲಿದೆ ನೋಡಿ

Read Full Article

Click on your DTH Provider to Add TV9 Kannada