ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗಿನ ಫೋಟೋ ವೈರಲ್ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?

Sumalatha Ambareesh: ನಾನು ಸಾರ್ವಜನಿಕ ಜೀವನದಲ್ಲಿ 40 ವರ್ಷದಿಂದ ಇದೀನಿ. ಇಂಥಾ ಒಂದಲ್ಲ ಸಾವಿರಾರು, ಲಕ್ಷಾಂತರ ಫೋಟೋಸ್ ಇದೆ. ನಾವು ಸಿನಿಮಾದಲ್ಲಿ ಮಾಡಿದ ಹಾಡು ಡ್ಯಾನ್ಸ್ ಇದೆ. ಎಲ್ಲವುದನ್ನೂ ಹಾಕೋದಕ್ಕೆ ಹೇಳಿ ಎಂಟರ್ಟೈನ್ಮೆಂಟ್ ಆದ್ರೂ ಸಿಗುತ್ತೆ ಎಂದು ಸುಮಲತಾ ತಿಳಿಸಿದ್ದಾರೆ.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗಿನ ಫೋಟೋ ವೈರಲ್ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?
ಸಂಸದೆ ಸುಮಲತಾ ಅಂಬರೀಶ್ ಮತ್ತು ರಾಕ್‌ಲೈನ್ ವೆಂಕಟೇಶ್
Edited By:

Updated on: Jul 13, 2021 | 1:16 PM

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಮತ್ತು ರಾಕ್ಲೈನ್ ವೆಂಕಟೇಶ್ ಜೊತೆಗಿರುವ ಫೋಟೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಈ ಹಿಂದೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮ ಮತ್ತು ಸುಮಲತಾ ಅಂಬರೀಷ್ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದೂ ರಾಕ್‌ಲೈನ್ ವೆಂಕಟೇಶ್ ಗಂಭೀರ ಆರೋಪ ಮಾಡಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಸಾರ್ವಜನಿಕ ಜೀವನದಲ್ಲಿ 40 ವರ್ಷದಿಂದ ಇದೀನಿ. ಇಂಥಾ ಒಂದಲ್ಲ ಸಾವಿರಾರು, ಲಕ್ಷಾಂತರ ಫೋಟೋಸ್ ಇದೆ. ನಾವು ಸಿನಿಮಾದಲ್ಲಿ ಮಾಡಿದ ಹಾಡು ಡ್ಯಾನ್ಸ್ ಇದೆ. ಎಲ್ಲವುದನ್ನೂ ಹಾಕೋದಕ್ಕೆ ಹೇಳಿ ಎಂಟರ್ಟೈನ್ಮೆಂಟ್ ಆದ್ರೂ ಸಿಗುತ್ತೆ ಎಂದು ಸುಮಲತಾ ಹೇಳಿ ಪ್ರತಿಕ್ರಿಯೆ ಮುಗಿಸಿದರು.

ಹೆಚ್ ಡಿ ಕುಮಾರಸ್ವಾಮಿ ಅವರು ಆಡಿಯೋ ವಿಡಿಯೋ ಬಾಂಬ್ ಎಂದು ಬೆದರಿಕೆ ಹಾಕುವುದು ಹೊಸದಲ್ಲ ಎಂದಿರುವ ರಾಕ್‌ಲೈನ್ ವೆಂಕಟೇಶ್ ಚುನಾವಣೆಯ ವೇಳೆ ಚುನಾವಣಾ ಪ್ರಚಾರಕ್ಕಾಗಿ ನಾವೆಲ್ಲರೂ ಹೋಟೆಲ್‌ನಲ್ಲಿದ್ದೆವು. ಆಗ ನಾನು ಮತ್ತು ಸುಮಲತಾ ಹೋಟೆಲ್‌ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್‌ನ ಸಿಸಿ ಕ್ಯಾಮರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ಅದಕ್ಕೆ ಅಶ್ಲೀಲ ಚಿತ್ರ ಸೇರಿಸಿ ದುರ್ಬಳಕೆಗೆ ಪ್ಲ್ಯಾನ್ ಮಾಡಿದ್ರು. ಅವರ ಚಾನಲ್‌ನಲ್ಲಿದ್ದ ಅಂಬರೀಷ್ ಅಭಿಮಾನಿಯೇ ಇದನ್ನು ನನಗೆ ಹೇಳಿದ್ದರು ಎಂದು ರಾಕ್‌ಲೈನ್ ವೆಂಕಟೇಶ್ ಆರೋಪಿಸಿದ್ದರು.

ಇನ್ನು ಅಕ್ರಮ ಗಣಿಗಾರಿಕೆ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ, ಅಕ್ರಮ ಗಣಿಗಾರಿಕೆ ವಿಚಾರ ಲಾಜಿಕ್ ಎಂಡ್ಗೆ ಕೊಂಡೊಯ್ಯೋದೆ ನನ್ನ ಪ್ರಯತ್ನ. ಆದ್ರೆ ಅದಕ್ಕೊಂದು ವ್ಯವಸ್ಥೆ ಇದೆ. ಇನ್ನೂ ಹೈಯರ್ ಲೆವೆಲ್ ತನಿಖೆಗೆ ಒತ್ತಾಯಿಸ್ತೀನಿ. ಇಲ್ಲಿ ಒತ್ತಡ ಹೆಚ್ಚಿರಬಹುದು ಆ ಸಂದರ್ಭದಲ್ಲಿ ಒಂದು ಸೆಂಟ್ರಲ್ ಏಜನ್ಸಿ ಕರೆತಂದು ತನಿಖೆ ಮಾಡಿದಾಗ ಸರಿಯಾದ ವಿಚಾರ ಗೊತ್ತಾಗುತ್ತೆ. ಆದ್ರೆ ಅಲ್ಲಿ ಬರಿಗಣ್ಣಿಗೆ ಗೊತ್ತಾಗುತ್ತೆ ಯಾವರೀತಿ ಅಕ್ರಮ ನಡೀತಿದೆ ಅಂತ. ಸ್ಥಳೀಯರನ್ನ ಮಾತನಾಡಿಸಿ ಅನ್ನೋ ರಿಕ್ವೆಸ್ಟ್ ಮಾಡಿದ್ದೀನಿ. ಮಂಡ್ಯದಲ್ಲಿ ನಡೆಯುತ್ತಿರೋ ಅಕ್ರಮವನ್ನ ರಾಜ್ಯದ ಜನ ನೋಡ್ಬೇಕಂತ ನನ್ನ ಆಗ್ರಹ. ಸರ್ಕಾರ ಸರಿಯಾಗಿ ತನಿಖೆ ನಡೆಸದಿದ್ರೆ ದೊಡ್ಡ ಮಟ್ಟದ ತನಿಖೆಗೂ ಸಿದ್ದ ಅಂತಾ ರಾಜ್ಯ ಸರ್ಕಾರಕ್ಕೆ ಪರೋಕ್ಷವಾಗಿ ಸುಮಲತಾ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಅಂಬರೀಷ್​​ ಕುಟುಂಬಕ್ಕಾಗಿ ನಾನು ಪ್ರಾಣ ಕೊಡಲೂ ಸಿದ್ಧ’; ರಾಕ್​ಲೈನ್​ ವೆಂಕಟೇಶ್​

Published On - 11:41 am, Tue, 13 July 21

Follow Us