Ernakulam to Yelahanka Garibhrath Superfast Train: ಯಲಹಂಕ ಎರ್ನಾಕುಲಂ ವಿಶೇಷ ರೈಲು ಸೆ. 19ರ ವರೆಗೆ ವಿಸ್ತರಣೆ
ಎರ್ನಾಕುಲಂ ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್ಫಾಸ್ಟ್ ಟ್ರೈ ವೀಕ್ಲಿ ಎಕ್ಸ್ಪ್ರೆಸ್ ರೈಲು ಸೆಪ್ಟೆಂಬರ್ 19ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ನೈಋತ್ವ ರೈಲ್ವೆ ಮಾಹಿತಿ ನೀಡಿದ್ದು, ಯಾವಗಲೆಲ್ಲ ರೈಲು ಸಂಚರಿಸಲಿದೆ ಎಂಬ ಮಾಹಿತಿ ನೀಡಿದೆ. ವಿವರ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 7: ಎರ್ನಾಕುಲಂ ಮತ್ತು ಯಲಹಂಕ ಮಧ್ಯೆ ವಾರಕ್ಕೆ ಮೂರು ದಿನ ಸಂಚರಿಸುವ ವಿಶೇಷ ರೈಲನ್ನು ಸೆಪ್ಟೆಂಬರ್ 19ರ ವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಸೆಪ್ಟೆಂಬರ್ 7ರ ವರೆಗೆ ರೈಲು ಸಂಚರಿಸಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ರೈಲು ಸಂಖ್ಯೆ 06101 / 06102 ಎರ್ನಾಕುಲಂ ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್ಫಾಸ್ಟ್ ಟ್ರೈ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ವಿಸ್ತರಿಸಲಾಗಿದೆ ಎಂದು ಎಕ್ಸ್ ಸಂದೇಶದ ಮೂಲಕ ರೈಲ್ವೆ ತಿಳಿಸಿದೆ.
ಎರ್ನಾಕುಲಂ ಯಲಹಂಕ ಗರೀಬ್ ರಥ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಸೆಪ್ಟೆಂಬರ್ 8, 11, 13, 15 ಹಾಗೂ 18ರಂದು ಸಂಚರಿಸಲಿದೆ. ಯಲಹಂಕ ಎರ್ನಾಕುಲಂ ಗರೀಬ್ ರಥ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಸೆಪ್ಟೆಂಬರ್ 9, 12, 14, 16, 19ರಂದು ಸಂಚರಿಸಲಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ನೈಋತ್ಯ ರೈಲ್ವೆ ಟ್ವೀಟ್
Ernakulam to Yelahanka Garibhrath Superfast special service extended.@SWRRLY pic.twitter.com/t2K2azZqJ1
— DRM Bengaluru (@drmsbc) September 6, 2024
ಗಣೇಶ ಚತುರ್ಥಿಯ ಶುಭಾಶಯ: ನೈಋತ್ಯ ರೈಲ್ವೆ
ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಗಣೇಶನು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಅದೃಷ್ಟವನ್ನು ತುಂಬಲಿ ಎಂದು ಎಕ್ಸ್ ಸಂದೇಶದ ಮೂಲಕ ನೈಋತ್ಯ ರೈಲ್ವೆ ಶುಭಾಶಯ ಕೋರಿದೆ.
ಎಕ್ಸ್ ಸಂದೇಶ
SWR wishes you all a joyful and blessed Ganesh Chaturthi. May Lord Ganesha fill your home with happiness and good fortune.#GaneshChaturthi2024 pic.twitter.com/xDnTZ5ux5Q
— South Western Railway (@SWRRLY) September 7, 2024
ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳು ಮತ್ತು ಸಾಲು ರಜೆಗಳನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಕರ್ನಾಟಕದ ವಿವಿಧ ಸ್ಥಳಗಳಿಗೆ 22 ವಿಶೇಷ ರೈಲುಗಳನ್ನು ಕೆಲವು ದಿನಗಳ ಹಿಂದಷ್ಟೇ ಘೋಷಿಸಿತ್ತು.
ಇದನ್ನೂ ಓದಿ: ಹಬ್ಬಗಳ ಸೀಸನ್ಗೆ ಬೆಂಗಳೂರಿನಿಂದ ವಿವಿಧೆಡೆಗೆ 22 ವಿಶೇಷ ರೈಲುಗಳು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ