ಕಾರ್ಮಿಕರ ಗಲಭೆ ಸಂಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ: ವಿಸ್ಟ್ರಾನ್​ ಸ್ಪಷ್ಟನೆ

ಕಾರ್ಮಿಕರ ಗಲಾಟೆಗೆ ಸಂಬಂಧಿಸಿದಂತೆ ಸರ್ಕಾರದ ತನಿಖೆಯೊಂದಿಗೆ ಆಂತರಿಕ ತನಿಖೆಯೂ ನಡೆಯುತ್ತಿದೆ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತೇವೆ. ತೈವಾನ್​ ಕಚೇರಿಗೆ ಇಲ್ಲಿಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ಕಾರ್ಮಿಕರ ಗಲಭೆ ಸಂಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ: ವಿಸ್ಟ್ರಾನ್​ ಸ್ಪಷ್ಟನೆ
ವಿಸ್ಟ್ರಾನ್​
Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 21, 2020 | 1:59 PM

ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್​ ತಯಾರಿಕ ಘಟಕದಲ್ಲಿ ನಡೆದ ಕಾರ್ಮಿಕರ ಗಲಾಟೆ ಸಂಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ತೈವಾನ್​ ಮೂಲದ ವಿಸ್ಟ್ರಾನ್​ ಕಂಪೆನಿ ತಿಳಿಸಿದೆ.

ಕಾರ್ಮಿಕರ ಗಲಾಟೆಗೆ ಸಂಬಂಧಿಸಿದಂತೆ ಸರ್ಕಾರದ ತನಿಖೆಯೊಂದಿಗೆ ಆಂತರಿಕ ತನಿಖೆಯೂ ನಡೆಯುತ್ತಿದೆ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತೇವೆ. ತೈವಾನ್​ ಕಚೇರಿಗೆ ಇಲ್ಲಿಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ. ನರಸಾಪುರದ ಘಟಕ ಸಣ್ಣಮಟ್ಟದಲ್ಲಿರುವ ಕಾರಣ ಹೆಚ್ಚಿನ ತೊಂದರೆಗಳೇನೂ ಸಂಭವಿಸುವುದಿಲ್ಲ. ಗ್ರಾಹಕರ ಸಮಸ್ಯೆ ಪರಿಹರಿಸಲು ಯಾವುದೇ ಅಡೆತಡೆಗಳಾಗುವುದಿಲ್ಲ ಎಂದು ವಿಸ್ಟ್ರಾನ್​ ಭರವಸೆ ವ್ಯಕ್ತಪಡಿಸಿದೆ.

ಕಾರ್ಮಿಕರ ಆರೋಪದ ಕುರಿತು ನಿನ್ನೆ ಸ್ಪಷ್ಟನೆ ನೀಡಿದ್ದ ವಿಸ್ಟ್ರಾನ್​, ಕೆಲ ಕಾರ್ಮಿಕರಿಗೆ ಸಂಬಳ ನೀಡುವಲ್ಲಿ ವ್ಯತ್ಯಯ ಆಗಿರುವುದು ನಿಜ, ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿತ್ತು. ಸಂಸ್ಥೆಯ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿದಂತೆ ತಯಾರಿಕಾ ಉತ್ಪನ್ನಗಳಿಗೆ ದೊಡ್ಡಮಟ್ಟದ ಹಾನಿಯೇನೂ ಆಗಿಲ್ಲ. ಒಟ್ಟಾರೆ ₹ 52 ಕೋಟಿ ನಷ್ಟವಾಗಿರಬಹುದು ಎಂದು ತಿಳಿಸಿದೆ.

ಆದರೆ, ಆರಂಭದಲ್ಲಿ ಈ ಕುರಿತು ವಿಸ್ಟ್ರಾನ್, ಕಾರ್ಮಿಕರ ದಾಳಿಯಿಂದ ಸುಮಾರು ಹಾನಿಯಾಗಿದೆ. ಅಂದಾಜು ₹ 437 ಕೋಟಿ ನಷ್ಟವಾಗಿದೆ ಎಂದು ಹೇಳಿತ್ತು. ವಿಸ್ಟ್ರಾನ್​ ಗಲಾಟೆಯ ಕುರಿತು ನಿನ್ನೆ ಹೇಳಿಕೆ ನೀಡಿದ್ದ ಆ್ಯಪಲ್​ ಸಂಸ್ಥೆ ವಿಸ್ಟ್ರಾನ್​ ಆಂತರಿಕ ಕಲಹಗಳು ಪರಿಹಾರವಾಗುವ ತನಕ ಯಾವುದೇ ಹೊಸಾ ಯೋಜನೆ ಮಂಜೂರು ಮಾಡುವುದಿಲ್ಲ ಮತ್ತು ಈಗಾಗಲೇ ನೀಡಿರುವ ಕೆಲಸಗಳನ್ನೂ ತಡೆ ಹಿಡಿಯುತ್ತೇವೆ ಎಂದು ತಿಳಿಸಿತ್ತು.

ವಿಸ್ಟ್ರಾನ್​ ಕಂಪನಿಗೆ ಕೊಡಲ್ಲ ಹೊಸ ಉತ್ಪಾದನಾ ಗುತ್ತಿಗೆಗಳು: ಆ್ಯಪಲ್ ಕಟು ನುಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada