ಟ್ಯಾಟೂನಿಂದ ಬರುತ್ತೆ ಹೆಚ್​ಐವಿ, ಕ್ಯಾನ್ಸರ್​: ಆರೋಗ್ಯ ಇಲಾಖೆ ಅಲರ್ಟ್

| Updated By: ವಿವೇಕ ಬಿರಾದಾರ

Updated on: Feb 28, 2025 | 11:47 AM

ಕರ್ನಾಟಕ ಸರ್ಕಾರವು ಟ್ಯಾಟೂ ಹಾಕಿಸಿಕೊಳ್ಳುವ ಮತ್ತು ಹಾಕುವವರಮೇಲೆ ಹೊಸ ಕಾನೂನು ಜಾರಿಗೆ ತರಲು ಯೋಜಿಸಿದೆ. ಇದು ಅನೈರ್ಮಲ್ಯದಿಂದ ಉಂಟಾಗುವ ಸೋಂಕು ತಡೆಯುವ ಉದ್ದೇಶ ಹೊಂದಿದೆ. ಈ ಕಾನೂನು ಟ್ಯಾಟೂ ಆರ್ಟಿಸ್ಟ್‌ಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊಂದಿರುತ್ತದೆ. ಚರ್ಮದ ಕ್ಯಾನ್ಸರ್ ಮತ್ತು ಹೆಚ್ಐವಿಯಂತಹ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುವುದು ಇದರ ಉದ್ದೇಶ.

ಟ್ಯಾಟೂನಿಂದ ಬರುತ್ತೆ ಹೆಚ್​ಐವಿ, ಕ್ಯಾನ್ಸರ್​: ಆರೋಗ್ಯ ಇಲಾಖೆ ಅಲರ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 28: ಟ್ಯಾಟೂ (Tattoo) ಪ್ರಿಯರಿಗೂ ಶಾಕ್ ನೀಡಲು ಆರೋಗ್ಯ ಇಲಾಖೆ (Health Department) ಮುಂದಾಗಿದೆ. ರಾಜ್ಯದಲ್ಲಿ ಟ್ಯಾಟೂ ಹಾಕುವವರಿಗೆ ಮತ್ತು ಹಾಕಿಸಿಕೊಳ್ಳವವರಿಗೆ ಇಬ್ಬರಿಗೂ ಅನ್ವಯವಾಗುವಂತೆ ಹೊಸ ಕಾನೂನು ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೊಸ ಕಾನೂನಿನ ಮೂಲಕ ಅವೈಜ್ಞಾನಿಕವಾಗಿ, ಬೇಕಾಬಿಟ್ಟಿಯಾಗಿ, ಎಲ್ಲೆಂದರಲ್ಲಿ ಟ್ಯಾಟೂ ಹಾಕುವುದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಹೊರಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೊಸ ಕಾನೂನು ಯಾವ ರೀತಿ ಇರಲಿದೆ?

ದೇಶದಲ್ಲಿ ಟ್ಯಾಟೂಗೆ ಯಾವುದೇ ನಿಯಂತ್ರಣ ಕಾನೂನುಗಳಿಲ್ಲ. ಮೊದಲ ಬಾರಿಗೆ ರಾಜ್ಯ ಸರ್ಕಾರ ಟ್ಯಾಟೂಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಟ್ಯಾಟೂ ಹಾಕಿಸಿಕೊಳ್ಳುವರು ಕಡ್ಡಾಯವಾಗಿ ವೈದ್ಯರಿಂದ ತಪಾಸಣೆ ಪತ್ರ ಪಡೆದಿರಬೇಕು. ಟ್ಯಾಟೂ ಹಾಕುವರು ತಾವು ಬಳಸುವ ಬಣ್ಣ, ಕ್ಯಮಿಕಲ್​, ಸೂಜಿ ಮತ್ತು ಸ್ವಚ್ಛತೆ ಕುರಿತಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತಹ ಹೊಸ ಮಾರ್ಗಸೂಚಿಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಟ್ಯಾಟೂದಿಂದ ಬರುತ್ತಿದೆ ಹೆಚ್​ಐವಿ, ಕ್ಯಾನ್ಸರ್​!

ಚರ್ಮ ಕ್ಯಾನ್ಸರ್, ಹೆಚ್​ಐವಿ ಹಾಗೂ ಚರ್ಮ ರೋಗ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಮಾರಣಾಂತಿಕ ಸೋಂಕುಗಳು ಜನರಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಿದಾಗ ಈ ಸೋಂಕುಗಳು ಹರಡಲು ಟ್ಯೂಟೂ ಕೂಡ ಒಂದು ಕಾರಣವಾಗಿದೆ. ಹೀಗಾಗಿ, ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.

ಇದನ್ನೂ ಓದಿ
ಇಡ್ಲಿ ಬಳಿಕ ಬಟಾಣಿಯಲ್ಲೂ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ: ಆರೋಗ್ಯ ಇಲಾಖೆ
ಗೋಬಿ, ಕಬಾಬ್​ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ!
ಆಹಾರದಲ್ಲಿ ಕೃತಕ ಬಣ್ಣ ಬಳಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆ?
ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್​ನಲ್ಲಿರುವ ರೊಡಮೈನ್-ಬಿ ಎಷ್ಟು ಅಪಾಯಕಾರಿ?

ಇದನ್ನೂ ಓದಿ: ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೆ ಬರಬಹುದು ಕ್ಯಾನ್ಸರ್‌! ಆಘಾತಕಾರಿ ವರದಿ ಬಹಿರಂಗ

ಟ್ಯಾಟೂಗೆ ಹಾಕುವ ಕಲರ್​​ನಲ್ಲಿ ಮೆಟಲ್​ ಪತ್ತೆ

ಇನ್ನು, ಟ್ಯಾಟೂಗೆ ಹಾಕುವ ಬಣ್ಣದಲ್ಲಿ ಮೆಟಲ್​ ಇರುವುದು ಪತ್ತೆಯಾಗಿದೆ. ಆಹಾರ ಸುರಕ್ಷತಾ ಇಲಾಖೆ ಟ್ಯಾಟೂಗೆ ಬಳಸುವ ಬಣ್ಣಗಳನ್ನು  ಪರೀಕ್ಷೆಗೆ ಒಳಪಡಿಸಿದೆ. ಪರೀಕ್ಷೆಯಲ್ಲಿ ಟ್ಯಾಟೂಗೆ ಬಳಸುವ  ಬಣ್ಣದಲ್ಲಿ 22 ಮಾದರಿ ಮೆಟಲ್ ಇರುವುದು ಪತ್ತೆಯಾಗಿದೆ.

ಹೋಟೇಲ್​ಗಳ​ ಮೇಲೆ ಆಹಾರ ಇಲಾಖೆ ದಾಳಿ

ಆಹಾರ ಇಲಾಖೆ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಬೆಂಗಳೂರಿನ ವಿವಿಧ ನಗರದಲ್ಲಿನ ಹೋಟೆಲ್​ಗಳಿಗೆ ಭೇಟಿ ನೀಡಿದ್ದಾರೆ. ವಲಯವಾರು ಹೋಟೆಲ್​ಗಳ ಮೇಲೆ ರೇಡ್ ಮಾಡಿರುವ ಆಹಾರ ಇಲಾಖೆ ಅಧಿಕಾರಿಗಳು ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಆಗುತ್ತಿದಿಯಾ ಎಂದು ಪರಿಶೀಲನೆ ನಡೆಸಿದರು. ಪ್ಲಾಸ್ಟಿಕ್​ ಬಳಸುತ್ತಿರುವ ಹೋಟೆಲ್​ಗಳಿಗೆ ನೋಟಿಸ್ ಜೊತೆಗೆ ದಂಡ ಹಾಕುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:38 am, Fri, 28 February 25