ಬೆಳಗಾವಿ: ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಥಳಿಸಿದ ಘಟನೆ ಹುಕ್ಕೇರಿ ತಾಲೂಕಿನ ಅರ್ಜುನವಾಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿ ಕ್ಲಾಸ್‌ನಲ್ಲಿ ಗದ್ದಲ ಮಾಡಿದ್ದಾರೆ ಎಂದು ಕೊಠಡಿಯಿಂದ ಹೊರಗೆ ಕರೆತಂದು ಥಳಿಸಿದ್ದಾರೆ. ಇಂತಹ ಚಿಕ್ಕ ಕಾರಣಕ್ಕೆ ಈ ರೀತಿ ಬಾಸುಂಡೆ ಬರುವಂತೆ ಹೊಡೆಯುವುದು ಸರಿನಾ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಅರ್ಜುನವಾಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಿಂದ ಹೊಡೆತ ತಿಂದ ಮಕ್ಕಳಿಗೆ ಕಾಲು ತೊಡೆಯ ಭಾಗದಲ್ಲಿ ಬಾಸುಂಡೆ ಬಂದಿವೆ. ಶಿಕ್ಷಕಿಯ ಕೃತ್ಯಕ್ಕೆ ಅವರನ್ನು ಅಮಾನತುಗೊಳಿಸಲು ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿ ಬರುತ್ತಿದೆ.
Published On - 2:14 pm, Fri, 13 December 19