Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶಿರಸಿಯ ನಾರಾಯಣ ಭಾಗವತರ ಯಶಸ್ಸಿನ ಗುಟ್ಟೇನು?

Teacher's Day 2023: ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ನಾರಾಯಣ ಪರಮೇಶ್ವರ ಭಾಗವತ ಅವರಿಗೆ ರಾಷ್ಟ್ರಪತಿಗಳು ಸೆ.05, ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪ್ರಶಸ್ತಿ ನೀಡಲಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿ ಬರಲು ಮುಖ್ಯ ಕಾರಣ ರಂಗಭೂಮಿ ಎನ್ನುತ್ತಾರೆ ನಾರಾಯಣ ಭಾಗವತ. ಭಾಗವತರು ಶಿಕ್ಷಣ ಇಲಾಖೆಯಲ್ಲಿನ ತಮ್ಮ 30 ವರ್ಷಗಳ ಅನುಭವವನ್ನು Tv9 ನೊಂದಿಗೆ ಹಂಚಿಕೊಂಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶಿರಸಿಯ ನಾರಾಯಣ ಭಾಗವತರ ಯಶಸ್ಸಿನ ಗುಟ್ಟೇನು?
ನಾರಾಯಣ ಭಾಗವತ
Follow us
ನಯನಾ ಎಸ್​ಪಿ
| Updated By: Digi Tech Desk

Updated on: Sep 04, 2023 | 5:36 PM

ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಶಾಲೆಯಲ್ಲಿ ಶಿಕ್ಷಕರು (Teachers) ಅದೆಷ್ಟೋ ಕಷ್ಟದ ವಿಷಯಗಳ ಮೇಲೆ ಆಸಕ್ತಿ ಹುಟ್ಟಿಸೋ ಕೆಲಸ ಮಾಡುತ್ತಾರೆ. ಶಿಕ್ಷಕರ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂಬ ಕುತೂಹಲ ನಿಮಗಿರಬಹುದು, ಇಂದು ನೀವು ತಮ್ಮ ಅದ್ಭುತ ಸಾಧನೆಗಳಿಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಶಿಕ್ಷಕರ ಬಗ್ಗೆ ಓದಲಿದ್ದೀರಿ. ರಾಷ್ಟ್ರ ಪ್ರಶಸ್ತಿ-2023ಕ್ಕೆ (National Award 2023) ಕರ್ನಾಟಕದಿಂದ ಶಿರಸಿಯ ಶಿಕ್ಷಕ ನಾರಾಯಣ ಪರಮೇಶ್ವರ ಭಾಗ್ವತ್‌ ಆಯ್ಕೆಯಾಗಿದ್ದಾರೆ.

ಶಿರಸಿಯ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ನಾರಾಯಣ ಪರಮೇಶ್ವರ ಭಾಗವತರಿಗೆ ರಾಷ್ಟ್ರಪತಿಗಳು ಸೆ.05, ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪ್ರಶಸ್ತಿ ನೀಡಲಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿ ಬರಲು ಮುಖ್ಯ ಕಾರಣ ರಂಗಭೂಮಿ ಎನ್ನುತ್ತಾರೆ ನಾರಾಯಣ ಭಾಗವತ. ಭಾಗವತರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ 30 ವರ್ಷಗಳ ಅನುಭವವನ್ನು Tv9 ಜೊತೆ ಹಂಚಿಕೊಂಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಭಾಗವತರು ಶಿರಸಿಯ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢ ಶಾಲೆಯಲ್ಲಿ 4 ವರ್ಷಗಳಿಂದ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 150 ವರ್ಷಗಳಿಂದ ಶಿರಸಿಯಲ್ಲಿರುವ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯು ಇಡೀ ರಾಜ್ಯದ ಕೆಲವೇ ಉತ್ತಮ ಸರಕಾರಿ ಪ್ರೌಢಶಾಲೆಗಳಲ್ಲಿ ಒಂದಾಗಿದ್ದು, ಇಲ್ಲಿ ಪ್ರವೇಶ ಪಡೆಯಲು ಸಾಕಷ್ಟು ವಿದ್ಯಾರ್ಥಿಗಳು ಪ್ರಯತ್ನಿಸುತ್ತಾರೆ. ಇದು ಇಂಗ್ಲಿಷ್ ಮೀಡಿಯಂ ಶಾಲೆಯಾದರೂ ಕನ್ನಡವನ್ನು ಮೊದಲ ಭಾಷೆಯಾಗಿ ಕಲಿಸುತ್ತಾರೆ. “ಭಾಷೆ ಬರಿ ಕಲಿಕೆಗೆ ಮಾತ್ರ ಸೀಮಿತವಾಗಿರಬಾರದು ಭಾಷೆ ಜೀವನ ಕಟ್ಟಿಕೊಳ್ಳುವಲ್ಲಿ ಮಕ್ಕಳಿಗೆ ಸಹಾಯ ಮಾಡಬೇಕು, ಧೈರ್ಯವಾಗಿ ಸಂವಹನ ನಡೆಸಲು ಭಾಷೆ ಸ್ಫೂರ್ತಿ ನೀಡಬೇಕು” ಎನ್ನುತ್ತಾರೆ ಭಾಗವತರು.

ಈ ಹಿಂದೆ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಭಾಗವತರ ಬಳಿ ರಾಷ್ಟ್ರಪ್ರಶಸ್ತಿ ಕೂಡ ಸಿಗಬಹುದು ಎಂದು ನಿಮಗೆ ನಂಬಿಕೆ ಇತ್ತಾ? ಎಂದು ಕೇಳಿದಾಗ ಅವರು ಕನ್ನಡ ಶಿಕ್ಷಕನಾಗಿ ಪಠ್ಯಪುಸ್ತಕದಲ್ಲಿರುವ ಪಾಠದ ಹೊರತಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಹೇಗೆ ಕೊಡುಗೆ ನೀಡಿದ್ದಾರೆ ಎಂಬುದನ್ನು ಹಂಚಿಕೊಂಡರು . ಇದೊಂದು ಸ್ಫೂರ್ತಿ ಕತೆ ಎಂದರೆ ತಪ್ಪಾಗಲಾರದು. ಕೆಲಸ ಮುಗಿದ ತಕ್ಷಣ ಮನೆಗೆ ಹೋಗವ ಶಿಕ್ಷಕರಿರುವ ಈ ಕಾಲದಲ್ಲಿ ನಾರಾಯಣ ಭಾಗವತರು ಮಕ್ಕಳಿಗೆ ಪಾಠದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ, ಆಸಕ್ತಿ ಬೆಳೆಸಿಕೊಳ್ಳುಲು  ಅವಕಾಶ ನೀಡುತ್ತಿದ್ದಾರೆ.

ಮಕ್ಕಳಿಗೆ ಪಾಠದ ಜೊತೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿರುವ ಮೂಕಾಂಬಿಕಾ ಶಾಲೆಗೆ ಭಾಗವತರು ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ. ರಂಗಭೂಮಿಯಲ್ಲೂ ಪದವಿ ಹೊಂದಿರುವ ನಾರಾಯಣ ಭಾಗವತರು ರಂಗಭೂಮಿಯಲ್ಲಿ ತಾವು ಕಲಿತ ಪಾಠವನ್ನು ಮಕ್ಕಳಿಗೆ ಎರೆಯುತ್ತೀದ್ದಾರೆ. ಕರೋನ ನಂತರ ಯಾವುದೇ ಹೊರಾಂಗಣ ಚಟುವಟಿಕೆಗಳಿಲ್ಲದೆ ನೊಂದಿದ್ದ ವಿದ್ಯಾರ್ಥಿಗಳನ್ನು ಸೇರಿಸಿ ‘ದಿ ಸ್ಟೋರಿ ಆಫ್ ವ್ಯಾಕ್ಸೀನ್‘ ಎಂಬ ನಾಟಕವನ್ನು ಪ್ರದರ್ಶಿಸಿದರು, ಇದು ರಾಷ್ಟೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಈ ಕುರಿತು ಮಾತನಾಡಿದ ಭಾಗವತರು, “ಕನ್ನಡ ಶಿಕ್ಷಕನಾಗಿರುವ ನನಗೆ ವಿಜ್ಞಾನದ ವಿಷಯ ತೆಗೆದುಕೊಂಡು ಮಕ್ಕಳಲ್ಲಿ ನಾಟಕ ಮಾಡಿಸುವುದು ಒಂದು ಸವಾಲಾಗಿತ್ತು, ಆದರೆ ಸ್ಥಳೀಯ ಭಾಷೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದನ್ನು ನೋಡಿ ಸಂತೋಷವಾಯಿತು” ಎಂದು ಹೇಳಿದರು.

ಹೀಗೆ ಮಕ್ಕಳಿಗೆ ಬರೀ ಪಾಠ ಮಾಡುವುದಲ್ಲದೆ ಮಕ್ಕಳ ಸಂಪೂರ್ಣ ಬೆಳವಣಿಯಲ್ಲಿ ಇವರು ಕೊಡುಗೆ ನೀಡುತ್ತಿದ್ದಾರೆ. ಮಕ್ಕಳ ಅಧ್ಯಯನಕ್ಕೆ ತೊಂದರೆಯಾಬಾರದೆಂದು ಶನಿವಾರ ಸಂಜೆ ಮತ್ತು ಭಾನುವಾರ ರಂಗ ತರಬೇತಿ, ಶಿಬಿರಗಳನ್ನು ಕೈಗೆತ್ತಿಕೊಂಡಿದ್ದಾರೆ. ಎಲ್ಲ ತರಗತಿಯ ಆಸಕ್ತ ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣ ಪಾಠವನ್ನು ಮಾಡುತ್ತಾರೆ. 9:30 ಗೆ ಶಾಲೆ ಪ್ರಾರಂಭವಾದರೆ ಇವರ 8:30 ಯ ಕನ್ನಡ ವ್ಯಾಕರಣ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಿರುತ್ತಾರೆ. ಮಕ್ಕಳಿಗೆ ಪಾಠ, ಸಾಂಸ್ಕೃತಿಕ ಚಟುವಟಿಕೆಗಳಲ್ಲದೆ ಕ್ರಾಫ್ಟ್ ಕೂಡ ಹೇಳಿಕೊಡುತ್ತಾರೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲು ಸ್ಫೂರ್ತಿ ಸ್ವತಃ ಮಕ್ಕಳು ತೋರಿಸುವ ಆಸಕ್ತಿ, ಪೋಷಕರ ಮತ್ತು ಶಾಲೆಯಿಂದ ಸಿಗುತ್ತಿರುವ ಬೆಂಬಲ ಎಂದು ನಾರಾಯಣ ಭಾಗವತರು ಹೇಳುತ್ತಾರೆ.

ಮಕ್ಕಳಿಗೆ ಕಲಿಸುವುದಲ್ಲದೆ ಭಾಗವತರು ಶಿಕ್ಷಕರಿಗೂ ಹಳೆಗನ್ನಡವನ್ನು ಕಳಿಸುತ್ತಾರೆ, ಅವರ ನುಗನ್ನಡ ಬ್ಲಾಗ್ ಮೂಲಕ ಶಿಕ್ಷಕರಿಗೆ ಸಹಾಯವಾಗಲು ತಮ್ಮ ಪಿಪಿಟಿಗಳನ್ನು, ಪಾಠಗಳನ್ನು ಶೇರ್ ಮಾಡುತ್ತಾರೆ. ಕರೋನಾಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಕನ್ನಡ ಶಿಕ್ಷಕರ ನೆರವಿನಿಂದ 13 ಪಾಠ ನಾಟಕ ಸ್ವತ್ಃ ಇವರೇ ಎಡಿಟಿಂಗ್ ಮಾಡಿ ರಾಜ್ಯದ ವಿದ್ಯಾರ್ಥಿಗಳ ಕಲಿಕೆಗೆ ಇದರಿಂದ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ಅರ್ಚಕರಿಗೆ ಗುಡ್ ನ್ಯೂಸ್, ತಸ್ತಿಕ್​​ ಹಣ ರಿಲೀಸ್​

ಮನೆ, ಕುಟುಂಬ, ಶಾಲೆ, ರಂಗಭೂಮಿ ಇವೆಲ್ಲವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತೀರಿ ಎಂದು ಕೇಳಿದಾಗ ಇದರ ಸಂಪೂರ್ಣ ಕ್ರೆಡಿಟ್ ತಮ್ಮ ಪತ್ನಿ ಮಾದೇವಿ ಹೆಗಡೆ ಅವರಿಗೆ ನೀಡುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಇರುವ ಭಾಗವತರ ಎಲ್ಲ ಕೆಲಸಗಳಿಗೂ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹಾಗೆಯೇ ಇವರ ಇಬ್ಬರ ಮಕ್ಕಳು ಸ್ವಾತಿ ಮತ್ತು ಸಾತ್ವಿಕ್ ಅವರು ಕೂಡ ಸಹಾಯ ಮಾಡಿದ್ದಾರೆ ಎಂದು ನಾರಾಯಣ ಭಾಗವತರು ಹೇಳಿದರು. ವಿಜ್ಞಾನ ವಿಷಯಗಳಿಗೆ ಲ್ಯಾಬ್ ಇರುವಂತೆ ಭಾಷಾ ಲ್ಯಾಬ್ ಅಥವಾ ಕನ್ನಡ ಲ್ಯಾಬ್ ಅನ್ನು ಪ್ರಾರಂಭಿಸುವುದು ಇವರ ಮುಂದಿನ ಕನಸಾಗಿದೆ. ಇವರ ಮುಂದಿನ ಎಲ್ಲ ಯೋಜನೆಗಳು ಯಶಸ್ವಿಯಾಗಲಿ!

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್