ಬೆಂಗಳೂರು: ರೆಮ್‌ಡಿಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆಗೆ ವ್ಯವಸ್ಥೆ ಮಾಡಲಾಗಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಇಂದು (ಮೇ 23) ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಸೋಂಕಿತರ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗುತ್ತದೆಯೋ, ಆ ಆಸ್ಪತ್ರೆಗೆ ಔಷಧ ಹಂಚಿಕೆಯ ಬಗ್ಗೆ ಸಂದೇಶ ಕಳಿಸಲಾಗುತ್ತದೆ. ಜನರು ಈ ಲಿಂಕ್ ಮೂಲಕ ತಮಗೆ ಹಂಚಿಕೆಯಾಗಿರುವ ಔಷಧದ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.
ಒಂದುವೇಳೆ ಸೋಂಕಿತರ ಎಸ್ಆರ್ಎಫ್ ಐಡಿಗೆ ಔಷಧ ಹಂಚಿಕೆಯಾಗಿ, ಆಸ್ಪತ್ರೆ ಅದನ್ನು ಆ ವ್ಯಕ್ತಿ ಚಿಕಿತ್ಸೆಗೆ ಒದಗಿಸದಿದ್ದಲ್ಲಿ ವರದಿ ಮಾಡಬೇಕು. ಇದೇ ಲಿಂಕ್ ಮೂಲಕ ಸರ್ಕಾರಕ್ಕೆ ವರದಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ.ಸುಧಾಕರ್ ಹೇಳಿದ್ದಾರೆ. ಈ ಪಾರದರ್ಶಕ ವ್ಯವಸ್ಥೆಯಿಂದ ರೆಮ್‌ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋಣ ಎಂದು ಅವರು ತಿಳಿಸಿದ್ದಾರೆ.
ರೆಮ್‌ಡಿಸಿವಿರ್ ಅಕ್ರಮ ಮಾರಾಟ; ಈವರೆಗಿನ ಪ್ರಕರಣಗಳ ವಿವರ
ನಗರದಲ್ಲಿ ಅಕ್ರಮವಾಗಿ ರೆಮ್‌ಡಿಸಿವಿರ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಈವರೆಗೂ ಸಿಸಿಬಿ ಪೊಲೀಸರಿಂದ 57 ಆರೋಪಿಗಳನ್ನು ಬಂಧಿಸಲಾಗಿದೆ. 24 ಕೇಸ್ ದಾಖಲಿಸಿ 121 ರೆಮ್‌ಡಿಸಿವಿರ್ ಇಂಜೆಕ್ಷನ್ ಜಪ್ತಿ ಮಾಡಲಾಗಿದೆ. ಸಿಸಿಬಿ ಕಾರ್ಯಾಚರಣೆಯ ಬಗ್ಗೆ ವಿಭಾಗವಾರು ಮಾಹಿತಿ ಲಭ್ಯವಾಗಿದೆ.
ವಿಶೇಷ ವಿಚಾರಣಾ ದಳದ ವಿಭಾಗದಲ್ಲಿ 4 ಕೇಸ್ ದಾಖಲಾಗಿದ್ದು, 8 ಜನ ಸೆರೆಯಾಗಿದ್ದಾರೆ. $5 ಲಕ್ಷ 30 ಸಾವಿರ ಮೌಲ್ಯದ 22 ರೆಮ್‌ಡಿಸಿವಿರ್ ವಶಕ್ಕೆ ಪಡೆಯಲಾಗಿದೆ. ಆರ್ಥಿಕ ಅಪರಾಧ ದಳ ವಿಭಾಗದಲ್ಲಿ 3 ಕೇಸ್ ದಾಖಲಾಗಿದೆ. 6 ಜನ ಸೆರೆಯಾಗಿದ್ದಾರೆ. $8 ಲಕ್ಷ 30 ಸಾವಿರ ಮೌಲ್ಯದ 14 ರೆಮ್‌ಡಿಸಿವಿರ್ ವಶಕ್ಕೆ ಪಡೆಯಲಾಗಿದೆ. ಮಾದಕ ದ್ರವ್ಯ ನಿಗ್ರಹ ದಳದಲ್ಲಿ 2 ಕೇಸ್ ದಾಖಲಾಗಿದೆ. ಮೂವರ ಬಂಧನವಾಗಿದೆ. $1 ಲಕ್ಷ 40 ಸಾವಿರ ಮೌಲ್ಯದ 7 ರೆಮ್‌ಡಿಸಿವಿರ್ ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ದಳದಲ್ಲಿ 6 ಕೇಸ್ ದಾಖಲಾಗಿದೆ. 15 ಆರೋಪಿಗಳ ಬಂಧನ ಮಾಡಲಾಗಿದ್ದು, $5 ಲಕ್ಷ 40 ಸಾವಿರ ಮೌಲ್ಯದ 27 ರೆಮ್‌ಡಿಸಿವಿರ್ ವಶಕ್ಕೆ ಪಡೆಯಲಾಗಿದೆ.
ಪೂರ್ವ ವಿಭಾಗದ ಸಂಘಟಿತ ಅಪರಾಧ ದಳದಲ್ಲಿ 2 ಪ್ರಕರಣ ದಾಖಲಾಗಿದೆ. ಎರಡು ಕೇಸ್ ದಾಖಲಿಸಿಕೊಂಡು 8 ಆರೋಪಿಗಳ ಬಂಧನವಾಗಿದೆ. 18 ಸಾವಿರ ರೂಪಾಯಿ ಮೌಲ್ಯದ 18 ರೆಮ್‌ಡಿಸಿವಿರ್ ಜಪ್ತಿ ಮಾಡಲಾಗಿದೆ. ಮಹಿಳಾ ಸಂರಕ್ಷಣಾ ದಳದಲ್ಲಿ 7 ಕೇಸ್ ದಾಖಲಾಗಿದ್ದು, 17 ಜನರ ಬಂಧನವಾಗಿದೆ. $1 ಲಕ್ಷ 17 ಸಾವಿರ ಮೌಲ್ಯದ 33 ರೆಮ್‌ಡಿಸಿವಿರ್ ವಶಕ್ಕೆ ಪಡೆಯಲಾಗಿದೆ. ರೆಮ್‌ಡಿಸಿವಿರ್ ಔಷಧವನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಅಕ್ರಮವಾಗಿ ಮಾರುತ್ತಿದ್ದರು ಎಂದು ತಿಳಿದುಬಂದಿದೆ. ಈ ದಂಧೆಯ ಪ್ರಮುಖ ಆರೋಪಿಗಳಿಗಾಗಿ ಸಿಸಿಬಿಯಿಂದ ಶೋಧಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ
PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!
Published On - 10:41 pm, Sun, 23 May 21