AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿ ಮಾರಾಟ: ಬಳ್ಳಾರಿಯ 9 ಜನರ ವಿರುದ್ದ ಎಫ್ಐಆರ್

ಬಳ್ಳಾರಿ ನಗರದಲ್ಲಿ ಸರ್ಕಾರಿ ಆಸ್ತಿಗೆ ಬೇಲಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ನಕಲಿ ದಾಖಲಾತಿಗಳನ್ನ ಸೃಷ್ಟಿ ಮಾಡಿ ಮಾರಾಟ ಮಾಡುವವರು ಕೂಡ ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಸರ್ಕಾರಿ ಇಲಾಖೆಯ ಅಧಿಕಾರಿಗಳೇ ಸರ್ಕಾರಿ ಆಸ್ತಿ ಗುಳುಂ ಮಾಡಲು ಸಾಥ್ ನೀಡುತ್ತಿರುವುದು ತನಿಖೆಯಿಂದ ಬಯಲಾಗುತ್ತಿದೆ.

ಕೋಟಿ ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿ ಮಾರಾಟ: ಬಳ್ಳಾರಿಯ 9 ಜನರ ವಿರುದ್ದ ಎಫ್ಐಆರ್
ಸರ್ಕಾರ ಜಾಗಕ್ಕೆ ಬೇಲಿ
sandhya thejappa
| Edited By: |

Updated on: Mar 04, 2021 | 12:23 PM

Share

ಬಳ್ಳಾರಿ: ಜಿಲ್ಲೆಯಲ್ಲಿ ತುಂಡು ಭೂಮಿಗೂ ಬಂಗಾರದ ಬೆಲೆ ಇದೆ. ಗಣಿನಾಡು ಬಳ್ಳಾರಿ ನಗರದಲ್ಲಿರುವ ಭೂಮಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಾಗಿ ಕೆಲವರು ಸರ್ಕಾರಿ ಆಸ್ತಿಗಳನ್ನೇ ಗುಳುಂ ಮಾಡುತ್ತಿದ್ದಾರೆ. ಸರ್ಕಾರಿ ಆಸ್ತಿಗೆ ನಕಲಿ ದಾಖಲಾತಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿರುವ ಪ್ರಕರಣ ಈಗ ಬಯಲಾಗಿದೆ. ಕೋಟಿ ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿಗೆ ಕೆಲವರು ಈಗ ಬೇಲಿ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಬಳ್ಳಾರಿ ನಗರದಲ್ಲಿ ಸರ್ಕಾರಿ ಆಸ್ತಿಗೆ ಬೇಲಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ನಕಲಿ ದಾಖಲಾತಿಗಳನ್ನ ಸೃಷ್ಟಿ ಮಾಡಿ ಮಾರಾಟ ಮಾಡುವವರು ಕೂಡ ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಸರ್ಕಾರಿ ಇಲಾಖೆಯ ಅಧಿಕಾರಿಗಳೇ ಸರ್ಕಾರಿ ಆಸ್ತಿ ಗುಳುಂ ಮಾಡಲು ಸಾಥ್ ನೀಡುತ್ತಿರುವುದು ತನಿಖೆಯಿಂದ ಬಯಲಾಗುತ್ತಿದೆ. ಯಾಕೆಂದರೆ ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿ ಕೋಟಿ ಕೋಟಿ ಬೆಲೆಬಾಳುವ ಅರಣ್ಯ ಇಲಾಖೆಯ ಜಾಗವನ್ನ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿರುವುದು ಈಗ ಗೊತ್ತಾಗಿದೆ.

ದೂರು ನೀಡಿದ ತಹಶೀಲ್ದಾರ್ 60/70 ಅಡಿ ಸುತ್ತಳತೆಯ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನ ಸೈಯದ್ ಬಾಷಾ ನಕಲಿ ದಾಖಲಾತಿಗಳನ್ನ ಸೃಷ್ಟಿ ಮಾಡಿ ನೊಂದಾಣಿ ಮಾಡಿಸಿಕೊಂಡಿದ್ದಾರೆ. ಈ ಜಾಗವನ್ನ ಅಶ್ರಫ್ ಅಲಿ ಅವರಿಗೆ 36,30,000 ಲಕ್ಷ ರೂ. ಗಳಿಗೆ ಮಾರಾಟ ಮಾಡಿದ್ದಾರೆ. ಅಶ್ರಫ್ ಅಲಿ ಇದೇ ಜಾಗವನ್ನ 1,57,50,000 ಕೋಟಿ ರೂ. ಗೆ ಖಾಸಗಿ ಬ್ಯಾಂಕ್ಗೆ ಮಾರಾಟ ಮಾಡಿದ್ದಾರೆ.

ಜಾಗ ಖರೀದಿಸಿದ ಖಾಸಗಿ ಬ್ಯಾಂಕ್ ಈ ಜಾಗದಲ್ಲಿ ನಾಮ ಫಲಕ ಹಾಕಿತ್ತು. ಇದನ್ನ ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ಗೆ ದೂರು ನೀಡಿದ್ದಾರೆ. ದಾಖಲಾತಿಗಳನ್ನ ಪರಿಶೀಲನೆ ನಡೆಸಿದಾಗ ನಕಲಿ ದಾಖಲಾತಿ ಸೃಷ್ಟಿಸಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನ ಮಾರಾಟ ಮಾಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ತಹಶೀಲ್ದಾರ್​ರಾದ ರೆಹಮಾನ್ ಪಾಶಾ ಅಧಿಕಾರಿಗಳು ಸೇರಿ 9 ಜನರ ವಿರುದ್ಧ ಕೌಲ್​​ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸರ್ಕಾರದ ಭೂಮಿ

ತಹಶೀಲ್ದಾರ್ ದೂರು ನೀಡಿದ ಹಿನ್ನೆಲೆಯಲ್ಲಿ ಕೌಲಬಜಾರ್ ಠಾಣೆಯಲ್ಲಿ ಸಿ.ಪ್ರಹ್ಲಾದ್, ಮಹ್ಮದ್ ಹುಸೇನ್, ಭೂಮಾಪಕರು ಹಾಗೂ ಸರ್ವೆ ಇಲಾಖೆಯ ಮಲ್ಲಿಕಾರ್ಜುನ, ಸುಮನಾಯ್ಕ ಸೇರಿದಂತೆ ಸೈಯದ್ ಬಾಷಾ, ಎಂ.ಎಸ್.ಜಾಕೀರ್ ಹುಸೇನ್, ಅಶ್ರಫ್ ಅಲಿ, ಖಾಸಗಿ ಬ್ಯಾಂಕ್ ವ್ಯವಸ್ಥಾಪಕರು, ಸೇರಿದಂತೆ ಒಟ್ಟು 9 ಜನರ ವಿರುದ್ಧ ಸರ್ಕಾರಿ ಆಸ್ತಿಯನ್ನ ಅಕ್ರಮವಾಗಿ ಕಬಳಿಕೆ ಮಾಡಿದ ಹಿನ್ನಲೆಯಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತಿಯೇ ಆರೋಪಿಗಳು ತಲೆಮರೆಯಿಸಿಕೊಂಡಿದ್ದು, ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಬಳ್ಳಾರಿ ನಗರದಲ್ಲಿ ಸರ್ಕಾರಿ ಆಸ್ತಿಯನ್ನ ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲಾಡಳಿತ ಇಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ

ಭರವಸೆ ಈಡೇರಿಸದ ಸರ್ಕಾರ: ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಸಾರಿಗೆ ನೌಕರರು

ಬೆಂಗಳೂರಿನ‌ ವ್ಯಕ್ತಿಗೆ ಅಕ್ರಮವಾಗಿ ಸರ್ಕಾರಿ ಭೂಮಿ: ಅಧಿಕಾರಿಗಳಿಗೆ DC ಸತ್ಯಭಾಮಾ ತರಾಟೆ