ಬೆಂಗಳೂರಿನ‌ ವ್ಯಕ್ತಿಗೆ ಅಕ್ರಮವಾಗಿ ಸರ್ಕಾರಿ ಭೂಮಿ: ಅಧಿಕಾರಿಗಳಿಗೆ DC ಸತ್ಯಭಾಮಾ ತರಾಟೆ

  • TV9 Web Team
  • Published On - 10:03 AM, 5 Sep 2020
ಬೆಂಗಳೂರಿನ‌ ವ್ಯಕ್ತಿಗೆ ಅಕ್ರಮವಾಗಿ ಸರ್ಕಾರಿ ಭೂಮಿ: ಅಧಿಕಾರಿಗಳಿಗೆ DC ಸತ್ಯಭಾಮಾ ತರಾಟೆ

ಕೋಲಾರ: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪ ಕೇಳಿ ಬಂದ ಕೂಡಲೇ ರಾತ್ರೋರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ಜಿಲ್ಲಾಧಿಕಾರಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಕೋಲಾರ ತಾಲೂಕಿನಲ್ಲಿರುವ ಮಡಿವಾಳ ಬಳಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಮೀನನ್ನು, ಅಧಿಕಾರಿಗಳು ಅಕ್ರಮವಾಗಿ ಬೆಂಗಳೂರು ಮೂಲದ‌ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದರು.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ಡಿಸಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ರಮ ನಡೆದಿರುವುದು ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.