ತುಮಕೂರು: ಜಿಲ್ಲೆಯ ಶಿರಾ ಮೂಲದ ವೈದ್ಯ ಡಾ. ಅರುಣ್ ರಂಗನಾಥ್ ಅಮೆರಿಕದಲ್ಲಿನ ಕೊರೊನಾ ಸಂಬಂಧಿಸಿದ ಫೈಜರ್ ಲಸಿಕೆಯ ಮೊದಲ ಡೋಸ್ಅನ್ನು ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇತ್ತ ಭಾರತದಲ್ಲಿ ಕೊರೊನಾ ಕ್ರಿಮಿಯ ಕರಾಳ ಹೆಜ್ಜೆಗಳು ಕೋಟಿ ದಾಟಿವೆ. ಹೀಗಿರುವಾಗ ದೂರದ ಅಮೆರಿಕದಲ್ಲಿ ನಮ್ಮ ಕನ್ನಡಿಗನೇ ಕೊರೊನಾದ ಲಸಿಕೆ ಪಡೆದಿರುವುದು ತುಸು ಸಮಾಧಾನಕರ ವಿಷಯವಾಗಿದೆ. ತನ್ಮೂಲಕ ಭಾರತೀಯರಿಗೆ ಭರವಸೆಯ ಬೆಳಕಾಗಿದ್ದಾರೆ. ನಮ್ಮವನೇ ಕೊರೊನಾ ಲಸಿಕೆ ತೆಗೆದುಕೊಂಡಿದ್ದಾನೆ. ನೋಡೊಣಾ ಮುಂದೇನಾಗುತ್ತದೋ ಎಂದು ಕನ್ನಡಿಗರು ಪಿಸು ಮಾತುಗಳನ್ನಾಡುತ್ತಿದ್ದಾರೆ.
ಗೆಳೆಯರೊಂದಿಗೆ ಡಾ. ಅರುಣ್ ರಂಗನಾಥ್
ಹೌದು ಕಳೆದ ಮಾರ್ಚ್ ತಿಂಗಳಿನಿಂದಲೂ ಅಮೆರಿಕದಲ್ಲಿ ದಿನದ 15 ಗಂಟೆಗಳ ಕಾಲ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿರುವ ವೈದ್ಯ ಡಾ. ರಂಗನಾಥ್ ಅಮೆರಿಕದಲ್ಲಿ ಉತ್ತಮ ಹೆಸರು ಸಂಪಾದಿಸಿದ ವೈದ್ಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಅಮೆರಿಕದಲ್ಲಿ ಫೈಜರ್ ಲಸಿಕೆ ನೀಡುವ ಕಾರ್ಯ ಆರಂಭವಾಗಿದ್ದರೂ ಅಡ್ಡಪರಿಣಾಮದ ಭಯ ಜನರಲ್ಲಿ ಇದೆ. ಈ ನಡುವೆ ವೈದ್ಯ ಡಾ. ರಂಗನಾಥ್ ಮೊದಲ ಹಂತವಾಗಿ ಕಳೆದ ಎರಡು ದಿನಗಳ ಹಿಂದೆಯಷ್ಟೇ 3 ಸಿಸಿ ಲಸಿಕೆಯ ಹನಿಯನ್ನು ಪಡೆದಿದ್ದು, ಕೋವಿಡ್ ಲಸಿಕೆಯ ಫಲಿತಾಂಶಕ್ಕೆ ಇವರು ಮುನ್ನುಡಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಹೌದಾ! ಕೊರೊನಾ Vaccine ಒಮ್ಮೆ ತೆಗೆದುಕೊಂಡರೇ ಸಾಕಾಗಲ್ವಾ? ಮತ್ತೆ ಹೆಂಗೆ?