ಅರಮನೆಯಂತಹ ಗುಡಿಸಲು ಬಿದ್ದೋಯ್ತು, ಬೆಳ್ಳನಿಗೊಂದು ‘ಸೂರು’ ಕೊಡಿಸುವಿರಾ?

| Updated By: Rakesh Nayak Manchi

Updated on: May 25, 2022 | 11:43 AM

ಶೃಂಗೇರಿ ತಾಲೂಕಿನ ಯಡದಾಳು ಸಮೀಪದ ಎತ್ತುಬುಡಿಕೆ ಗ್ರಾಮದ ಬೆಳ್ಳ ಎಂಬ ವೃದ್ಧರೊಬ್ಬರು ವಾಸಿಸುತ್ತಿದ್ದ ಗುಡಿಸಲು ಮನೆ, ಮಳೆಯಿಂದಾಗಿ ನೆಲಸಮವಾಗಿದೆ. ಇದ್ದ ಸೂರು ಕಳೆದುಕೊಂಡ ಬೆಳ್ಳನಿಗೆ ಸೂಕ್ತ ಸೂರು ನಿರ್ಮಾಣ ಮಾಡಿಕೊಡುವ ಅವಶ್ಯಕತೆ ಇದೆ.

ಅರಮನೆಯಂತಹ ಗುಡಿಸಲು ಬಿದ್ದೋಯ್ತು, ಬೆಳ್ಳನಿಗೊಂದು ಸೂರು ಕೊಡಿಸುವಿರಾ?
ಮಳೆಗೆ ನೆಲಸಮವಾದ ಗುಡಿಸಲು
Follow us on

ಚಿಕ್ಕಮಗಳೂರು:  ಜಿಲ್ಲೆ ಶೃಂಗೇರಿ ತಾಲೂಕಿನ ಯಡದಾಳು ಸಮೀಪದ ಎತ್ತುಬುಡಿಕೆ ಗ್ರಾಮದ ಬೆಳ್ಳ ಎಂಬ ವೃದ್ಧರೊಬ್ಬರು ತನ್ನ ಪತ್ನಿಯೊಂದಿಗೆ ಅರಮನೆಯಂತಹ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಧಾರಾಕಾರ ಮಳೆ (Rain) ಸುರಿದು ಗುಡಿಸಲು (hut) ನೆಲಸಮವಾಗಿದೆ. ಇದ್ದ ಒಂದು ಗುಡಿಸಲು ಬಿದ್ದುಹೋಗಿ ಸರಿಯಾಗಿ ನಿಲ್ಲಲು ನೆಲೆ ಇಲ್ಲದಂತಾಗಿದೆ. ಬಡಪಾಯಿ ದಿನಗೂಲಿ ಕಾರ್ಮಿಕನಾಗಿರುವ ಬೆಳ್ಳನ ಮನೆ ಧರೆಗುರುಳಿದ್ದು ಯಾರಿಗೂ ಲೆಕ್ಕಕ್ಕೇ ಇಲ್ಲ.

ಒಬ್ಬ ಸಾಮಾನ್ಯ, ಮಧ್ಯಮ ಅಥವಾ ಶ್ರೀಮಂತನ ಮನೆಯೊಂದು ಬಿದ್ದಿದ್ದರೆ ಸರ್ಕಾರಿ ದಾಖಲೆಗಳಲ್ಲಿ ಲೆಕ್ಕಕ್ಕೆ ಸಿಗುತ್ತಿತ್ತು. ಆದರೆ ಬೆಳ್ಳನ ಗುಡಿಸಲು ಮಾತ್ರ ಸರ್ಕಾರಿ ದಾಖಲೆ ಸೇರಿಲ್ಲ. ಸಾಮಾನ್ಯವಾಗಿ ಗುಡಿಸಲಿನ ಮನೆಯಲ್ಲಿ ವಿದ್ಯುತ್, ಗ್ಯಾಸ್ ಸೌಲಭ್ಯ ಇರುವುದಿಲ್ಲ. ಬೆಳ್ಳ ಪರಿಶಿಷ್ಟ ವರ್ಗಕ್ಕೆ ಸೇರಿದ್ದರೂ, ಮಾಹಿತಿಯ ಕೊರತೆಯಿಂದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.

ಇದ್ದ ಒಂದು ಗುಡಿಸಲು ಮನೆ ವರುಣನ ಆರ್ಭಟಕ್ಕೆ ನೆಲಕಚ್ಚಿದ್ದು, ಹೊಸ ಸೂರಿನ ಕನಸಿನಲ್ಲಿ ವೃದ್ಧ ಬೆಳ್ಳ ಇದ್ದಾರೆ.  ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇವರ ಕಷ್ಟಕ್ಕೆ ಸ್ಪಂದಿಸಿ ಸೂಕ್ತ ಮನೆ ನಿರ್ಮಾಣ ಮಾಡಿ ಮೂಲಭೂತ ಸೌಕರ್ಯ ಒದಗಿಸಿಕೊಡುವುದು ಆದ್ಯ ಕರ್ತವ್ಯವಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ರಾಸಾಯನಿಕ ದ್ರವ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ

ಜಮೀನಿನಲ್ಲಿ ಕೊಳೆಯುತ್ತಿರುವ ಕಲ್ಲಂಗಡಿ ಹಣ್ಣು

ಬೀದರ್: ಕಲ್ಲಂಗಡಿ ಹಣ್ಣಿ (Watermelon) ನ ದರ ಕುಸಿತದಿಂದ ರೈತರು ಕಂಗೆಟ್ಟಿದ್ದು, ಭಾರಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಭಾಲ್ಕಿ ತಾಲೂಕಿನ ಕಟಕಚಿಂಚೊಳ್ಳಿ ಬಳಿ ರೈತರೊಬ್ಬರು ಲಕ್ಷಾಂತರ ಮೌಲ್ಯದ ಕಲ್ಲಂಗಡಿ ಹಣ್ಣು ಕೃಷಿ ಮಾಡಿದ್ದಾರೆ. ಆದರೆ ಸೂಕ್ತ ಬೆಲೆ ಸಿಗದ ಪರಿಣಾಮ ಕಟಾವು ಮಾಡಲು  ರೈತ ಮುಂದಾಗದ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಕಲ್ಲಂಗಡಿ ಹಣ್ಣುಗಳು ಜಮೀನಿನಲ್ಲೇ ಕೊಳೆಯುತ್ತಿದೆ.

ಸುರೇಶ್ ಅಲ್ಲೂರೆ ಎಂಬ ರೈತ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಕಲ್ಲಂಗಡಿ ಹಣ್ಣಿನ ಕೃಷಿ ಮಾಡಿದ್ದು, ಇದಕ್ಕೆ ಅವರು 1 ಲಕ್ಷ ರೂ. ಖರ್ಚು ಮಾಡಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮ ಸುರೇಶ್, ಕಟಾವಿಗೆ ಬಂದಿರುವ ಕಲ್ಲಂಗಡಿ ಹಣ್ಣುಗಳನ್ನು ಜಮೀನಿನಲ್ಲೇ ಬಿಟ್ಟಿದ್ದಾರೆ. ಪರಿಣಾಮವಾಗಿ ಬೆಳೆದಿರುವ ಕಲ್ಲಂಗಡಿ ಹಣ್ಣುಗಳು ಒಂದೂವರೆ ಎಕರೆ ಜಮೀನಿನಲ್ಲೇ ಕೊಳೆಯುತ್ತಿವೆ.

ಇದನ್ನೂ ಓದಿ: ಬಿಎಸ್ವೈ ಕುಟುಂಬವನ್ನೇ ವನವಾಸಕ್ಕೆ ಕಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ; ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ