ಕೊಡಗಿನಲ್ಲಿ ರಾಸಾಯನಿಕ ದ್ರವ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ
ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ಹಲವರಿಗೆ ತುರಿಕೆ, ಕೆಮ್ಮು, ಸೀನುವಿಕೆ ಸಮಸ್ಯೆ ಶುರುವಾಗಿದೆ. ಸದ್ಯ ಮಾಕುಟ್ಟ ಚೆಕ್ ಪೋಸ್ಟ್ನಲ್ಲಿ ರಾಸಾಯನಿಕ ಸೋರಿಕೆ ಲಾರಿ ಪತ್ತೆಯಾಗಿದ್ದು ಕಾಳುಮೆಣಸಿನ ಸಾಸ್ ಸೋರಿಕೆಯಾಗಿದೆ ಎಂದು ಡ್ರೈವರ್ ಹೇಳುತ್ತಿದ್ದಾನೆ.
ಕೊಡಗಿನಲ್ಲಿ ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆ ಹಿನ್ನೆಲೆ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ಹಲವರಿಗೆ ತುರಿಕೆ, ಕೆಮ್ಮು, ಸೀನುವಿಕೆ ಸಮಸ್ಯೆ ಶುರುವಾಗಿದೆ. ಸದ್ಯ ಮಾಕುಟ್ಟ ಚೆಕ್ ಪೋಸ್ಟ್ನಲ್ಲಿ ರಾಸಾಯನಿಕ ಸೋರಿಕೆ ಲಾರಿ ಪತ್ತೆಯಾಗಿದ್ದು ಕಾಳುಮೆಣಸಿನ ಸಾಸ್ ಸೋರಿಕೆಯಾಗಿದೆ ಎಂದು ಡ್ರೈವರ್ ಹೇಳುತ್ತಿದ್ದಾನೆ. ಆರೋಗ್ಯ ಇಲಾಖೆ ಸಿಬ್ಬಂದಿ ದ್ರವಣದ ಮಾದರಿ ಸಂಗ್ರಹಿಸಿದ್ದಾರೆ.
ಇನ್ನು ಘಟನೆ ಸಂಬಂಧ ಮಾಹಿತಿ ನೀಡಿದ ಕೊಡಗು ಡಿಹೆಚ್ಒ ಡಾ.ವೆಂಕಟೇಶ್, ರಾಸಾಯನಿಕ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಈಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದರು. ಕಾಳುಮೆಣಸಿನ ಸಾಸ್ ದ್ರಾವಣ ಸೋರಿಕೆ ಎಂದು ದ್ರಾವಣ ಸೋರಿಕೆಯಾದ ವಾಹನದ ಚಾಲಕ ಹೇಳುತ್ತಿದ್ದಾನೆ. ರಾಸಾಯನಿಕ ಸೋರಿಕೆಯಾದ ವಾಹನ ವಶಕ್ಕೆ ಪಡೆದಿದ್ದೇವೆ. ಸಾರ್ವಜನಿಕರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದರು.
ಕಿಮ್ಸ್ ಆಸ್ಪತ್ರೆಯಲ್ಲಿ ಮನಕಲುಕುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಭೀಕರ ಬಸ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾಯಿಯನ್ನು ಕಂಡು ಬೆಡ್ ಮೇಲೇರಿ ತಾಯಿಯನ್ನು ಬಿಗಿದಿಪ್ಪಿ ಕಂದಮ್ಮ ಅಳುತ್ತಿರುವ ದೃಶ್ಯ ಎಲ್ಲರಲ್ಲೂ ಕಣ್ಣೀರು ತರಿಸುವಂತಿದೆ. ನಿನ್ನೆ ರಾತ್ರಿಯಿಂದ ಅನ್ನ, ನೀರಿಲ್ಲದೇ ಕಂದಮ್ಮ ಅಳುತ್ತಿದೆ. ಕಿಮ್ಸ್ ಸಿಬ್ಬಂದಿ ಮಗುವಿಗೆ ಚಾಕೋಲೆಟ್ ಕೊಟ್ಟು ಸಂತೈಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸೂಚನೆ ನಂತರ ತಾಯಿ ಮಗುವಿಗೆ ಎದೆಹಾಲು ಕುಡಿಸಿದ್ದಾರೆ. ಇದನ್ನೂ ಓದಿ: ಗುಣಮಟ್ಟದ ವ್ಯವಹಾರಕ್ಕಾಗಿ ‘ISO’ ಪ್ರಮಾಣೀಕರಣ ಪಡೆಯಿರಿ, ಇದರ ಅನುಕೂಲಗಳು ಇಲ್ಲಿವೆ ನೋಡಿ
ಬೆಳಗಾವಿಯಲ್ಲಿ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ ಬೆಳಗಾವಿ ತಾಲೂಕಿನ ದೇಸೂರು ರೇಲ್ವೆ ನಿಲ್ದಾಣದಲ್ಲಿರುವ ಗೋದಾಮಿನಲ್ಲಿದ್ದ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನವಾಗಿದೆ. ರಸಗೊಬ್ಬರ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆ ಗೋದಾಮಿನಲ್ಲಿಟ್ಟಿದ್ದ ರಸಗೊಬ್ಬರಕ್ಕೆ ಖದೀಮರು ಕನ್ನ ಹಾಕಿದ್ದಾರೆ. 12 ಲಕ್ಷಕ್ಕೂ ಅಧಿಕ ಮೌಲ್ಯದ RCF DAP ರಾಸಾಯನಿಕ ಗೊಬ್ಬರ ಕಳ್ಳತನವಾಗಿದ್ದು 900 ಗೊಬ್ಬರ ಚೀಲ ಸಾಗಿಸಲು ಕನಿಷ್ಟ ಎರಡು ಲಾರಿಗಳಾದರೂ ಬೇಕು. ಹೀಗಾಗಿ ಪರಿಚಯಿಸ್ಥರಿಂದಲೇ ಗೋದಾಮಿನಲ್ಲಿದ್ದ ಗೊಬ್ಬರ ಚೀಲ ಕಳ್ಳತನವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಗೋದಾಮು ಬಳಿ ಯಾರೂ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಕೃತ್ಯ ಎಸಗಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಗೆ ಗೋದಾಮು ಮ್ಯಾನೇಜರ್ ಶಿವಾಜಿ ದೂರು ಸಲ್ಲಿಸಿದ್ದು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಹಾಸನದಲ್ಲಿ ಆಟೋ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ ಹಾಸನ ನಗರದ ಕೆ.ಆರ್.ಪುರಂ 3ನೇ ಅಡ್ಡ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದು ಆಟೋ, 1 ಕಾರು ಸಂಪೂರ್ಣ ಜಖಂ ಆಗಿದೆ. ಘಟನೆಯಲ್ಲಿ ಜಬೀನಾ, ಜುನೈದ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕಮಗಳೂರಿನಿಂದ ಸ್ಕ್ಯಾನಿಂಗ್ ಮಾಡಿಸಲು ಜುನೈದ್ ಕುಟುಂಬ ಹಾಸನಕ್ಕೆ ಬಂದಿತ್ತು. ಸ್ಕ್ಯಾನಿಂಗ್ ಸೆಂಟರ್ ಎದುರು ಆಟೋದಲ್ಲಿ ಕುಳಿತು ಕಾಯುತ್ತಿರುವಾಗ ಘಟನೆ ನಡೆದಿದೆ. ಗಾಯಾಳುಗಳಿಗೆ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮರ ಮುರಿದು ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸಗರಸಭೆ ಅಧ್ಯಕ್ಷ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ: ಕುವೆಂಪು ಪಾಠ ಕೈಬಿಟ್ಟಿಲ್ಲ- ಬರಗೂರು ರಾಮಚಂದ್ರಪ್ಪ, ಕಾಂಗ್ರೆಸ್ಗೆ ಕನ್ನಡದ ಸಮಸ್ಯೆ- ಬಿಸಿ ನಾಗೇಶ್
ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಮೈಸೂರು: ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಮೈಸೂರು ವಿವಿಯ ಮಾನಸ ಗಂಗೋತ್ರಿ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸಮರ್ಪಕ ಕುಡಿಯುವ ನೀರು, ಉತ್ತಮ ಆಹಾರ ನೀಡುವಂತೆ ಪಿಜಿ ವಿದ್ಯಾರ್ಥಿಗಳು ಸಂಶೋಧನಾ ವಿದ್ಯಾರ್ಥಿಗಳಿಂದ ಒತ್ತಾಯಿಸಿದ್ದಾರೆ.
Published On - 4:37 pm, Tue, 24 May 22