ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿರಲಿಲ್ಲ, ಈಗ ಈಜುಕೊಳ ಬೇಕಿತ್ತಾ?: ಮಾಜಿ ಸಚಿವ ಎ.ಮಂಜು ವಾಗ್ದಾಳಿ

| Updated By: guruganesh bhat

Updated on: Jun 05, 2021 | 3:05 PM

ಇವತ್ತು ದನ ಕಾಯುವವರೂ ಐಎಎಸ್ ಮಾಡುತ್ತಾರೆ. ನಂತರ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ದನ ಕಾಯೋರು, ಅಡ್ಜೆಸ್ಟ್​ಮೆಂಟ್ ಮಾಡಿಕೊಳ್ಳುವವರು ಸಹ ಐಎಎಸ್ ಪಾಸ್ ಮಾಡುತ್ತಾರೆ. ಆದರೆ ಜನಸೇವೆ ಹೇಗೆ ಮಾಡುತ್ತೇವೆ ಅನ್ನುವುದು ಮುಖ್ಯ ಎಂದು ಮಾಜಿ ಸಚಿವ ಎ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿರಲಿಲ್ಲ, ಈಗ ಈಜುಕೊಳ ಬೇಕಿತ್ತಾ?: ಮಾಜಿ ಸಚಿವ ಎ.ಮಂಜು ವಾಗ್ದಾಳಿ
ರೋಹಿಣಿ ಸಿಂಧೂರಿ ಮತ್ತು ಎ.ಮಂಜು
Follow us on

ಮೈಸೂರು: ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್​ ಕಟ್ಟಿಸಿರಲಿಲ್ಲ. ಹೀಗಿರುವಾಗ ಈ ಸಮಯದಲ್ಲಿ ಸರ್ಕಾರಿ ಸ್ಥಳದಲ್ಲಿ ಈಜುಕೊಳ ಬೇಕಿತ್ತಾ? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಎ.ಮಂಜು ವಾಗ್ದಾಳಿ ನಡೆಸಿದರು.

ಸರ್ಕಾರಿ ಅಧಿಕಾರಿಗಳು ಒಂದೇ ಕಡೆ ಇರುತ್ತಾರಾ? ಬೇರೆಡೆ ವರ್ಗಾವಣೆ ಆಗಿ ಹೋಗ್ತಾರೆ ಇದು ಗುತ್ತಿಗೆದಾರನಿಗಾಗಿ ಮಾಡಿರುವ ಕೆಲಸವಷ್ಟೇ? ಇವತ್ತು ದನ ಕಾಯುವವರೂ ಐಎಎಸ್ ಮಾಡುತ್ತಾರೆ. ನಂತರ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ದನ ಕಾಯೋರು, ಅಡ್ಜೆಸ್ಟ್​ಮೆಂಟ್ ಮಾಡಿಕೊಳ್ಳುವವರು ಸಹ ಐಎಎಸ್ ಪಾಸ್ ಮಾಡುತ್ತಾರೆ. ಆದರೆ ಜನಸೇವೆ ಹೇಗೆ ಮಾಡುತ್ತೇವೆ ಅನ್ನುವುದು ಮುಖ್ಯ ಎಂದು ಮಾಜಿ ಸಚಿವ ಎ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮನೆಗೆ ಶಿಕ್ಷಕರು ಬಂದು ಅವರ ಮಕ್ಕಳಿಗೆ ಪಾಠ ಮಾಡುಲಾಗುತ್ತಿದೆ ಎಂದು ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದಾರೆ.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಇಬ್ಬಗೆ ನೀತಿ ಅನುರಸಿಸುತ್ತಿದ್ದಾರೆ. ಡಿಸಿಗೆ ಒಂದು ರೂಲ್ಸ್​, ಜನಸಾಮಾನ್ಯರಿಗೊಂದು ರೂಲ್ಸಾ? ಜನಸಾಮಾನ್ಯರ ಮಕ್ಕಳಿಗೆ ಆನ್​ಲೈನ್​ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಡಿಸಿ ಮಕ್ಕಳಿಗೆ ಮನೆಗೆ ಬಂದು ಶಿಕ್ಷಕರಿಂದ ಪಾಠ ಪ್ರವಚನ ನಡೆಸಲಾಗುತ್ತಿದೆ. ಈ ಇಬ್ಬಗೆ ನೀತಿಯನ್ನು ಕೇಳೋರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿ- ಮೇಯರ್ ಜಟಾಪಟಿ: ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ ಶಿಲ್ಪಾ ನಾಗ್

ಮೈಸೂರಿನಲ್ಲಿ ಐಎಎಸ್​ vs ಐಎಎಸ್​: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ

(The Maharaja of Mysore had not built a swimming pool but now swimming pool is necessary questions Former Minister A Manju on DC Rohini Sindhuri)