AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್​ವೈ, ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ರಾಜ್ಯ ಸರ್ಕಾರ ಸಿದ್ಧತೆ

ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ಆಯೋಗದ ವರದಿಯು 2020ರ ಕೋವಿಡ್-19 ಹಗರಣದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ಅವರ ಪಾತ್ರವನ್ನು ಖಂಡಿಸಿದೆ. ಆಯೋಗವು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಶಿಫಾರಸು ಮಾಡಿದ್ದು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಬಿಎಸ್​ವೈ, ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ರಾಜ್ಯ ಸರ್ಕಾರ ಸಿದ್ಧತೆ
ಬಿಎಸ್​ವೈ, ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ರಾಜ್ಯ ಸರ್ಕಾರ ಸಿದ್ಧತೆ
Pramod Shastri G
| Edited By: |

Updated on: Nov 09, 2024 | 9:48 PM

Share

ಬೆಂಗಳೂರು, ನವೆಂಬರ್​ 09: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೊರೊನಾ ಹಗರಣಕ್ಕೆ (Covid Scam) ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್​ ಮೂಕಲ್​ ಡಿ.ಮೈಕಲ್​ ಕುನ್ಹಾ ಆಯೋಗದಿಂದ ಅಕ್ರಮ ನಡೆದಿರುವುದು ದೃಢಪಟ್ಟಿದೆ. ಹಾಗಾಗಿ ಬಿಎಸ್​ ಯಡಿಯೂರಪ್ಪ ಹಾಗೂ ಬಿ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಆಯೋಗ ಶಿಫಾರಸ್ಸು ಮಾಡಿದ ಬೆನ್ನೆಲ್ಲೇ ಇದೀಗ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಕೊರೊನಾ ಹಗರಣದ ಬಗ್ಗೆ ಸರ್ಕಾರಕ್ಕೆ ನಿವೃತ್ತ ನ್ಯಾ.ಕುನ್ಹಾ ವರದಿ ಸಲ್ಲಿಕೆ ಹಿನ್ನೆಲೆ ರಾಜ್ಯ ಸರ್ಕಾರ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದೆ. ಈಗಾಗಲೇ ಹಿರಿಯ ಅಧಿಕಾರಿಗಳ ಜತೆ ಪೊಲೀಸ್ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ನ್ಯಾ.ಜಾನ್ ಮೈಕೆಲ್ ಡಿ.ಕುನ್ಹಾ ಸಮಿತಿ ಶಿಫಾರಸು ಆಧರಿಸಿ ಕೇಸ್ ಸಾಧ್ಯತೆ ಇದೆ. ಈ ಬಗ್ಗೆ ಗೃಹ ಸಚಿವಾಲಯ ಪೂರಕ ದಾಖಲೆ ಸಂಗ್ರಹ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಕೊರೊನಾ ಹಗರಣ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು

2020ನೇ ಇಸ್ವಿಯಲ್ಲಿ ಇಡೀ ಜಗತ್ತನ್ನು ಕೊರೊನಾ ಇನ್ನಿಲ್ಲದಂತೆ ಕಾಡ್ತಿತ್ತು. ರಾಜ್ಯದಲ್ಲಿ ಆಗ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಕೋವಿಡ್ ವಿರುದ್ಧ ಹೋರಾಡುವ ನೆಪದಲ್ಲಿ ಸರ್ಕಾರ ಕೋಟಿ ಕೋಟಿ ಹಣ ಲೂಟಿ ಮಾಡಿರೋದಾಗಿ ವಿಪಕ್ಷದಲ್ಲಿದ್ದ ಕಾಂಗ್ರೆಸ್ ಆರೋಪಗಳ ಸುರಿಮಳೆಗೈದಿತ್ತು. ಕೈ ಪಡೆಯ ಹೋರಾಟ ಬರೀ ಆರೋಪಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದಿದ್ದೇ ತಡ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗವನ್ನು ಸ್ಥಾಪನೆ ಮಾಡಿಬಿಡಿತ್ತು. ಈ ಆಯೋಗ ಕೋವಿಡ್ ಕಾಲದ ಹಗರಣಗಳ ಬಗ್ಗೆ ಕಳೆದ ಆಗಸ್ಟ್ 31ರಂದು ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. ಇದೇ ವರದಿ ಬಿಎಸ್​ ಯಡಿಯೂರಪ್ಪ ಮತ್ತೆ ಅಂದಿನ ಆರೋಗ್ಯ ಸಚಿವ ಶ್ರೀರಾಮುಲುಗೆ ಸಂಕಷ್ಟ ತಂದಿಟ್ಟಿದೆ.

ಬಿಎಸ್​ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು

ಜಸ್ಟೀಸ್ ಕುನ್ಹಾ ಆಯೋಗ ಸಲ್ಲಿಸಿರೋ ವರದಿಯಲ್ಲಿ, 2020ರಲ್ಲಿ ಖರೀದಿ ಮಾಡಿದ್ದ ಕುರಿತು ಅಷ್ಟೇ ಉಲ್ಲೇಖವಿದೆ. PPE ಕಿಟ್ ಪೂರೈಕೆ ಮಾಡಿದ್ದ ಚೀನಾ ಕಂಪನಿಗಳಿಗೆ ಬಿಜೆಪಿ ಸರ್ಕಾರ 14 ಕೋಟಿ 21 ಲಕ್ಷ ರೂಪಾಯಿ ಅನಗತ್ಯ ಲಾಭ ಮಾಡಿಕೊಟ್ಟಿರುವ ಆರೋಪವಿದೆ. ಹೀಗಾಗಿಯೇ ಬಿಎಸ್​ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕ್ರಿಮಿನಲ್​ ಪ್ರಾಸಿಕ್ಯೂಷನ್​ಗೆ ಕುನ್ಹಾ ಆಯೋಗ ಶಿಫಾರಸು ಮಾಡಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ತನಿಖೆ ಮಾಡುವಂತೆ ಒತ್ತಿ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.