ಸರ್ಕಾರಿ ಶಾಲೆಯಲ್ಲಿ ಬಾಗಿಲು ಕಳವು ಮಾಡುತ್ತಿದ್ದ ಬಗ್ಗೆ ಗ್ರಾಮಸ್ಥರ ಅನುಮಾನ, ಮುಖ್ಯ ಶಿಕ್ಷಕಿಯಿಂದ ಗೊಂದಲ ನಿವಾರಣೆ

| Updated By: ಸಾಧು ಶ್ರೀನಾಥ್​

Updated on: May 29, 2024 | 5:01 PM

ಸರ್ಕಾರಿ ಶಾಲೆಯಲ್ಲಿ ಇರಿಸಲಾಗಿದ್ದ ಬಾಗಿಲನ್ನು ತೆಗೆದುಕೊಂಡು ಹೋಗುವ ವೇಳೆ ಶಾಲಾ ಸಿಬ್ಬಂದಿಯನ್ನು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ, ಶಾಲಾ ವಸ್ತುಗಳನ್ನು ಅನುಮತಿ ಪಡೆಯದೆ ತೆಗೆದುಕೊಂಡು ಹೊಗುತ್ತಿರುವ ಬಗ್ಗೆ ಅನುಮಾನ ಬಂದ ಹಿನ್ನೆಲೆ ಶಾಲಾ ಸಿಬ್ಬಂದಿಯನ್ನು ಗ್ರಾಮದ ಕೆಲವರು ಪ್ರಶ್ನೆ ಮಾಡಿರುವ ಘಟನೆ ಕೋಲಾರ ತಾಲ್ಲೂಕು ಶಾಪುರ ಗ್ರಾಮದಲ್ಲಿ ಘಟನೆ, ಶಾಪುರ ಸರ್ಕಾರಿ ಫ್ರೌಡಶಾಲೆಯಲ್ಲಿ ಈ ಘಟನೆ ನಡೆದಿದೆ.

ಸರ್ಕಾರಿ ಶಾಲೆಯಲ್ಲಿ ಬಾಗಿಲು ಕಳವು ಮಾಡುತ್ತಿದ್ದ ಬಗ್ಗೆ ಗ್ರಾಮಸ್ಥರ ಅನುಮಾನ, ಮುಖ್ಯ ಶಿಕ್ಷಕಿಯಿಂದ ಗೊಂದಲ ನಿವಾರಣೆ
ಸರ್ಕಾರಿ ಶಾಲೆಯಲ್ಲಿ ಬಾಗಿಲು ಕಳವು ಮಾಡುತ್ತಿದ್ದ ಬಗ್ಗೆ ಗ್ರಾಮಸ್ಥರ ಅನುಮಾನ
Follow us on

ಕೋಲಾರ, ಮೇ 27:  ಸರ್ಕಾರಿ ಶಾಲೆಯಲ್ಲಿ ಇರಿಸಲಾಗಿದ್ದ ಬಾಗಿಲನ್ನು ತೆಗೆದುಕೊಂಡು ಹೋಗುವ ವೇಳೆ ಶಾಲಾ ಸಿಬ್ಬಂದಿಯನ್ನು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ, ಶಾಲಾ ವಸ್ತುಗಳನ್ನು ಅನುಮತಿ ಪಡೆಯದೆ ತೆಗೆದುಕೊಂಡು ಹೊಗುತ್ತಿರುವ ಬಗ್ಗೆ ಅನುಮಾನ ಬಂದ ಹಿನ್ನೆಲೆ ಶಾಲಾ ಸಿಬ್ಬಂದಿಯನ್ನು ಗ್ರಾಮದ ಕೆಲವರು ಪ್ರಶ್ನೆ ಮಾಡಿರುವ ಘಟನೆ ಕೋಲಾರ ತಾಲ್ಲೂಕು ಶಾಪುರ ಗ್ರಾಮದಲ್ಲಿ ಘಟನೆ, ಶಾಪುರ ಸರ್ಕಾರಿ ಫ್ರೌಡಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಾಲೆಯಲ್ಲಿ ಶಾಲಾ ಕಟ್ಟಡದ ನವೀಕರಣ ಕಾಮಗಾರಿ ಇತ್ತೀಚೆಗಷ್ಟೇ ನಡೆದಿದ್ದು, ಕಾಮಗಾರಿ ಮಾಡಿದ ಗುತ್ತಿಗೆದಾರ ಕಾಮಗಾರಿ ಮುಗಿದ ಮೇಲೆ ಅಲ್ಲಿದ್ದ ಕೆಲವು ಉಳಿಕೆ ವಸ್ತುಗಳನ್ನು ಆಟೋದಲ್ಲಿ ಹಾಕಿಕೊಂಡು ಹೋಗುವ ವೇಳೆ ಗ್ರಾಮದ ಕೆಲವರು ಹಾಗೂ ಶಾಲಾಭಿವೃದ್ದಿ ಸಂಘದ ಸದಸ್ಯರು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಯರು ಸರಿಯಾದ ಮಾಹಿತಿ ನೀಡಿದ ಮೇಲೆ ಗೊಂದಲ ನಿವಾರಣೆಯಾಗಿದೆ. ಸದ್ಯ ಶಾಲೆಯ ಮುಖ್ಯೋಪಾಧ್ಯಯರು ಗ್ರಾಮದ ಕೆಲವು ವ್ಯಕ್ತಿಗಳು ಶಾಲೆಯಲ್ಲಿ ಅನಾವಶ್ಯಕವಾಗಿ ಬಂದು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಬೈಕ್​ಗಳ ಮಧ್ಯೆ ಡಿಕ್ಕಿ: ಗಾಯಗೊಂಡವರನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಜೆಡಿಎಸ್ ಶಾಸಕ 

ಎರಡು ಬೈಕ್​​ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಬೈಕ್​ ಸವಾರರಿಬ್ಬರಿಗೆ  ಯಾದಗಿರಿಯ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್​​ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಲಬುರಗಿ ಹಾಗೂ ಯಾದಗಿರಿ ಮೂಲದ ಬೈಕ್ ಸವಾರರು ಗಾಯಗೊಂಡಿದ್ದರು. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಲವರ್ಸ್ ಬೈಕ್​​ಗೆ ಲಾರಿ ಡಿಕ್ಕಿಯಾಗಿ ಪ್ರಿಯಕರ ಸಾವು, ಬಸ್​ ಡಿಕ್ಕಿಯಾಗಿ ರೈತರಿಬ್ಬರ ದುರ್ಮರಣ

ಅಪಘಾತ ಸಂಭವಿಸಿದ ಬಳಿಕ ರಸ್ತೆ ಮೇಲೆ ಗಾಯಗೊಂಡ ಬೈಕ್ ಸವಾರರು ಒದ್ದಾಡುತ್ತಿದ್ದರು. ಯಾದಗಿರಿಯಿಂದ ಗುರುಮಠಕಲ್​​ಗೆ ಶಾಸಕ ಶರಣಗೌಡ ಕಂದಕೂರ್ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಗಾಯಗೊಂಡವರನ್ನ ಕಂಡು ಆ್ಯಂಬ್ಯೂಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದು, ಮುಂದೆ‌ ನಿಂತು ಚಿಕಿತ್ಸೆ ಕೂಡ ಕೊಡಿಸಿದ್ದಾರೆ.

ಅಪರಿಚಿತ ಯುವತಿಯ ಶವ ಪತ್ತೆ 

ಅಪರಿಚಿತ ಯುವತಿಯ ಶವ ಪತ್ತೆ ಆಗಿರುವಂತಹ ಘಟನೆ ಬಾಗಲಕೋಟೆ ‌ಜಿಲ್ಲೆ ಬೀಳಗಿ ತಾಲ್ಲೂಕಿನ ಟಕ್ಕಳಕಿ ಗ್ರಾಮದ ಜಮೀನೊಂದರಲ್ಲಿ ಪತ್ತೆ ಆಗಿದೆ. ಅಂದಾಜು 20ರಿಂದ 25 ವರ್ಷ ಇರಬಹುದು. ಪಿಂಕ್ ಬಣ್ಣದ ಉದ್ದ ತೋಳಿನ ಟಿ ಶರ್ಟ್ ಧರಿಸಿದ್ದು, ಟಿ ಶರ್ಟ್ ಮೇಲೆ ಸ್ಮೈಲ್ ಎಂಬ ಬರಹವಿದೆ.

ಇದನ್ನೂ ಓದಿ: ಒಂದೇ ವಾರದಲ್ಲಿ ಎರಡೆರೆಡು ಕೊಲೆ: ಬೆಂಗಳೂರಿನ ನಟೋರಿಯಸ್ ಕೊಲೆಗಾರನ ಹಿನ್ನೆಲೆ ಭಯಾನಕ

ಕಪ್ಪು ಜೀನ್ಸ್ ಧರಿಸಿದ್ದು, ಬಲಗಾಲಲ್ಲಿ ಗೆಜ್ಜೆ ಕಪ್ಪು ದಾರವಿದೆ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ ಆಗಿದೆ. ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:35 pm, Mon, 27 May 24