ಬೀದರ್​ನ ಸ್ಮಾರಕಗಳಿಗಿಲ್ಲ ಜೀರ್ಣೋದ್ಧಾರ ಕಾರ್ಯ: ಅವನತಿಯತ್ತ ಪ್ರವಾಸಿ ತಾಣಗಳು

ಬೀದರ್​ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಿಲ್ಲೆಯಾಗಿದೆ. ಶತಶತಮಾನದಷ್ಟು ಹಳೆದಾದ ಕೋಟೆ, ಮಸೀದಿಗಳು, ದೇವಸ್ಥಾನಗಳು ಆ ಜಿಲ್ಲೆಯಲ್ಲಿವೆ. ಜಿಲ್ಲಾಡಳಿತ, ಪುರಾತತ್ವ ಇಲಾಖೆಯ ನಿಷ್ಕಾಳಜಿಯಿಂದ ಭವ್ಯ ಸ್ಮಾರಕಗಳು ಹಾಳಾಗುತ್ತಿದ್ದು, ಪ್ರವಾಸಿಗರಿಗೆ ನಿರಾಸೆ ಮೂಡಿಸುತ್ತಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿಯೂ ಕೂಡ ಗಣೀನಿಯ ಪ್ರಮಾಣದಲ್ಲಿ ಕುಸಿಯುತ್ತಿದೆ. 

ಬೀದರ್​ನ ಸ್ಮಾರಕಗಳಿಗಿಲ್ಲ ಜೀರ್ಣೋದ್ಧಾರ ಕಾರ್ಯ: ಅವನತಿಯತ್ತ ಪ್ರವಾಸಿ ತಾಣಗಳು
ಬೀದರ್​ನ ಸ್ಮಾರಕಗಳಿಗಿಲ್ಲ ಜೀರ್ಣೋದ್ಧಾರ ಕಾರ್ಯ: ಅವನತಿಯತ್ತ ಪ್ರವಾಸಿ ತಾಣಗಳು
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on: May 27, 2024 | 9:31 PM

ಬೀದರ್​, ಮೇ 27: ಬೀದರ್ ಜಿಲ್ಲೆ (Bidar) ಐತಿಹಾಸಿಕವಾಗಿ ಇಲ್ಲಿನ ಭವ್ಯ ಸ್ಮಾರಕಗಳಿಂದ ರಾಷ್ಟ್ರಮಟ್ಟದಲ್ಲಿ ತನ್ನ ಗಮನ ಸೆಳೆಯುತ್ತಿದೆ. ಜೊತೆಗೆ ಬಹುಮನಿ ಕಾಲದ ಶ್ರೀಮಂತ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ದಕ್ಷಿಣ ಭಾರತದಲ್ಲಿಯೇ ವಿಸ್ತಾರದಲ್ಲಿ ಬೃಹತ್ತಾದ ಕೋಟೆಯಿಂದ ಜಿಲ್ಲೆ ಕಿರಿಟದಂದೆ ರಾರಾಜಿಸುತ್ತಿದೆ. ಇಷ್ಟಾದರೂ ಕೂಡ ಜಿಲ್ಲೆಗೆ ಬರುವ ಪ್ರವಾಸಿಗರ (tourist) ಸಂಖ್ಯೆ ಬವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಅದಕ್ಕೆ ಪ್ರಮುಖವಾಗಿ ಇಲ್ಲಿನ ಐತಿಹಾಸಿಕ ಸ್ಮಾರಕದ ಬಗ್ಗೆ ಜನರಿಗೆ ಮಾಹಿತಿಯ ಕೊರೆತೆ. ಗೈಡ್​ಗಳು ಕೂಡ ಇಲ್ಲ.

ಕರ್ನಾಟಕದ ಕಳಶ, ಸೂಫಿ ಸಂತರ ನಾಡು ಗಡಿ ಜಿಲ್ಲೆ ಬೀದರ್ ಐತಿಹಾಸಿಕ ಸ್ಮಾರಕಗಳಿಂದ ರಾಷ್ಟ್ರದ ಗಮನ ಸೆಳೆಯುತ್ತಿದೆ. ದೇಶದ ಅತೀ ದೊಡ್ಡ ಬೀದರ್ ಕೋಟೆ, ಆರು ಶತಮಾನದಷ್ಟೂ ಹಳೆದಾದ ಬಹುಮನಿ ಸುಲ್ತಾನರ ಕಾಲದ ರಾಜ ಮಹಾರಾಜರ ಘೋರಿಗಳು, ಪುರಾತನವಾದ ದೇವಸ್ಥಾನಗಳಿಂದಾಗಿ ಜಿಲ್ಲೆಯ ಗತವೈಭವವನ್ನ ಸಾರಿ ಸಾರಿ ಹೇಳುತ್ತಿವೆ.

ಇದನ್ನೂ ಓದಿ: ಬೀದರ್​: ಧಾರ್ಮಿಕ ಸಾಮರಸ್ಯ ಸಾರುವ ಅಷ್ಟೂರು ಜಾತ್ರೆ! ಇಲ್ಲಿನ ವಿಶೇಷತೆ ಏನ್​ ಗೊತ್ತಾ?

ಪುರಾತತ್ವ ಇಲಾಕೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಇತಿಹಾಸದ ಪುಟ್ಟದಲ್ಲಿ ಅಚ್ಚಳಿಯದೇ ಉಳಿದುಕೊಂಡಿರುವ ಇಲ್ಲಿನ ಪ್ರವಾಸಿ ಸ್ಥಳಗಳು ಇಂದು ತನ್ನ ಕೊನೆಯ ದಿಗಳನ್ನ ಎಣಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿಯೂ ಕೂಡ ಗಣೀನಿಯ ಪ್ರಮಾಣದಲ್ಲಿ ಕುಸಿಯುತ್ತಿದೆ.

ಇಲ್ಲಿನ ಇತಿಹಾಸ ಪ್ರಶಿದ್ಧ ಸ್ಮಾರಕಗಳನ್ನ ನೋಡಲು ಪ್ರತಿನಿತ್ಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸ್ಮಾರಕಗಳನ್ನ ವಿಕ್ಷೇಣೆಗೆಂದು ಬರುವ ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಗಾರ್ಡನ್ ಇಲ್ಲ, ಕುಳಿತುಕೊಂಡು ಊಟ ಮಾಡಲು ಇಲ್ಲಿ ಸೌಲಭ್ಯಗಳಿಲ್ಲ, ಜೊತೆಗೆ ಇಲ್ಲಿನ ಇತಿಹಾಸವನ್ನ ಪರಿಚಯಿಸಲು ಗಾರ್ಡಗಳು ಕೂಡಾ ಇಲ್ಲಿಲ್ಲದಿರುವುದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಇದು ತಿಂದರೆಯಾಗುತ್ತಿದೆ.

ರಂಗೀನ ಮಹಲ್, ಗಗನ್ ಮಹಲ್, ಒಂದೇ ಕಂಬದ ಮಸೀದಿ, ದಿವಾನ್-ಇ-ಆಮ್, ಬೃಹತ್ ಫಿರಂಗಿಗಳು, ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನೋಡಬಹುದು. ಕ್ರಿಸ್ತಶಕ 1472ರಲ್ಲಿ ನಿರ್ಮಾಣವಾದ ವಿಶ್ವಪ್ರಸಿದ್ಧವಾಗಿದ್ದ ಪ್ರಸಿದ್ಧ ಮಹಮದ್ ಗವಾನ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ (ಮದರಸಾ)ದ ಅವಶೇಷವಾಗಿ ಉಳಿದಿರುವ ಗೋಪುರವು ದೆಹಲಿಯಲ್ಲಿರುವ ಕುತಬ್ ಮಿನಾರ್ ನಂತಿದೆ. ಜನಪ್ರಿಯ ಬರೀದ್ ಷಾಹಿ ಗೋರಿಗಳು ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮಾಡಿರುವ ಸೆರೆಮನೆಗಳಿಂದಾಗಿ ಜಿಲ್ಲೆ ಪ್ರೇಕ್ಷಣೀಯ ಸ್ಥಳವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ನಿಜಾಮರು ಗಿಫ್ಟ್​​ ಕೊಟ್ಟಿದ್ದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು, ಅದನ್ನೀಗ ಪುರಾತತ್ವ ಇಲಾಖೆ ತನ್ನದು ಅನ್ನುತ್ತಿದೆ! ರೈತರ ಗತಿಯೇನು?

ನಗರದ ಹೃದಯಬಾಗದಲ್ಲಿರೋ ಶಬಲ್ ಬರೀದ ಉದ್ಯಾನವನದಲ್ಲಿ ಸುಮಾರು ನೂರಕ್ಕು ಹೆಚ್ಚು ಸೂಫಿ ಸಂತರ, ರಾಜ ಮಹಾರಾಜರ ಸಮಾದಿಗಳಿದ್ದು ಇದೊಂದು ಪ್ರವಾಸಿತಾಣವಾಗಿದೆ. ಆದ್ರೆ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಮಾತ್ರ ಈ ಸ್ಥಳವನ್ನ ಗುರುತಿಸುವಲ್ಲಿ ವಿಫಲವಾಗಿದೆ.ಇನ್ನೂ ಕೆಲವು ಸಮಾಧಿಗಳ ಸುತ್ತಮುತ್ತಲೂ ಕೂಡಾ ಸೈಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ ಅದನ್ನ ತಡೆಯುವ ಹಗೋಜಿಗೂ ಕೂಡಾ ಪುರಾತತ್ವ ಇಲಾಖೆ ಮುಂದಾಗಿಲ್ಲ.  ಹೀಗಾಗಿ ಈ ಪ್ರವಾಸಿ ತಾಣ ಮರೆಯಾಗು ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಇಲ್ಲಿನ ಸ್ಮಾರಕ ರಕ್ಷಣೆಗೆ ಮುಂದಾಗಬೇಕೆಂದು ಇಲ್ಲಿನ ಜನರು ಆಸೆಯ ವ್ಯಕ್ತಪಡಿಸುತ್ತಿದ್ದಾರೆ.

ಈ ಪುರಾತನ ಸಮಾದಿಗಳು ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದು ಕಲಾ ಪ್ರೀಯರಿಗೆ ನಿರಾಸೆ ಮೂಡಿಸಿದೆ. ಪುರಾತತ್ವ ಇಲಾಖೆಯ ಬೇಜವಾಬ್ದಾರಿತನ, ಜಿಲ್ಲಾಡಳಿತದ ನಿರ್ಲಕ್ಷದಿಂದ ಕನ್ನಡ ನಾಡಿನ ಗಥ ಇತಿಹಾಸವನ್ನ ಸಾರುವ ಸ್ಥಳಗಳು ಇಂದು ತೆರೆಯ ಮರೆಯಲ್ಲಿ ಸರಿಯುವ ಎಲ್ಲಾ ಲಕ್ಷಣಗಳು ಗೋಚರವಾಗಿದೆ.

ಸ್ಥಳಿಯರಿಗೆ ಇಲ್ಲಿನ ಭವ್ಯ ಸ್ಮಾರಕಗಳ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಇಷ್ಟು ವರ್ಷಗಳ ಕಾಲ ಇಲ್ಲಿನ ಸ್ಮಾರಕಗಳು ಉಳಿದಿರುವುದೇ ಸೂಜಿಗದ ಸಂಗತಿಯಾಗಿದೆ. ಅಷ್ಟೇ ಅಲ್ಲದೆ ಇತಿಹಾಸ ಪ್ರಸಿದ್ಧ ಇಂತಹ ಸ್ಮಾರಕಗಳ ಉಳಿಸಿ ಬೇಳೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಆದ್ಯಕರ್ತವ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?