ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಕೊವಿಡ್ ಟೆಸ್ಟ್ ಮಾಡುವವರೇ ಇಲ್ಲ; ಪ್ರಯಾಣಿಕರು ನೇರವಾಗಿ ಮನೆಯತ್ತ

ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ ಮಾಡದೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಯಾವುದೇ ರೀತಿಯ ತಪಾಸಣೆ ಮಾಡಲು ಯಾರು ಇಲ್ಲದ ಕಾರಣ ರೈಲಿನಲ್ಲಿ ಬಂದ ಪ್ರಯಾಣಿಕರು ನೇರವಾಗಿ ಮನೆಯತ್ತ ಹೋಗುತ್ತಿದ್ದಾರೆ.

ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಕೊವಿಡ್ ಟೆಸ್ಟ್ ಮಾಡುವವರೇ ಇಲ್ಲ; ಪ್ರಯಾಣಿಕರು ನೇರವಾಗಿ ಮನೆಯತ್ತ
ಬಾಗಲಕೋಟೆ ರೈಲ್ವೆ ನಿಲ್ದಾಣ
sandhya thejappa

Updated on: May 18, 2021 | 12:47 PM

ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಆದರೆ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ ಮಾಡದೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಯಾವುದೇ ರೀತಿಯ ತಪಾಸಣೆ ಮಾಡಲು ಯಾರು ಇಲ್ಲದ ಕಾರಣ ರೈಲಿನಲ್ಲಿ ಬಂದ ಪ್ರಯಾಣಿಕರು ನೇರವಾಗಿ ಮನೆಯತ್ತ ಹೋಗುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತಷ್ಟು ಕೊರೊನಾ ಹೆಚ್ಚಳವಾಗುವ ಆತಂಕ ಎದುರಾಗಿದೆ.

ಕೊವಿಡ್ ಕೇರ್ ಸೆಂಟರ್​ನಲ್ಲಿ ಅವ್ಯವಸ್ಥೆ
ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಕೊವಿಡ್ ಕೇರ್ ಸೆಂಟರ್​ನಲ್ಲಿ ಬೆಳಗ್ಗೆ 11 ಗಂಟೆಯಾದರೂ ಉಪಾಹಾರ ನೀಡಿಲ್ಲ. ಉಪಾಹಾರವಿಲ್ಲದೆ ಕೊರೊನಾ ಸೋಂಕಿತರು ನರಳಾಟ ಅನುಭವಿಸಿದ್ದಾರೆ. 11 ಗಂಟೆಯಾದರೂ ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲವೆಂದು ಕೊವಿಡ್ ಕೇರ್ ಸೆಂಟರ್ ಮುಂಭಾಗದಲ್ಲಿ ಕುಳಿತ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಕ್​ಡೌನ್​ ನಡುವೆ ಸಂತೆ
ಆನೇಕಲ್: ಲಾಕ್​ಡೌನ್​ ಇದ್ದರೂ ಬನ್ನೇರುಘಟ್ಟದಲ್ಲಿ ವ್ಯಾಪಾರಿಗಳು ಸಂತೆ ನಡೆಸುತ್ತಿದ್ದಾರೆ. ಲಾಕ್​ಡೌನ್​ ಹಿನ್ನೆಲೆ ಯಾವುದೇ ಸಂತೆಗಳು ನಡೆಸದಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಆದರೆ ಇಂದು (ಮೇ 18) ಬನ್ನೇರುಘಟ್ಟದಲ್ಲಿ ಎಂದಿನಂತೆ ನಡೀತಿದೆ. ಸಂತೆ ನಡೆಯುತ್ತಿದ್ದರು ಬನ್ನೇರುಘಟ್ಟ ಪಂಚಾಯತಿ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಂತೆ ನಡೆಯುತ್ತಿರುವುದರಿಂದ ಸ್ಥಳೀಯರಿಗೆ ಕೊವಿಡ್ ಭೀತಿ ಎದುರಾಗಿದೆ.

ಇದನ್ನೂ ಓದಿ

ಅಂತ್ಯಸಂಸ್ಕಾರಕ್ಕೆ ಹೋದ 128 ಜನರಿಗೆ ಕೊರೊನಾ ಪಾಸಿಟಿವಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಅಂತ್ಯಸಂಸ್ಕಾರಕ್ಕೆ ಹೋದ 128 ಜನರಿಗೆ ಕೊರೊನಾ ಪಾಸಿಟಿವಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

(There are no corona testers at Bagalkot railway station)

sandhya thejappa
Follow Us