ವಿರೋಧ ಪಕ್ಷದ ನಾಯಕರು ಹೇಳಿರುವ ಮಾತು ಒಂದಾದರೂ ನಿಜವಾಗಿದೆಯಾ? ಕೆಎನ್ ರಾಜಣ್ಣ, ಸಚಿವ
ಮೊನ್ನೆ ಡಿಕೆ ಶಿವಕುಮಾರ್ ಅವರು ರಾಜಣ್ಣರನ್ನು ಭೇಟಿಯಾಗಲು ಬಂದಾಗ ಸಚಿವ ಕಚೇರಿಯಲ್ಲಿರಲಿಲ್ಲ. ಆಮೇಲೆ ಭೇಟಿಯಾದ್ರಾ ಸರ್ ಅಂತ ಕೇಳಿದರೆ ಭೇಟಿಯಾಗ್ತಾನೇ ಇರುತ್ತೇವೆ, ಅವತ್ತು ಆರೋಗ್ಯ ಸರಿಯಿಲ್ಲದ ಕಾರಣ ಡಾಕ್ಟರ್ ಹತ್ತಿರ ಹೋಗಿದ್ದೆ ಎಂದು ಹೇಳಿದರು. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಅದೇ ದಿನ ರಾಜಣ್ಣ ಅವರು ಸತೀಶ್ ಜಾರಕಿಹೊಳಿ ಮನೇಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು.
ಬೆಂಗಳೂರು, ಮಾರ್ಚ್ 7: ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ಸಹಕಾರ ಸಚಿವ ಕೆಎನ್ ರಾಜಣ್ಣ ಅವರಿಗೆ ಸಿದ್ದರಾಮಯ್ಯನವರು ಮಂಡಸಲಿರುವ ಕೊನೇ ಬಜೆಟ್ (last Budget) ಇದು ಅಂತ ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ ಎಂದಿದ್ದಕ್ಕೆ, ಅವರು ಹೇಳಿದ್ದು ಒಂದಾದರೂ ನಿಜವಾಗಿದೆಯಾ? ಭವಿಷ್ಯ ಹೇಳುವ ಕೆಲಸವನ್ನು ಕೋಡಿಹಳ್ಳಿ ಶ್ರೀಗಳು ಮಾಡಲಿ ಎಂದು ಹೇಳಿ, ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿಯವರು ಸಾಮಮನ್ನಾ ಘೋಷಣೆ ಮಾಡುವ ನಿರೀಕ್ಷೆ ತಾವು ಇಟ್ಟುಕೊಂಡಿಲ್ಲ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ: ಡಿಸಿಎಂ ಡಿಕೆ ಶಿವಕುಮಾರ್ಗೆ ಸಚಿವ ಕೆಎನ್ ರಾಜಣ್ಣ ಖಡಕ್ ತಿರುಗೇಟು