ಕೃಷಿ ಮಾರಾಟ ಮಂಡಳಿ 50 ಕೋಟಿ ರೂ ದುರ್ಬಳಕೆ: ತಲೆಮರೆಸಿಕೊಂಡಿದ್ದ ವಿಜಯ್ ಅರೆಸ್ಟ್

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ 50 ಕೋಟಿ ರೂ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಕಿಂಗ್‌ಪಿನ್ ವಿಜಯ್ ಆಕಾಶ್, ಪ್ರೇಮರಾಜ್, ದಿನೇಶ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2019ರಲ್ಲಿ ಮಂಡಳಿಯ 50 ಕೋಟಿ ರೂ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ FIR ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಈಗಾಗ್ಲೇ 15 ಜನರನ್ನು ಬಂಧಿಸಿದ್ದು, ಚಾರ್ಜ್‌ಶೀಟ್ […]

ಕೃಷಿ ಮಾರಾಟ ಮಂಡಳಿ 50 ಕೋಟಿ ರೂ ದುರ್ಬಳಕೆ: ತಲೆಮರೆಸಿಕೊಂಡಿದ್ದ ವಿಜಯ್ ಅರೆಸ್ಟ್
Edited By:

Updated on: Sep 02, 2020 | 4:46 PM

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ 50 ಕೋಟಿ ರೂ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಕಿಂಗ್‌ಪಿನ್ ವಿಜಯ್ ಆಕಾಶ್, ಪ್ರೇಮರಾಜ್, ದಿನೇಶ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

2019ರಲ್ಲಿ ಮಂಡಳಿಯ 50 ಕೋಟಿ ರೂ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ FIR ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.

ಈ ಪ್ರಕರಣ ಸಂಬಂಧ ಈಗಾಗ್ಲೇ 15 ಜನರನ್ನು ಬಂಧಿಸಿದ್ದು, ಚಾರ್ಜ್‌ಶೀಟ್ ಕೂಡ ಸಲ್ಲಿಸಲಾಗಿದೆ. ಆದರೆ ತಲೆಮರೆಸಿಕೊಂಡಿದ್ದ ಕಿಂಗ್‌ಪಿನ್ ವಿಜಯ್ ಆಕಾಶ್ ಹಾಗೂ ಆತನ ಸಹಚರರಾದ ಪ್ರೇಮರಾಜ್, ದಿನೇಶ್​ನನ್ನು ಈಗ ಬಂಧಿಸಲಾಗಿದೆ.

Published On - 8:30 am, Wed, 2 September 20