ಬಳ್ಳಾರಿ ಜಿಲ್ಲಾಸ್ಪ್ರತೆಯಲ್ಲಿ ಮೇಲಿಂದ ಮೇಲೆ ಬಾಣಂತಿರ ಮರಣ: ಸಾವಿನ ಸುತ್ತ ಅನುಮಾನಗಳ ಹುತ್ತ
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಾರದ ಅಂತರದಲ್ಲಿ ಮೂವರು ಬಾಣಂತಿಯರು ಸಿಜರಿನ್ ಹೆರಿಗೆ ಮಾಡಿಸಿಕೊಂಡ ನಂತರ ಮೃತಪಟ್ಟಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯ ಅಥವಾ ಔಷಧ ಪ್ರತಿಕ್ರಿಯೆಯಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಯಿಂದಾಗಿ ಸರ್ಕಾರ ಮೂವರು ತಜ್ಞ ವೈದ್ಯರ ತನಿಖಾ ತಂಡವನ್ನು ರಚಿಸಿದೆ.
ಬಳ್ಳಾರಿ, ನವೆಂಬರ್ 15: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಿಜರಿನ್ ಮಾಡಿಸಿಕೊಂಡಿದ್ದ ಮೂವರು ಬಾಣಂತಿಯರು ಒಂದು ವಾರದ ಅಂತರದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯ ಅಥವಾ ಔಷಧ ರಿಯಾಕ್ಷನ್ನಿಂದ ಸಾವು ಸಂಭವಿಸಿರಬಹುದು ಎಂಬು ಶಂಕಿಸಲಾಗಿದೆ. ಸದ್ಯ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ. ಇನ್ನು ಘಟನೆ ಹೊರಬರುತ್ತಿದ್ದಂತೆ ಮೂವರು ತಜ್ಞ ವೈದ್ಯರ ತನಿಖಾ ತಂಡ ರಚಿಸಿ, ತನಿಖೆಗೆ ಸರ್ಕಾರ ಆದೇಶಿಸಿದೆ.
ನವೆಂಬರ್ 9ರಂದು ಮಹಿಳೆಯರು ಸಿಜರಿನ್ ಮೂಲಕ ಹೆರಿಗೆ ಮಾಡಿಸಿಕೊಂಡಿದ್ದರು. ಅಂದೇ 7 ಜನ ಮಹಿಳೆಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆ ಪೈಕಿ ಮೋಕಾ ಗ್ರಾಮದ ನಂದಿನಿ ಮತ್ತು ಲಲಿತಮ್ಮ ಮರು ದಿನ ಅಂದರೆ ನ. 10ರಂದು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಬಾಲಕಿಗೆ ಜನಿಸಿದ್ದ ಶಿಶು ಶವವಾಗಿ ಪತ್ತೆ ಕೇಸ್: ಮೂವರ ಬಂಧನ, ಕೊಂದು ಹುಟ್ಟೇ ಇಲ್ಲ ಎಂದ ಅಜ್ಜಿ
ಕೂಡಲೇ ಐದು ಮಹಿಳೆಯರನ್ನ ಜಿಲ್ಲಾಸ್ಪತ್ರೆಯಿಂದ ವಿಮ್ಸ್ಗೆ ರವಾನಿಸಲಾಗಿದೆ. ವಿಮ್ಸ್ಗೆ ದಾಖಲಾದ ಮೂರು ದಿನದ ಬಳಿಕ 23 ವರ್ಷದ ರೋಜಾ ಎಂಬುವವರು ಸಾವನ್ನಪ್ಪಿದ್ದಾರೆ. ಒಟ್ಟು ಮೂವರು ತಾಯಂದಿರು ಮೃತಪಟ್ಟಿದ್ದು, ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎನ್ನಲಾಗಿದೆ.
ಘಟನೆಗಳು ಮರುಕಳಿದಂತೆ ಜಿಲ್ಲಾಸ್ಪತ್ರೆ ವೈದ್ಯರಿಗೆ ಸೂಚನೆ ನೀಡಿದ ಸಂಸದ ಈ. ತುಕಾರಾಂ
ಮೂವರು ಬಾಣಂತಿಯರು ಒಂದು ವಾರದ ಅಂತರದಲ್ಲೇ ಸಾವನ್ನಪ್ಪಿದ್ದ ಹಿನ್ನೆಲೆ ಜಿಲ್ಲಾಸ್ಪತ್ರೆಯ ಹೆರಗೆ ವಿಭಾಗಕ್ಕೆ ಸಂಸದ ಈ. ತುಕಾರಾಂ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂವರು ಬಾಣಂತಿಯರ ಸಾವು ನೋವು ತಂದಿದೆ. ಘಟನೆ ಬಗ್ಗೆ ವರದಿಗಾಗಿ ತನಿಖಾ ತಂಡ ಆಗಮಿಸಿದೆ. ಈ ಘಟನೆಗಳು ಮರುಕಳಿದಂತೆ ಕ್ರಮ ವಹಿಸಲು ಜಿಲ್ಲಾಸ್ಪತ್ರೆ ವೈದ್ಯರಿಗೆ ಸೂಚನೆ ನೀಡಿರುವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ನಾನು ಹಿಂದೆ ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ. ಸರ್ಕಾರ ವರದಿ ತಲುಪಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೃತ ಬಾಣಂತಿಯರ ಬಗ್ಗೆ ಮಾಹಿತಿ ಪಡೆದಿರುವೆ. ಪರಿಹಾರ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ಮಾಡುವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.