AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮತ್ತೊಂದು ಗ್ಯಾರಂಟಿ ಜಾರಿಯಾಗುತ್ತಾ? ಚರ್ಚೆಗೆ ಗ್ರಾಸವಾದ ವಿದ್ಯಾರ್ಥಿ ಪ್ರಶ್ನೆಗೆ ಡಿಸಿಎಂ ಕೊಟ್ಟ ಉತ್ತರ

ಗ್ಯಾರಂಟಿ.. ರಾಜ್ಯ ಸರ್ಕಾರದ ಮಹತ್ವದ ಯೋಜನೆ. ಪಂಚ ಗ್ಯಾರಂಟಿಗಳ ಮೂಲಕ ಸರ್ಕಾರ ಬಡವರಿಗೆ ಸಹಕಾರ ಆಗಲಿ ಎಂದು ಯತ್ನಿಸ್ತಿದೆ. ಉಚಿತ ಬಸ್ ಪ್ರಯಾಣ ಅಂದ್ರೆ ಶಕ್ತಿ ಯೋಜನೆ ಮಹಿಳೆಯರು ಅನುಕೂಲಕರವಾಗಿದೆ. ಈ ಮಧ್ಯೆ ಪುಟ್ಟ ಬಾಲಕನೊಬ್ಬ ಡಿಸಿಎಂ ಡಿಕೆಗೆ ಮುಗ್ಧವಾಗಿ ಪ್ರಶ್ನೆಯೊಂದನ್ನ ಕೇಳಿದ್ದಾನೆ. ಆತನ ಪ್ರಶ್ನೆಗೆ ಡಿಸಿಎಂ ಕೂಡ ನಗುತ್ತಲೇ ಉತ್ತರ ಕೊಟ್ಟಿದ್ದಾರೆ. ಆದ್ರೆ, ಡಿಸಿಎಂ ಕೊಟ್ಟ ಉತ್ತರ ಮತ್ತೊಂದು ಗ್ಯಾರಂಟಿ ಜಾರಿಗೆ ಬರುತ್ತಾ ಎನ್ನುವ ಚರ್ಚೆ ಶುರುವಾಗಿದೆ.

ಕರ್ನಾಟಕದಲ್ಲಿ ಮತ್ತೊಂದು ಗ್ಯಾರಂಟಿ ಜಾರಿಯಾಗುತ್ತಾ? ಚರ್ಚೆಗೆ ಗ್ರಾಸವಾದ ವಿದ್ಯಾರ್ಥಿ ಪ್ರಶ್ನೆಗೆ ಡಿಸಿಎಂ ಕೊಟ್ಟ ಉತ್ತರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 15, 2024 | 5:13 PM

ಬೆಂಗಳೂರು, (ನವೆಂಬರ್ 15): ಶಕ್ತಿ ಯೋಜನೆ.. ಮಹಿಳೆಯರ ಪ್ರಯಾಣಕ್ಕೆ ಶಕ್ತಿ ತುಂಬಿದ ಯೋಜನೆ. ಸಾವಿರಾರು ಮಹಿಳೆಯರು ಹಿಂದೆಂದೂ ನೋಡದ ಊರುಗಳನ್ನ ಕಣ್ತುಂಬಿಕೊಂಡಿದ್ದಾರೆ. ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣ ಅಂತೆಲ್ಲಾ ಯೋಜನೆಯ ಸದುಪಯೋಗ ಪಡೆಸಿಕೊಂಡಿದ್ದಾರೆ. ಇನ್ನು ಕೆಲವು ನಾರಿಯರು ತಿಂಗಳ ಪ್ರಯಾಣದ ಖರ್ಚು ಉಳಿಸಿ, ಅದನ್ನೇ ಮನೆಗಾಗಿ ಬಳಸಿಕೊಳ್ತಿದ್ದಾರೆ. ಇದರ ಮಧ್ಯ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆ ಹೊಸದೊಂದು ಚರ್ಚೆ ಹುಟ್ಟುಹಾಕಿದೆ. ಹೌದು…ಪುಟ್ಟ ಪೋರನ ಪ್ರಶ್ನೆಗೆ ಡಿಸಿಎಂ ಕೊಟ್ಟ ಉತ್ತರದಿಂದಾಗಿ ಗಂಡುಮಕ್ಕಳಿಗೂ ಉಚಿತ ಬಸ್ ವ್ಯವಸ್ಥೆ ಎನ್ನುವ ಚರ್ಚೆ ಜೋರಾಗಿದೆ.

ನಿನ್ನೆ (ನವೆಂಬರ್ 15) ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಲಾ ಮಕ್ಕಳ ಜೊತೆ ಸಂವಾದ ನಡೆಸಿದರು. ಡಿಸಿಎಂ ಡಿಕೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ 7ನೇ ತರಗತಿ ವಿದ್ಯಾರ್ಥಿಯೊಬ್ಬ ಡಿಸಿಎಂ ಎದುರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ವಾ ಅನ್ನೋ ಅರ್ಥದಲ್ಲಿ, ನಮ್ಮಮ್ಮ ನನ್ನ ಬಿಟ್ಟು ಬಸ್​ನಲ್ಲಿ ಓಡಾಡ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: ತಮಗೊಂದು ಗ್ಯಾರಂಟಿ ಯೋಜನೆ: ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಡಿಸಿಎಂ

7ನೇ ತರಗತಿ ವಿದ್ಯಾರ್ಥಿ ಚರಣ್ ಈ ಪ್ರಶ್ನೆ ಕೇಳ್ತಿದ್ದಂತೆ ಸಂವಾದ ಕಾರ್ಯಕ್ರಮದಲ್ಲಿ ನಗು ಮನೆ ಮಾಡಿತ್ತು. ಚರಣ್​ಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಿನಗೂ ಫ್ರೀ ಬೇಕಾ ಎಂದು ಕೇಳಿದರು. ಅಲ್ಲದೇ ಸರ್ಕಾರದ ಜತೆಗೆ ಚರ್ಚೆ ಮಾಡುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಿದ್ರು. ಮುಂದುವರಿದು ಒಂದು ವಯೋಮಿತಿಯವರೆಗೆ ಯೋಜನೆ ಮಾಡೋಣ ಎಂದರು.

ಶಾಲಾ ವಿದ್ಯಾರ್ಥಿ ಪ್ರಶ್ನೆಯೊಂದಕ್ಕೆ ಡಿಕೆ ಶಿವಕುಮಾರ್ ನೀಡಿದ ಉತ್ತರ ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಡಿಸಿಎಂ ಡಿಕೆ ಆಡಿರೋ ಮಾತು ಮತ್ತೊಂದು ಗ್ಯಾರಂಟಿ ಯೋಜನೆ ಬರುತ್ತಾ ಎಂಬ ಸಂಶಯ ಮೂಡಿಸಿದೆ. ವಿದ್ಯಾರ್ಥಿಗಳಿಗೆ ಏನಾದರೂ ಉಚಿತ ಬಸ್​ ಪ್ಲ್ಯಾನ್ ಗ್ಯಾರಂಟಿ ಜಾರಿಗೆ ತರುತ್ತಾರಾ ಎನ್ನುವ ಗುಸುಗುಸು ಚರ್ಚೆ ಶುರುವಾಗಿದೆ. ಈ ವಿಚಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಇದನ್ನು ತಳ್ಳಿಹಾಕಿದ್ದಾರೆ. ಪುರುಷರಿಗೆ ಉಚಿತ ಪ್ರಯಾಣ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಆಗಾಗಲೇ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ. ಬಹಳ ದಿನಗಳು ಉಳಿಯಲ್ಲ ಎಂಬ ಚರ್ಚೆ  ಮಧ್ಯ  ಪುಟ್ಟ ಪೋರ ಕೇಳಿರೋ ಪ್ರಶ್ನೆಗೆ ಡಿಸಿಎಂ ಕೊಟ್ಟ ಉತ್ತರ ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ