ಮೈಸೂರು: ನಾಗರಹೊಳೆ ಅರಣ್ಯದಲ್ಲಿ ಎರಡನೇ ಹಂತದ ಹುಲಿ ಗಣತಿ ಆರಂಭವಾಗಿದೆ. ಜೂನ್ ತಿಂಗಳ ಮೊದಲನೇ ವಾರದಲ್ಲಿ ಕಾರ್ಯಾರಂಭ ಮಾಡಲಾಗಿದೆ. ಹುಲಿ ಗಣತಿಯಲ್ಲಿ ಕ್ಯಾಮರಾ ಅಳವಡಿಸಿಟ್ಟು ಹುಲಿಯ ವಯಸ್ಸು ಮತ್ತು ಲಿಂಗ ಪತ್ತೆ ಮಾಡಲಾಗುತ್ತದೆ. ಕೊರೊನಾ ಹಾವಳಿ ಇರುವುದರಿಂದಾಗಿ ಸ್ವಯಂ ಸೇವಕರಿಗೆ ಅವಕಾಶ ಕಲ್ಪಿಸಲಾಗಿಲ್ಲ. ಒಟ್ಟು 840 ಚದರ ಕಿ.ಮೀ ವ್ಯಾಪ್ತಿ ಇರುವ ನಾಗರ ಹೊಳೆ ಅರಣ್ಯ ಗಣತಿ ನಡೆಲಾಗುತ್ತಿದೆ. ಈಗಾಗಲೇ ಹುಲಿ ಗಣತಿ ಕಾರ್ಯಾರಂಭಗೊಂಡಿದೆ.
ಪ್ರಥಮ ಹಂತದ ಗಣತಿ ಕಳೆದ ಮೇ ತಿಂಗಳಿನಲ್ಲಿ ಆರಂಭವಾಗಿ ಮುಕ್ತಾಯವಾಗಿತ್ತು. ಇದೀಗ ಎರಡನೇ ಹಂತದ ಗಣತಿಯನ್ನು ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಾಗಿದೆ. ಹುಲಿ ಗಣತಿ ಕಾರ್ಯದಲ್ಲಿ 450 ಸ್ವಯಂ ಚಾಲಿತ ಕ್ಯಾಮೆರಾ ಬಳಸಲಾಗಿದೆ. ಒಂದು ತಿಂಗಳ ಗಣತಿ ಕ್ಯಾಮೆರಾ ಡೇಟಾ ಆಧರಿಸಿ ಗಣತಿ ತಜ್ಞರು ಸ್ಟಾಟಿಸ್ಟಿಕಲ್ ನಿಯಮಾನುಸಾರ ಹುಲಿ ವಯಸ್ಸು ಹಾಗೂ ಲಿಂಗ ಪತ್ತೆಹಚ್ಚಲಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ 8 ವಲಯವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಬ್ಲಾಕ್ ಒಂದರಲ್ಲಿ ಹುಣಸೂರು, ಆನೆಚೌಕೂರು, ವೀರನಹೊಸಹಳ್ಳಿ, ಮೇಟಿಕುಪ್ಪೆ ವಲಯಗಳಿವೆ. ಬ್ಲಾಕ್ ಎರಡರಲ್ಲಿ ನಾಗರಹೊಳೆ, ಕಲ್ಲಹಳ್ಳ, ಡಿ.ಬಿ.ಕುಪ್ಪೆ, ಅಂತರಸಂತೆ ವಲಯಗಳಿವೆ.
ಇದನ್ನೂ ಓದಿ:
ಮಧ್ಯಪ್ರದೇಶದ ಉಮಾರಿಯ ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ವಾಹನ ಹರಿದು ಹುಲಿ ಸಾವು
7ವರ್ಷಗಳ ನಂತರ ಸೆರೆಯಾಯ್ತು ಹುಲಿಯ ಫೋಟೋ; ಕಣ್ಣಿಗೆ ಸ್ವಲ್ಪ ಕೆಲಸಕೊಟ್ಟು ಈ ಫೋಟೋದಲ್ಲಿ ಹುಲಿಯೆಲ್ಲಿದೆ ಹುಡುಕಿ!