ವಿಎ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಹಾವೇರಿ ಅಭ್ಯರ್ಥಿಯ ಕಳ್ಳಾಟ ಬಯಲು, 151 ಅಂಕ ಗಳಿಸಿದ್ಹೇಗೆ ಗೊತ್ತಾ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ ಲೆಕ್ಕಾಧಿಕಾರಿ (VA) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿ ಶಂಕರ್ ಬನ್ನೂರು ಅವರ ಫಲಿತಾಂಶದ ಸುತ್ತ ಭಾರಿ ಚರ್ಚೆ ಹಾಗೂ ಅನುಮಾನಗಳು ಎದ್ದಿದ್ದು, ಈ ಬಗ್ಗೆ ತನಿಖೆಯಲ್ಲಿ ಶಂಕರ್​​​​ ಕಳ್ಳಾಟ ಬಯಲಾಗಿದೆ. ಅಷ್ಟಕ್ಕೂ ಕಾನ್ಸ್​​​ಟೇಬಬಲ್ ಪರೀಕ್ಷೆಯಲ್ಲಿ 21 ಅಂಕ ಪಡೆದಿದ್ದ ಶಂಕರ್, ವಿಎ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿದ್ದು ಹೇಗೆ ಎನ್ನುವ ವಿವರ ಇಲ್ಲಿದೆ.

ವಿಎ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಹಾವೇರಿ ಅಭ್ಯರ್ಥಿಯ ಕಳ್ಳಾಟ ಬಯಲು, 151 ಅಂಕ ಗಳಿಸಿದ್ಹೇಗೆ ಗೊತ್ತಾ?
Shankar Bannur

Updated on: Nov 01, 2026 | 12:05 PM

ಹಾವೇರಿ, ನವೆಂಬರ್ 01: ವಿಎ (ಗ್ರಾಮ ಲೆಕ್ಕಾಧಿಕಾರಿ) ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿದ್ದ ಹಾವೇರಿಯ ಶಂಕರ್ ಬನ್ನೂರನ ಕಳ್ಳಾಟ ಬಯಲಾಗಿದೆ. ಕಾನ್ಸ್​​​ಟೇಬಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದ ಶಂಕರ್ ವಿಎ ಪರೀಕ್ಷೆಯಲ್ಲಿ 151 ಅಂಕ ಪಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆದೇಶದಂತೆ ಹಾವೇರಿ ಜಿಲ್ಲಾಧಿಕಾರಿ ನಡೆಸಿದ ತನಿಖೆಯಲ್ಲಿ ಶಂಕರ್, ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವುದು ಪತ್ತೆಯಾಗಿದ್ದು, ಹಾನಗಲ್ ಪೊಲೀಸರು ಶಂಕರ್ ನನ್ನು ವಶಕ್ಕೆ ಪಡೆದು ಶಿಗ್ಗಾಂವಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.

ಶಿಗ್ಗಾಂವಿ ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದ ಶಂಕರ್, ಗೂಗಲ್ ಲೆನ್ಸ್ ಆ್ಯಪ್ ಮೂಲಕ ಪ್ರಶ್ನೆ ಪ್ರಶ್ನೆ ಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರ ಬರೆದಿದ್ದ. ಈ ದೃಶ್ಯ ಸಿಸಿಟಿವ್ಹಿಯಲ್ಲಿ ಕ್ಯಾಮರಾ ಸೆರೆಯಾಗಿದೆ. ಇದೇದೇ ಸಾಕ್ಷಿಯನ್ನ ಆಧಾರಿಸಿ ಪೊಲೀಸರು, ಶಂಕರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೋಪ್ಪಿಕೊಂಡಿದ್ದಾನೆ. ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಆಧಾರ್ ಕಾರ್ಡ್ ಮಾತ್ರ ಕೇಳಿದರು. ಅದನ್ನ ತೋರಿಸಿ ಮೊಬೈಲ್ ಸಮೇತ ಕೊಠಡಿ ಒಳಗೆ ಹೋದೆ. ಕೊಠಡಿ ಕೊನೆಯ‌ ಡೆಸ್ಕ್ ನಲ್ಲಿ ನನ್ನ ನಂಬರ್ ಇತ್ತು. ಗೂಗಲ್ ಸಹಾಯದ ಒಎಂಆರ್ ಭರ್ತಿ ಮಾಡಿದೆ. ಯಾರು‌ ಗಮನಿಸಲಿಲ್ಲ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ನೋಡಿ: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25, ಗ್ರಾಮ ಲೆಕ್ಕಾಧಿಕಾರಿ ಎಕ್ಸಾಂನಲ್ಲಿ 151 ಅಂಕ: ವಿವಾದದ ಬಗ್ಗೆ ಶಂಕರ ಬನ್ನೂರು ಸ್ಪಷ್ಟನೆ

ಆದ್ರೆ, ಶಂಕರ್ ಅದು ಹೇಗೆ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದ? ಪರೀಕ್ಷಾ ಕೇಂದ್ರ ಪ್ರವೇಶಿಸುವ ವೇಳೆ ಯಾರು ತಪಾಸವಣೆ ಮಾಡಿಲ್ವಾ? ಕೇಂದ್ರದೊಳಗೆ ಮೊಬೈಲ್​ ಉಪಯೋಗಿಸುತ್ತಿದ್ರೂ ಯಾರು ನೋಡಿಲ್ವಾ? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದು, ಈ ಬಗ್ಗೆ ತನಿಖೆಯಲ್ಲಿ ಎಲ್ಲಾ ನಿಜಾಂಶ ಹೊರಬರಬೇಕಿದೆ.

ಕಷ್ಟುಪಟ್ಟು ಓದಿದ್ದಾಗಿ ಸ್ಪಷ್ಟನೆ ನೀಡಿದ್ದ ಶಂಕರ್

ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಶಂಕರ್ ಬನ್ನೂರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕಷ್ಟಪಟ್ಟು ಓದಿದ್ದಾಗ ಆತ್ಮವಿಶ್ವಾದಲ್ಲಿ ಹೇಳಿದ್ದ. ನಾನು ಪಿಯುಸಿ ಪರೀಕ್ಷೆ ಪಾಸಾಗಿದ್ದು 2012 ರಲ್ಲಿ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಾನು 2026 ರಲ್ಲಿ ಪಿಯುಸಿ ಮುಗಿಸಿದ್ದೇನೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ದಾಖಲೆಗಳಲ್ಲಿ ಯಾಕೆ ಆ ರೀತಿ ತಪ್ಪಾಗಿ ಬಿಂಬಿತವಾಗಿದೆಯೋ ನನಗೆ ತಿಳಿದಿಲ್ಲ. ಈ ಸಂಬಂಧ ಪೊಲೀಸರು ಮತ್ತು ತಹಶೀಲ್ದಾರ್‌ಗೆ ನನ್ನೆಲ್ಲಾ ಅಸಲಿ ದಾಖಲೆಗಳನ್ನು ಹಾಜರುಪಡಿಸಿದ್ದೇನೆ. ನಾನು ಅತ್ಯಂತ ಬಡ ಕುಟುಂಬದಿಂದ ಬಂದವನು. ಹೊಟೇಲ್ ಹಾಗೂ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುತ್ತಲೇ ಸತತವಾಗಿ ಓದಿಕೊಂಡಿದ್ದೇನೆ. ಇದುವರೆಗೆ 45 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ಹಲವು ಪರೀಕ್ಷೆಗಳಲ್ಲಿ ಸಂದರ್ಶನದವರೆಗೂ ಹೋಗಿದ್ದೆ, ಕೆಲವು ಪರೀಕ್ಷೆಗಳಲ್ಲಿ ದೈಹಿಕ ಪರೀಕ್ಷೆ ಕ್ಲಿಯರ್ ಆಗದೆ ನೌಕರಿ ಕೈತಪ್ಪಿತ್ತು. ನಿರಂತರ ಪರಿಶ್ರಮದಿಂದಲೇ ಈಗ ವಿಎ ಪರೀಕ್ಷೆಯಲ್ಲಿ ಟಾಪ್ ಅಂಕ ಗಳಿಸಿದ್ದೇನೆ ಎಂದಿದ್ದ.

ಇದನ್ನೂ ಓದಿ: ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ 25 ಪಡೆದಿದ್ದ ಅಭ್ಯರ್ಥಿಗೆ ವಿಎಒ ಎಕ್ಸಾಂನಲ್ಲಿ 151 ಅಂಕ:ತನಿಖೆಗೆ ಕೆಇಎ ಆದೇಶ

ಪ್ರಕರಣದ ಹಿನ್ನೆಲೆ

ಅಕ್ಟೋಬರ್ 04 ರಂದು ನಡೆದಿದ್ದ KSRP ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಪಡೆದ ಶಂಕರ ಬನ್ನೂರು, VAO ಪರೀಕ್ಷೆಯಲ್ಲಿ 151.25 ಅಂಕ ಪಡೆದು ರಾಜ್ಯಕ್ಕೆ ಟಾಫರ್ ಆಗಿದ್ದ.ಕಾನ್ಸ್​​ಟೇಬಲ್ ಪರೀಕ್ಷೆ ನಡೆದ ಕೇವಲ 15 ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ ಹೇಗೆ ಟಾಫರ್ ಆದ? ಎನ್ನುವ ಪ್ರಶ್ನಿಗಳು ಉದ್ಭವಿಸಿದ್ದವು. ಅಲ್ಲದೇ  ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ವ್ಯಕ್ತಿ, ವಿಎ ಪರೀಕ್ಷೆಯಲ್ಲಿ ರಾಜ್ಯಕ್ಕೇ ಟಾಪರ್ ಆಗಿದ್ದು ಹೇಗೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿ ತನಿಖೆಗೆ ಒತ್ತಾಯಿಸಲಾಗಿತ್ತು.  ಇದರಿಂದ ಎಚ್ಚೆತ್ತ ಕೆಇಎ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಹಾವೇರಿ ಡಿಸಿಗೆ ಪತ್ರ ಬರೆದಿತ್ತು. ಇದೀಗ ಹಾವೇರಿ ಡಿಸಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಬಯಲಾದ ಸತ್ಯಾಂಶ ಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us