Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮಿರಜ್ ರೈಲು ಸಂಚಾರ ಭಾಗಶಃ ರದ್ದು

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ವಲಯವು ಹಲವು ರೈಲು ಸೇವೆಗಳ ಭಾಗಶಃ ರದ್ದತಿಯನ್ನು ವಿಸ್ತರಿಸಿದೆ. ಕ್ಯಾಸಲ್ ರಾಕ್-ಲೋಂಡಾ ರೈಲ್ವೆ ವಿದ್ಯುದೀಕರಣ ಕಾಮಗಾರಿಗಳಿಂದಾಗಿ ಮಿರಜ್-ಕ್ಯಾಸಲ್ ರಾಕ್ ಮತ್ತು ಬೆಳಗಾವಿ-ಮಿರಜ್ ರೈಲುಗಳು ಭಾಗಶಃ ರದ್ದಾಗಿವೆ. ತಿರುಪತಿ-ಹುಬ್ಬಳ್ಳಿ ರೈಲು ಸೇವೆಗಳನ್ನೂ ಕೂಡ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮಿರಜ್ ರೈಲು ಸಂಚಾರ ಭಾಗಶಃ ರದ್ದು
ಬೆಳಗಾವಿ ರೈಲು ನಿಲ್ದದ
Follow us
ವಿವೇಕ ಬಿರಾದಾರ
|

Updated on:Feb 26, 2025 | 8:22 AM

ಹುಬ್ಬಳ್ಳಿ, ಫೆಬ್ರವರಿ 26: ವಿವಿಧ ಕಾರ್ಯಾಚರಣೆಯ ಕಾರಣಗಳಿಂದಾಗಿ, ಈಗಾಗಲೇ ತಾತ್ಕಾಲಿಕವಾಗಿ ರದ್ದುಗೊಂಡಿರುವ ಕೆಲವು ರೈಲು (Train) ಸೇವೆಗಳ ರದ್ದತಿಯನ್ನು ಮತ್ತು ಭಾಗಶಃ ರದ್ದತಿಯನ್ನು ವಿಸ್ತರಲಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ (South Western Railway zone) ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ಮಿರಜ್-ಕ್ಯಾಸಲ್ ರಾಕ್ ರೈಲುಗಳ ಭಾಗಶಃ ರದ್ದತಿ ವಿಸ್ತರಣೆ

ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಭಾಗದಲ್ಲಿ ನಡೆಯ ತಿರುವ ರೈಲ್ವೆ ವಿದ್ಯುದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ.

  1. ರೈಲು ಸಂಖ್ಯೆ 17333: ಮಿರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಮಾರ್ಚ್ 31 ರವರೆಗೆ ಲೋಂಡಾ-ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.
  2. ರೈಲು ಸಂಖ್ಯೆ 17334: ಕ್ಯಾಸಲ್ ರಾಕ್-ಮಿರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಮಾರ್ಚ್ 31 ರವರೆಗೆ ಕ್ಯಾಸಲ್ ರಾಕ್-ಲೋಂಡಾ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ಹೊರಡಲಿದೆ.

ಮೊದಲು, ಈ ರೈಲುಗಳನ್ನು ಫೆಬ್ರವರಿ 28 ರವರೆಗೆ ಭಾಗಶಃ ರದ್ದತಿಗಾಗಿ ಸೂಚಿಸಲಾಗಿತ್ತು, ಅದನ್ನು ಈಗ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.

11 ದಿನಗಳ ಕಾಲ ಬೆಳಗಾವಿ-ಮಿರಜ್ ಕಾಯ್ದಿರಿಸದ ವಿಶೇಷ ರೈಲು ಭಾಗಶಃ ರದ್ದು

ಕುಡಚಿ-ಉಗಾರ ಖುರ್ದ್ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳನ್ನು 11 ದಿನಗಳ ಕಾಲ ಕುಡಚಿ-ಮಿರಜ್ ನಿಲ್ದಾಣಗಳ ನಡುವೆ ಭಾಗಶಃ ರದ್ದು ಗೊಳಿಸಲಾಗಿದೆ.

  1. ರೈಲು ಸಂಖ್ಯೆ 07303: ಬೆಳಗಾವಿ-ಮಿರಜ್ ಡೈಲಿ ಕಾಯ್ದಿರಿಸದ ವಿಶೇಷ ರೈಲು, ಫೆಬ್ರವರಿ 27 ರಿಂದ ಮಾರ್ಚ್ 9 ರವರೆಗೆ, ಕುಡಚಿ-ಮಿರಜ್ ನಡುವೆ ಭಾಗಶಃ ರದ್ದಾಗಿರುತ್ತದೆ. ಮತ್ತು ಈ ರೈಲು ಕುಡಚಿಯಲ್ಲಿ ಕೊನೆಗೊಳ್ಳಲಿದೆ.
  2. ರೈಲು ಸಂಖ್ಯೆ 07304: ಮಿರಜ್-ಬೆಳಗಾವಿ ಡೈಲಿ ಕಾಯ್ದಿರಿಸದ ವಿಶೇಷ ರೈಲು, ಫೆಬ್ರವರಿ 27 ರಿಂದ ಮಾರ್ಚ್ 9 ರವರೆಗೆ ಮಿರಜ್-ಕುಡಚಿ ನಡುವೆ ಭಾಗಶಃ ರದ್ದಾಗಿರುತ್ತದೆ. ಮತ್ತು ಈ ರೈಲು ಮಿರಜ್ ಬದಲಿಗೆ ಕುಡಚಿಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮದ್ದೂರು-ಮೈಸೂರು ನಡುವೆ ರೈಲು ಸಂಚಾರ ಭಾಗಶಃ ರದ್ದು

ತಾತ್ಕಾಲಿಕ ರದ್ದು

  1. ರೈಲು ಸಂಖ್ಯೆ 57405:ತಿರುಪತಿ ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 7 ರವರೆಗೆ ಮತ್ತೆ ತಾತ್ಕಾಲಿಕವಾಗಿ ರದ್ದುಗೊಳ್ಳಲಿದೆ. ಈ ರೈಲನ್ನು ಮೊದಲು ಫೆಬ್ರವರಿ 28, 2025 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.
  2. ರೈಲು ಸಂಖ್ಯೆ 57406: ಕದಿರಿದೆವರವಲ್ಲಿ-ತಿರುಪತಿ ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 8 ರವರೆಗೆ ರದ್ದುಗೊಳ್ಳಲಿದೆ. ಈ ರೈಲು ಮೊದಲು ಮಾರ್ಚ್ 1 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.
  3. ರೈಲು ಸಂಖ್ಯೆ 57401: ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ, ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 7 ರವರೆಗೆ ರದ್ದಾಗಿರುತ್ತದೆ. ಈ ರೈಲು ಮೊದಲು ಫೆಬ್ರವರಿ 28 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.
  4. ರೈಲು ಸಂಖ್ಯೆ 57402: ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 8 ರವರೆಗೆ ರದ್ದಾಗಿರುತ್ತದೆ. ಈ ರೈಲು ಮೊದಲು ಮಾರ್ಚ್ 1 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 am, Wed, 26 February 25

ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್