AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ಗಮನಕ್ಕೆ: ಮದ್ದೂರು-ಮೈಸೂರು ನಡುವೆ ರೈಲು ಸಂಚಾರ ಭಾಗಶಃ ರದ್ದು

ನೈಋತ್ಯ ರೈಲ್ವೆ ಎಲಿಯೂರು ರೈಲು ನಿಲ್ದಾಣದಲ್ಲಿ ಕಾಮಗಾರಿ ನಡೆಸಲಿದೆ. ಹೀಗಾಗಿ, ಬೆಂಗಳೂರು-ಮೈಸೂರು ಮೆಮು ರೈಲುಗಳು ಮದ್ದೂರು ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಲಿವೆ. ರೈಲು ಸಂಖ್ಯೆ 66551, 66552, 06525, 06526, 66553 ಮತ್ತು 66580 ರೈಲುಗಳು ರದ್ದಾಗಲಿವೆ. ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಗಳನ್ನು ಪರಿಷ್ಕರಿಸಲು ಸೂಚಿಸಲಾಗಿದೆ.

ಪ್ರಯಾಣಿಕರ ಗಮನಕ್ಕೆ: ಮದ್ದೂರು-ಮೈಸೂರು ನಡುವೆ ರೈಲು ಸಂಚಾರ ಭಾಗಶಃ ರದ್ದು
ಮೈಸೂರು ರೈಲು ನಿಲ್ದಾಣ
ವಿವೇಕ ಬಿರಾದಾರ
|

Updated on: Feb 15, 2025 | 9:38 AM

Share

ಮೈಸೂರು, ಫೆಬ್ರವರಿ 15: ನೈಋತ್ಯ ರೈಲ್ವೆಯು (SWR) ಎಲಿಯೂರು ರೈಲು ನಿಲ್ದಾಣದಲ್ಲಿ ಕಾಮಗಾರಿ ಕೈಗೊಂಡಿದ್ದರಿಂದ ಬೆಂಗಳೂರು-ಮೈಸೂರು ಮಧ್ಯೆ ಸಂಚರಿಸುವ ಮೆಮು ರೈಲುಗಳು (Bengaluru-Mysore MEMU Train) ಮದ್ದೂರು ಮತ್ತು ಮೈಸೂರು ನಡುವೆ ಭಾಗಶಃ ರದ್ದಾಗಲಿವೆ. ಮಾರ್ಚ್ 3ರಂದು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಈ ಕೆಳಗಿನ ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತವೆ.

  1. ರೈಲು ಸಂಖ್ಯೆ 66551: ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಲ್ಲಿ ಕೊನೆಗೊಳ್ಳುತ್ತದೆ.
  2. ರೈಲು ಸಂಖ್ಯೆ 66552: ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮೈಸೂರು ಬದಲು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಹೊರಡಲಿದೆ.
  3. ರೈಲು ಸಂಖ್ಯೆ 06525: ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಲ್ಲಿ ಕೊನೆಗೊಳ್ಳುತ್ತದೆ.
  4. ರೈಲು ಸಂಖ್ಯೆ 06526: ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಮೈಸೂರಿನ ಬದಲು ಮದ್ದೂರಿನಿಂದ ಹೊರಡಲಿದೆ.
  5. ರೈಲು ಸಂಖ್ಯೆ 66553: ಕೆಎಸ್ಆರ್ ಬೆಂಗಳೂರು-ಮೈಸೂರು ಮೆಮು ರೈಲು ಮದ್ದೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮದ್ದೂರಿನಲ್ಲಿ ಕೊನೆಗೊಳ್ಳಲಿದೆ.
  6. ರೈಲು ಸಂಖ್ಯೆ 66580: ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು ಮತ್ತು ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಇದು ಮೈಸೂರಿನ ಬದಲು ಮದ್ದೂರಿನಿಂದ ನಿಗದಿತ ಸಮಯದಲ್ಲಿ ಹೊರಡಲಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ-ವಿಜಯಪುರ ರೈಲು ರದ್ದು

ಈ ಕೆಳಗಿನ ರೈಲುಗಳ ಮಾರ್ಗ ನಿಯಂತ್ರಣ:

  1. ರೈಲು ಸಂಖ್ಯೆ 16209: ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್ ರೈಲು ಪ್ರಯಾಣವನ್ನು ಫೆಬ್ರವರಿ 16, 21 ಮತ್ತು 23 ರಂದು ಮಾರ್ಗ ಮಧ್ಯದಲ್ಲಿ 75 ನಿಮಿಷಗಳ ಕಾಲ ಮತ್ತು ಫೆಬ್ರವರಿ 28 ಮತ್ತು ಮಾರ್ಚ್ 2 ರಂದು 105 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
  2. ರೈಲು ಸಂಖ್ಯೆ 06270: ಎಸ್​ಎಮ್​ವಿಟಿ ಬೆಂಗಳೂರು-ಮೈಸೂರು ಪ್ಯಾಸೆಂಜರ್ ವಿಶೇಷ ರೈಲು ಪ್ರಯಾಣವನ್ನು ಫೆಬ್ರವರಿ 18, 19, 25 ರಂದು ಮತ್ತು ಮಾರ್ಚ್ 1 ಮತ್ತು 3 ರಂದು ಮಾರ್ಗ ಮಧ್ಯದದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
  3. ರೈಲು ಸಂಖ್ಯೆ 16218: ಸಾಯಿನಗರ ಶಿರಡಿ-ಮೈಸೂರು ಎಕ್ಸ್‌ಪ್ರೆಸ್ ರೈಲು ಪ್ರಯಾಣವನ್ನು ಫೆಬ್ರವರಿ 19, 2025 ರಂದು ಮಾರ್ಗ ಮಧ್ಯದಲ್ಲಿ 35 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
  4. ರೈಲು ಸಂಖ್ಯೆ 22817: ಹೌರಾ-ಮೈಸೂರು ಎಕ್ಸ್‌ಪ್ರೆಸ್ ರೈಲು ಪ್ರಯಾಣವನ್ನು ಫೆಬ್ರವರಿ 28 ರಂದು  ಮಾರ್ಗದಲ್ಲಿ 45 ನಿಮಿಷಗಳ ಕಾಲ ನಿರ್ಬಂಧಿಸಲಾಗುತ್ತದೆ.
  5. ರೈಲು ಸಂಖ್ಯೆ 22136: ರೇಣಿಗುಂಟ-ಮೈಸೂರು ಎಕ್ಸ್‌ಪ್ರೆಸ್ ರೈಲು ಪ್ರಯಾಣವನ್ನು ಫೆಬ್ರವರಿ 22 ಮತ್ತು ಮಾರ್ಚ್ 1 ರಂದು ಮಾರ್ಗದಲ್ಲಿ ಮಧ್ಯ ಕ್ರಮವಾಗಿ 45 ನಿಮಿಷ ಮತ್ತು 150 ನಿಮಿಷಗಳ ಕಾಲ ನಿರ್ಬಂಧಿಸಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ