ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ಹುಬ್ಬಳ್ಳಿ-ವಿಜಯಪುರ ರೈಲು ರದ್ದು
ನೈಋತ್ಯ ರೈಲ್ವೆ ವಲಯವು ಹುಬ್ಬಳ್ಳಿ-ವಿಜಯಪುರ ರೈಲು ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ. ಫೆಬ್ರವರಿ 16 ರಿಂದ 26 ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆಗಳಿವೆ. ಕೆಲವು ರೈಲುಗಳು ಸಂಪೂರ್ಣವಾಗಿ ರದ್ದಾಗಿದ್ದರೆ, ಇನ್ನು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಮುನ್ನ ರೈಲ್ವೆ ವೆಬ್‌ಸೈಟ್ ಭೇಟಿ ನೀಡಿ ಮಾಹಿತಿ ಪಡೆಯಿರಿ.

ಹುಬ್ಬಳ್ಳಿ, ಫೆಬ್ರವರಿ 14: ವಿಜಯಪುರದ ಮುಗಳೊಳ್ಳಿ–ಜಡ್ರಾಮಕುಂಟಿ–ಆಲಮಟ್ಟಿ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ (Train) ಸಂಚಾರವನ್ನು ರದ್ದು ಮತ್ತು ಭಾಗಶಃ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ವಲಯ (SWR) ತಿಳಿಸಿದೆ.
ರೈಲು ಸಂಚಾರ ರದ್ದು
ಎಸ್‌ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ–ಸೋಲಾಪುರ ಡೈಲಿ ಪ್ಯಾಸೆಂಜರ್ (56906) ಫೆಬ್ರವರಿ 17 ರಿಂದ 25 ರವರೆಗೆ, ಸೋಲಾಪುರ–ಧಾರವಾಡ ಡೈಲಿ ಪ್ಲಾಸೆಂಜರ್ ಸ್ಪೆಷಲ್ ಫೆಬ್ರವರಿ 18 ರಿಂದ 26 ರವರೆಗೆ, ಸೋಲಾಪುರ–ಹೊಸಪೇಟೆ ಡೈಲಿ ಎಕ್ಸ್ ಪ್ರೆಸ್ (11415) ಫೆ 25 ರಂದು ಮತ್ತು ಫೆಬ್ರವರಿ 26 ರಂದು ಹೊಸಪೇಟೆ–ಸೋಲಾಪುರ ಡೈಲಿ ಎಕ್ಸ್ ಪ್ರೆಸ್ (11416) ರೈಲುಗಳ ಪ್ರಯಾಣವನ್ನು ತಾತ್ಕಾಲಿಕವಾಗಿ ರದ್ದು ರದ್ದುಗೊಳಿಸಲಾಗಿದೆ.
ರೈಲುಗಳ ಸಂಚಾರ ಭಾಗಶಃ ರದ್ದು
- ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06545: ಯಶವಂತಪುರ–ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಗದಗ–ವಿಜಯಪುರ ನಿಲ್ದಾಣಗಳ ನಡುವೆ ಫೆಬ್ರವರಿ16 ರಿಂದ 24 ರವರೆಗೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ವಿಜಯಪುರ ನಿಲ್ದಾಣದ ಬದಲಾಗಿ ಗದಗದಲ್ಲಿ ಕೊನೆಗೊಳ್ಳಲಿದೆ. ರೈಲು ಸಂಖ್ಯೆ 06546 ವಿಜಯಪುರ–ಯಶವಂತಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ17 ರಿಂದ 25 ರವರೆಗೆ ವಿಜಯಪುರದ ಬದಲಿಗೆ ಗದಗ ನಿಲ್ದಾಣದಿಂದ ಹೊರಡಲಿದೆ. ವಿಜಯಪುರ–ಗದಗ ನಿಲ್ದಾಣಗಳ ನಡುವಿನ ಪ್ರಯಾಣ ಭಾಗಶಃ ರದ್ದುಗೊಂಡಿದೆ.
- ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17307 ಮೈಸೂರು–ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ರೈಲು ವಿಜಯಪುರ ಮತ್ತು ಬಾಗಲಕೋಟಿ ನಿಲ್ದಾಣಗಳ ನಡುವೆ ಫೆಬ್ರವರಿ16 ರಿಂದ 24 ರವರೆಗೆ ಭಾಗಶಃ ರದ್ದಾಗಿದೆ. ಇದು ವಿಜಯಪುರದಲ್ಲಿ ಕೊನೆಗೊಳ್ಳುತ್ತದೆ. ರೈಲು ಸಂಖ್ಯೆ 17308 ಬಾಗಲಕೋಟೆ–ಮೈಸೂರು ಬಸವ ಎಕ್ಸ್ ಪ್ರೆಸ್ ರೈಲು ಫೆಬ್ರವರಿ 17 ರಿಂದ 25 ರವರೆಗೆ ಬಾಗಲಕೋಟೆ ನಿಲ್ದಾಣದ ಬದಲು ವಿಜಯವುರದಿಂದ ಹೊರಡಲಿದೆ. ಬಾಗಲಕೋಟಿ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.
- ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್–ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಫೆಬ್ರವರಿ 16 ರಿಂದ 24 ರವರೆಗೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬಾಗಲಕೋಟೆಯಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ರೈಲು ಸಂಖ್ಯೆ 07377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಫೆಬ್ರವರಿ 17 ರಿಂದ 25 ರವರೆಗೆ ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.
- ರೈಲು ಸಂಖ್ಯೆ 06919 ಎಸ್ಎಸ್ಎಸ್ ಹುಬ್ಬಳ್ಳಿ–ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಫೆಬ್ರವರಿ 17 ರಿಂದ 25 ರವರೆಗೆ ಭಾಗಶಃ ರದ್ದಾಗಿದೆ. ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳುತ್ತದೆ. ರೈಲು ಸಂಖ್ಯೆ 06920 ವಿಜಯಪುರ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ವಿಜಯಪುರದ ಬದಲು ಬಾಗಲಕೋಟೆಯಿಂದ ಪ್ರಾರಂಭವಾಗಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
ರೈಲು ತಡವಾಗಿ ಪ್ರಾರಂಭ: ಫೆಬ್ರವರಿ 25 ರಂದು ರೈಲು ಸಂಖ್ಯೆ 11140 ಹೊಸಪೇಟೆ–ಸಿಎಸ್ಎಂಟಿ ಮುಂಬೈ ಎಕ್ಸ್‌ಪ್ರೆಸ್ ರೈಲು ಹೊಸಪೇಟೆ ನಿಲ್ದಾಣದಿಂದ 2 ಗಂಟೆ ತಡವಾಗಿ ಪ್ರಾರಂಭವಾಗಲಿದೆ.
ರೈಲು ಮಾರ್ಗ ಮಧ್ಯ ನಿಯಂತ್ರಣ: ಫೆಬ್ರವರಿ 25 ರಂದು ಪಂಢರಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16536 ಪಂಢರಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಶೀಘ್ರ: ಬೆಳಗಾವಿವರೆಗೆ ವಿಸ್ತರಣೆಗೆ ಸಚಿವ ಅಶ್ವಿನಿ ವೈಷ್ಣವ್ ಸಮ್ಮತಿ
ಆಲಮಟ್ಟಿ ನಿಲ್ದಾಣದಲ್ಲಿ ನಿಲುಗಡೆ ಇಲ್ಲ
- ರೈಲು ಸಂಖ್ಯೆ 16587: ಯಶವಂತಪುರ–ಬಿಕಾನೇರ್ ದ್ವಿ–ಸಾಪ್ತಾಹಿಕ ಎಕ್ಸ್‌ಪ್ರೆಸ್ರೈ
- ಲು ಸಂಖ್ಯೆ 17319: ಎಸ್ಎಸ್ಎಸ್ ಹುಬ್ಬಳ್ಳಿ–ಹೈದರಾಬಾದ್ ಡೈಲಿ ಎಕ್ಸ್‌ಪ್ರೆಸ್ರೈ
- ಲು ಸಂಖ್ಯೆ 17320: ಹೈದರಾಬಾದ್–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸಪ್ರೆಸ್
- ರೈಲು ಸಂಖ್ಯೆ 16588: ಬಿಕಾನೇರ್–ಯಶವಂತಪುರ ದ್ವಿಸಾಪ್ತಾಹಿಕ ಎಕ್ಸ್‌ಪ್ರೆಸ್ರೈ
- ಲು ಸಂಖ್ಯೆ 17324: ಬನಾರಸ್–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ರೈ
- ಲು ಸಂಖ್ಯೆ 11416: ಹೊಸಪೇಟೆ–ಸೋಲಾಪುರ ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 16535: ಮೈಸೂರು–ಪಂಢರಪುರ ಗೋಲ್ ಗುಂಬಜ್ ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 07330: ವಿಜಯಪುರ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ರೈ
- ಲು ಸಂಖ್ಯೆ 11139 : ಸಿಎಸ್ಎಂಟಿ ಮುಂಬೈ–ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 11415: ಸೋಲಾಪುರ–ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ರೈ
- ಲು ಸಂಖ್ಯೆ 56905: ಸೋಲಾಪುರ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ
- ರೈಲು ಸಂಖ್ಯೆ 11140: ಹೊಸಪೇಟೆ–ಸಿಎಸ್ಎಂಟಿ ಮುಂಬೈ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 16536: ಪಂಢರಪುರ–ಮೈಸೂರು ಗೋಲ್ ಗುಂಬಜ್ ಡೈಲಿ ಎಕ್ಸ್‌ಪ್ರೆಸ್ರೈ
- ಲು ಸಂಖ್ಯೆ 07329: ಎಸ್ಎಸ್ಎಸ್ ಹುಬ್ಬಳ್ಳಿ–ವಿಜಯಪುರ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 17323: ಎಸ್ಎಸ್ಎಸ್ ಹುಬ್ಬಳ್ಳಿ–ಬನಾರಸ್ ಸಾಪ್ತಾಹಿಕ ಎಕ್ಸ್‌ಪ್ರೆಸ್ರೈ
- ರೈಲು ಸಂಖ್ಯೆ 16217: ಮೈಸೂರು–ಸಾಯಿನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್
ಜಡ್ರಾಮಕುಂಟಿ ನಿಲ್ದಾಣದಲ್ಲಿ ನಿಲುಗಡೆ ಇಲ್ಲ
- ರೈಲು ಸಂಖ್ಯೆ 11416: ಹೊಸಪೇಟೆ–ಸೋಲಾಪುರ ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 56905: ಸೋಲಾಪುರ–ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್
- ರೈಲು ಸಂಖ್ಯೆ 11415: ಸೋಲಾಪುರ–ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 07322: ಧಾರವಾಡ–ಸೋಲಾಪುರ ಡೈಲಿ ಪ್ಯಾಸೆಂಜರ್ ಸ್ಪೆಷಲ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ