Mahakumbh Mela: ಪ್ರಯಾಗ್ರಾಜ್ನ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಿಲ್ಲ: ಅಶ್ವಿನಿ ವೈಷ್ಣವ್
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಭಾರಿ ಜನದಟ್ಟಣೆಯಿಂದಾಗಿ ನಗರದಲ್ಲಿ ಭಾರಿ ಸಂಚಾರ ದಟ್ಟಣೆಯುಂಟಾಗಿದೆ. ಅದೇ ಸಮಯದಲ್ಲಿ ಪ್ರಯಾಗ್‌ರಾಜ್ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಕೆಲವರು ಸುಳ್ಳು ಸುದ್ದಿ ಹರುಡುತ್ತಿದ್ದಾರೆ, ಎಂದಿನಂತೆಯೇ ರೈಲು ನಿಲ್ದಾಣ ಕಾರ್ಯ ನಿರ್ವಹಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ನಿಲ್ದಾಣದಲ್ಲಿ ಅತಿಯಾದ ಒತ್ತಡ ಮತ್ತು ಅವ್ಯವಸ್ಥೆಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿರುವುದಾಗು ಕೆಲವರು ವರದಿ ಮಾಡಿದ್ದರು, . ಈಗ ಪ್ರಯಾಣಿಕರು ತಮ್ಮ ರೈಲು ಹಿಡಿಯಲು ಪ್ರಯಾಗ್‌ರಾಜ್ ಜಂಕ್ಷನ್‌ಗೆ ಹೋಗಬೇಕಾಗುತ್ತದೆ. ಜನಸಂದಣಿಯನ್ನು ನಿಯಂತ್ರಿಸಿಸಲಾಗುತ್ತಿದ್ದು, ರೈಲ್ವೆ ನಿಲ್ದಾಣ ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ರೈಲುಗಳು ಮತ್ತು ಇತರ ವ್ಯವಸ್ಥೆಗಳನ್ನು ಸಹ ಪರಿಗಣಿಸಲಾಗುತ್ತಿದೆ. ಆಡಳಿತವು ಪ್ರಯಾಣಿಕರಿಗೆ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದೆ. 2025 ರ ಮಹಾ ಕುಂಭ ಮೇಳದಲ್ಲಿ ಭಕ್ತರು ನಿರಂತರವಾಗಿ ಸೇರುತ್ತಿರುವುದರಿಂದ ರೈಲು ನಿಲ್ದಾಣಗಳಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ಪ್ರಯಾಗ್‌ರಾಜ್‌ಗೆ ಹೋಗಲು ವಿಶೇಷ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದು, ಇದರಿಂದಾಗಿ ಅನೇಕ ಅನಿರೀಕ್ಷಿತ ಘಟನೆಗಳು ಮುನ್ನೆಲೆಗೆ ಬರುತ್ತಿವೆ.
ಅಶ್ವಿನಿ ವೈಷ್ಣವ್ ಪೋಸ್ಟ್
Prayagraj junction functioning properly. Don’t believe in rumours of junction closed. pic.twitter.com/oydoQ16rHC
— Ashwini Vaishnaw (@AshwiniVaishnaw) February 10, 2025
ಮಹಾಕುಂಭ ಮೇಳದಲ್ಲಿ ಸಾಮಾನ್ಯ ದಿನಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಭಕ್ತರ ಗುಂಪು ಸೇರುತ್ತಿದೆ. ಭಾನುವಾರ ರಾತ್ರಿ 8 ಗಂಟೆಯವರೆಗೆ 1.57 ಕೋಟಿಗೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಅದೇ ಸಮಯದಲ್ಲಿ, ಜನವರಿ 13 ರಿಂದ ಫೆಬ್ರವರಿ 9 ರವರೆಗೆ ಒಟ್ಟು 43.57 ಕೋಟಿ ಭಕ್ತರು ಗಂಗಾ ಸ್ನಾನ ಮಾಡಿದ್ದಾರೆ.
ದೂರದ ಪಾರ್ಕಿಂಗ್ ಸ್ಥಳವು ಶೇಕಡಾ 50 ರಷ್ಟು ತುಂಬಿದೆ. ಹತ್ತಿರದ ಪಾರ್ಕಿಂಗ್ ಸ್ಥಳವು ಸಣ್ಣ ಪಾರ್ಕಿಂಗ್ ಸ್ಥಳವಾಗಿದೆ, ಆದರೆ ದೂರದ ಪಾರ್ಕಿಂಗ್ ಸ್ಥಳವು ದೊಡ್ಡದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Mon, 10 February 25