Fact Check: ಉದ್ಯೋಗಾವಕಾಶ ಇದೆಯೆಂದು ಸರ್ವ ಶಿಕ್ಷಣ ಅಭಿಯಾನ ವೆಬ್‌ಸೈಟ್ ತೆರೆಯುವ ಮುನ್ನ ಎಚ್ಚರ
ಭಾರತ ಸರ್ಕಾರದ ಈ ಅಭಿಯಾನವು ಈಗ ಆನ್‌ಲೈನ್ ವಂಚನೆಗೆ ಬಲಿಯಾಗಿದೆ. ವಾಸ್ತವವಾಗಿ, ವಿವಿಧ ಸರ್ಕಾರಿ ಉದ್ಯೋಗಗಳಿಗೆ ಜಾಹೀರಾತುಗಳನ್ನು sarvashikshaabhiyan.com ಎಂಬ ನಕಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಈ ಉದ್ಯೋಗಗಳಲ್ಲಿ, ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಕಚೇರಿ ಸಿಬ್ಬಂದಿ, ಪ್ಯೂನ್ ಮುಂತಾದ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.

ಸರ್ವ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ದೇಶಾದ್ಯಂತ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಇದರ ಉದ್ದೇಶ. ಈ ಅಭಿಯಾನದಡಿಯಲ್ಲಿ, ಶಾಲೆಗಳಿಲ್ಲದ ಸ್ಥಳಗಳಲ್ಲಿ ಹೊಸ ಶಾಲೆಗಳನ್ನು ತೆರೆಯಲಾಗುತ್ತದೆ. ಇದಲ್ಲದೆ, ಅಸ್ತಿತ್ವದಲ್ಲಿರುವ ಶಾಲೆಗಳ ಸೌಲಭ್ಯಗಳನ್ನು ಸಹ ಸುಧಾರಿಸಲಾಗಿದೆ. ಭಾರತದಲ್ಲಿ ಶಿಕ್ಷಣವನ್ನು ವಿಸ್ತರಿಸಲು ಮತ್ತು ಪ್ರತಿಯೊಬ್ಬರಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡಲು ಕೇಂದ್ರ ಸರಕಾರ ಇದನ್ನು ಪ್ರಾರಂಭಿಸಿದೆ.
ಆದರೆ, ಭಾರತ ಸರ್ಕಾರದ ಈ ಅಭಿಯಾನವು ಈಗ ಆನ್‌ಲೈನ್ ವಂಚನೆಗೆ ಬಲಿಯಾಗಿದೆ. ವಾಸ್ತವವಾಗಿ, ವಿವಿಧ ಸರ್ಕಾರಿ ಉದ್ಯೋಗಗಳಿಗೆ ಜಾಹೀರಾತುಗಳನ್ನು sarvashikshaabhiyan.com ಎಂಬ ನಕಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಈ ಉದ್ಯೋಗಗಳಲ್ಲಿ, ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಕಚೇರಿ ಸಿಬ್ಬಂದಿ, ಪ್ಯೂನ್ ಮುಂತಾದ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.
ಈ ವೆಬ್‌ಸೈಟ್ ಅನ್ನು ಓಪನ್ ಮಾಡಿ ನೋಡಿದಾಗ ಥೇಟ್ ಸರ್ಕಾರಿ ಪೋರ್ಟಲ್‌ನಂತೆ ಕಂಡರೂ, ಜನರನ್ನು ಮೋಸಗೊಳಿಸುವುದು ಮತ್ತು ಅವರ ವೈಯಕ್ತಿಕ ಮಾಹಿತಿಯನ್ನು ಕದಿಯುವುದು ಇದರ ಉದ್ದೇಶವಾಗಿದೆ. ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯ ಜೊತೆಗೆ, ಪ್ರವೇಶ ಪತ್ರ, ಉತ್ತರ ಕೀ ಮತ್ತು ಫಲಿತಾಂಶದ ಲಿಂಕ್‌ಗಳನ್ನು ಸಹ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಆದರೆ ಇದೆಲ್ಲ ಫೇಕ್.
ವೆಬ್‌ಸೈಟ್‌ನ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು, ನಾವು ಮೊದಲು ಭಾರತ ಸರ್ಕಾರದ ಅಧಿಕೃತ ರಾಷ್ಟ್ರೀಯ ಪೋರ್ಟಲ್ india.gov.in ನಲ್ಲಿ ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ. ಈ ಸಮಯದಲ್ಲಿ ಸರ್ವ ಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ samagra.education.gov.in ಎಂದು ನಮಗೆ ತಿಳಿದುಬಂದಿತು. ಇದನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುತ್ತದೆ.
Fact Check: ಗ್ಲಾಮರಸ್ ಲುಕ್ನಲ್ಲಿ ಮಹಾಕುಂಭದ ವೈರಲ್ ಹುಡುಗಿ ಮೊನಾಲಿಸಾ?
ಸರ್ವ ಶಿಕ್ಷಾ ಅಭಿಯಾನದ ಬಗ್ಗೆ ವಿವರವಾದ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಈ ಮಾಹಿತಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒದಗಿಸಿದೆ.
ಇದಲ್ಲದೆ ನಮಗೆ ಶಿಕ್ಷಣ ಸಚಿವಾಲಯದ ಪತ್ರಿಕಾ ಪ್ರಕಟಣೆಯೂ ಸಿಕ್ಕಿದೆ. ಅಮಾಯಕ ಅರ್ಜಿದಾರರನ್ನು ವಂಚಿಸುವ ಸಲುವಾಗಿ ಈ ಇಲಾಖೆಯ ಯೋಜನೆಗಳಿಗೆ ಹೋಲುವ ಹೆಸರುಗಳಲ್ಲಿ (www.sarvashiksha.online, https://samagra.shikshaabhiyan.co.in, https://shikshaabhiyan.org.in ನಂತಹ) ಹಲವಾರು ವೆಬ್‌ಸೈಟ್‌ಗಳನ್ನು ರಚಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ಬರೆಯಲಾಗಿದೆ. ಈ ವೆಬ್‌ಸೈಟ್‌ಗಳು ಆಸಕ್ತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ ಎಂದು ಬರೆದಿದೆ ಮತ್ತು ಮೂಲ ವೆಬ್‌ಸೈಟ್‌ನಂತೆಯೇ ವೆಬ್‌ಸೈಟ್‌ನ ವಿನ್ಯಾಸ, ವಿಷಯ ಮತ್ತು ಪ್ರಸ್ತುತಿಯ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ದಾರಿ ತಪ್ಪಿಸುತ್ತಿವೆ ಮತ್ತು ಅರ್ಜಿ ಸಲ್ಲಿಸಲು ಪ್ರತಿಕ್ರಿಯಿಸುವವರಿಂದ ಹಣವನ್ನು ಬೇಡಿಕೆ ಇಡುತ್ತಿವೆ ಎಂದು ಹೇಳಿದೆ.
ಈ ವೆಬ್‌ಸೈಟ್‌ಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಮನಕ್ಕೆ ಬಂದಿದ್ದರೂ, ಉದ್ಯೋಗದ ಭರವಸೆ ನೀಡುವ ಮತ್ತು ನೇಮಕಾತಿ ಪ್ರಕ್ರಿಯೆಗೆ ಹಣ ಕೇಳುವ ಇಂತಹ ವೆಬ್‌ಸೈಟ್‌ಗಳು/ಸಾಮಾಜಿಕ ಮಾಧ್ಯಮ ಖಾತೆಗಳು ಇನ್ನೂ ಹೆಚ್ಚಿರಬಹುದು. ಸಾರ್ವಜನಿಕರು ಅಂತಹ ವೆಬ್‌ಸೈಟ್‌ಗಳಲ್ಲಿ ಉದ್ಯೋಗಾವಕಾಶಗಳಿಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಬೇಕು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ/ವೈಯಕ್ತಿಕ ವಿಚಾರಣೆ/ದೂರವಾಣಿ ಕರೆ/ಇ-ಮೇಲ್ ಮಾಡುವ ಮೂಲಕ ವೆಬ್‌ಸೈಟ್‌ಗಳ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬರೆದುಕೊಂಡಿದೆ.
ಹೀಗಾಗಿ sarvashikshaabhiyan.com ಡೊಮೇನ್‌ನಿಂದ ಚಾಲನೆಯಲ್ಲಿರುವ ವೆಬ್‌ಸೈಟ್ ನಕಲಿ ಎಂದು ನಾವು ಫ್ಯಾಕ್ಟ್ ಚೆಕ್ ಮೂಲಕ ಖಚಿತ ಪಡಿಸುತ್ತೇವೆ. ಈ ವೆಬ್‌ಸೈಟ್ ಉದ್ಯೋಗ ಜಾಹೀರಾತುಗಳ ಮೂಲಕ ಜನರನ್ನು ವಂಚಿಸುತ್ತಿದೆ ಮತ್ತು ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಹೀಗಾಗಿ ಎಚ್ಚರದಿಂದಿರಿ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




