Fact Check: ಗ್ಲಾಮರಸ್ ಲುಕ್‌ನಲ್ಲಿ ಮಹಾಕುಂಭದ ವೈರಲ್ ಹುಡುಗಿ ಮೊನಾಲಿಸಾ?
Mahakumbh 2025 Monalisa Fact Check: ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಪ್ಪು ಬಣ್ಣದ ಉಡುಗೆ ಧರಿಸಿರುವ ಇವರು ಫೋಟೋಕ್ಕೆ ಪೋಸ್ ನೀಡಿ ಜನರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಥ್ರೆಡ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಮಹಾ ಕುಂಭದ ಮೊನಾಲಿಸಾಳ ಹೊಸ ಲುಕ್ ವೈರಲ್ ಆಗಿದೆ’’ ಎಂದು ಬರೆದುಕೊಂಡಿದ್ದಾರೆ.

ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿಯೊಬ್ಬಾಕೆಯ ಚಿತ್ರವೊಂದು ಸಖತ್ ವೈರಲ್ ಆಗಿತ್ತು. ಆಕೆಯ ಸೌಂದರ್ಯಕ್ಕೆ ವಿಶೇಷವಾಗಿ ಆಕೆಯ ಸೆಳೆಯುವ ಕಣ್ಣುಗಳಿಗೆ ಜನ ಮಾರು ಹೋಗಿದ್ದರು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಸಾಮಾಜಿಕ ಜಾಲತಾಣದಲ್ಲಿ ಆ ಚೆಲುವೆ ಫೇಮಸ್ ಆಗಿದ್ದರು. ಕಳೆದು ಕೆಲವು ದಿನಗಳಿಂದ ಈ ಹುಡುಗಿ ಮತ್ತೊಮ್ಮೆ ಸಾಕಷ್ಟು ಸುದ್ದಿಯಾಗುತ್ತಿದ್ದಾಳೆ. ಸದ್ಯ ಇವರ ಒಂದು ಸಣ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಪ್ಪು ಬಣ್ಣದ ಉಡುಗೆ ಧರಿಸಿರುವ ಇವರು ಫೋಟೋಕ್ಕೆ ಪೋಸ್ ನೀಡಿ ಜನರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಥ್ರೆಡ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಮಹಾ ಕುಂಭದ ಮೊನಾಲಿಸಾಳ ಹೊಸ ಲುಕ್ ವೈರಲ್ ಆಗಿದೆ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋದಲ್ಲಿರು ಇರುವುದು ಮೊನಾಲಿಸವೇ ಅಲ್ಲ. ಬದಲಾಗಿ ಬಾಲಿವುಡ್ ನಟಿ ವಮಿಕಾ ಗಬ್ಬಿ ಆಗಿದ್ದಾರೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ನಾವು ಯೂಟ್ಯೂಬ್ನಲ್ಲಿ ಇದೇ ರೀತಿಯ ಶಾರ್ಟ್ ವಿಡಿಯೋವನ್ನು ಕಂಡುಕೊಂಡೆವು. ಆ ವಿಡಿಯೋಗೆ ವಾಮಿಕಾ ಗಬ್ಬಿ ಮತ್ತು ಅವರ ಕಣ್ಣುಗಳು ಎಂಬ ಶೀರ್ಷಿಕೆ ನೀಡಲಾಗಿತ್ತು.
ಹೆಚ್ಚಿನ ತನಿಖೆ ನಡೆಸಿದಾಗ, ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ರೀತಿಯ ಮತ್ತೊಂದು ವಿಡಿಯೋ ಕೂಡ ಕಂಡುಬಂದಿದೆ. ಓನ್ಲಿ ಬಾಲಿವುಡ್ ಅಪ್ಲೋಡ್ ಮಾಡಿರುವ ಇದೇ ವಿಡಿಯೋಕ್ಕೆ, ವಾಮಿಕಾ ಗಬ್ಬಿ ತನ್ನ ಸೌಂದರ್ಯವತೆ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ.
View this post on Instagram
ಇದೇ ವಿಡಿಯೋವನ್ನು ಅನೇಕ ಮಾಧ್ಯಮಗಳು ಕೂಡ ಹಂಚಿಕೊಂಡಿದ್ದು ಎಲ್ಲದರಲ್ಲೂ ಈ ವಿಡಿಯೋದಲ್ಲಿ ಇರುವುದು ವಾಮಿಕಾ ಗಬ್ಬಿ ಎಂದೇ ಬರೆಯಲಾಗಿದೆ. ಹೀಗಾಗಿ ವೈರಲ್ ವಿಡಿಯೋ ಸುಳ್ಳು ಎಂಬುದು ಟಿವಿ9 ಕನ್ನಡ ಸತ್ಯ ಪರಿಶೀಲನೆಯಿಂದ ಸ್ಪಷ್ಟವಾಗಿದೆ. ಈ ವಿಡಿಯೋ ಮಹಾಕುಂಭದಲ್ಲಿ ರುದ್ರಾಕ್ಷ ಮಾಲೆಗಳನ್ನು ಮಾರುವ ಹುಡುಗಿ ಮೊನಾಲಿಸಾಳದ್ದಲ್ಲ, ಬದಲಾಗಿ ಬಾಲಿವುಡ್ ನಟಿ ವಾಮಿಕಾ ಗಬ್ಬಿಯದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.
Fact Check: ನಟಿ ರಶ್ಮಿಕಾ ಮಂದಣ್ಣ ಆರೋಗ್ಯ ಸ್ಥಿತಿ ಗಂಭೀರ?: ವೈರಲ್ ಫೋಟೋದ ಸತ್ಯಾಂಶ ಏನು?
ಬಾಲಿವುಡ್ನಿಂದ ಬಂತು ಆಫರ್:
ಇದೀಗ ಮಹಾಕುಂಭದ ವೈರಲ್ ಹುಡುಗಿ ಮೊಸಾಲಿಸಾ ಮೇಲೆ ಬಾಲಿವುಡ್ ಕಣ್ಣು ಬಿದ್ದಿದೆ. ಯುವತಿಗೆ ಬಾಲಿವುಡ್ನಿಂದ ಆಫರ್ ಬಂದಿದೆ. ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರ, ಆ ವೈರಲ್ ಯುವತಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಡೈರಿ ಆಫ್ ಮಣಿಪುರ್ ಹೆಸರಿನ ಸಿನಿಮಾ ಅನ್ನು ಸನೋಜ್ ಮಿಶ್ರ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ವೈರಲ್ ಹುಡುಗಿಯೇ ನಾಯಕಿ. ಇದಕ್ಕಾಗಿ ಮೊನಾಲಿಸಾ ಲುಕ್ ಟೆಸ್ಟ್ ಸಹ ನಡೆಸಲಾಗಿದೆ. ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು, ಮೇಕೊವರ್ ವಿಡಿಯೋ ಇತ್ತೀಚಿಗೆ ವೈರಲ್ ಆಗಿತ್ತು. ಇದು ಮಾತ್ರವೇ ಅಲ್ಲದೆ ಮಹಾಕುಂಭದ ಮೊನಾಲಿಸಾಗೆ ನಟನಾ ತರಬೇತಿಯನ್ನು ಸಹ ಕೊಡಿಸಲಾಗುತ್ತಿದೆ.
ಸದ್ಯ ಈ ಅದ್ಭುತ ಅವಕಾಶವನ್ನು ಯುವತಿ ಸದುಪಯೋಗ ಪಡಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಯಾಕೆಂದರೆ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರಿಗೆ ಸಿನಿಮಾ ಅವಕಾಶಗಳು ಸಿಗುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಬೀದಿಯಲ್ಲಿ ಹಾಡು ಹಾಡುತ್ತಿದ್ದ ರಾನು ಮಂಡಲ್ಗೆ ಬಾಲಿವುಡ್ ಸಿನಿಮಾ ಹಾಡು ಹಾಡುವ ಅವಕಾಶ ನೀಡಲಾಗಿತ್ತು. ಇದರಿಂದಾಗಿ ರಾನು ಮಂಡಲ್ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿಬಿಟ್ಟಿದ್ದರು.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Sat, 8 February 25